Friday , November 15 2019
Breaking News
Home / ರಾಷ್ಟ್ರೀಯ / ಭಯೋತ್ಪಾದನೆಗೆ ಓವೈಸಿ ಕಾರಣ ಎಂದ ಅಯೋಧ್ಯೆಯ ಅರ್ಚಕ

ಭಯೋತ್ಪಾದನೆಗೆ ಓವೈಸಿ ಕಾರಣ ಎಂದ ಅಯೋಧ್ಯೆಯ ಅರ್ಚಕ

ಸಂದೇಶ ಇ-ಮ್ಯಾಗಝಿನ್: ಭಾರತದಲ್ಲಿ ಭಯೋತ್ಪಾದನೆ, ದೇಶ ವಿರೋಧಿ ಘೋಷಣೆ ಹೆಚ್ಚಲು ಕಾರಣ ಓವೈಸಿಯಂತಹ ಜನರಾಗಿದ್ದಾರೆ. ಇವರು ಇಸ್ಲಾಮ್ ಧರ್ಮಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಅಯೋಧ್ಯೆಯ ಚವನ್ನಿ ಮಂದಿರದ ಅರ್ಚಕ ಪರಮ ಹಂಸ ದಾಸ್ ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿ ಭಯೋತ್ಪಾದಕರಿಗೆ ನೆಲೆ ಸಿಗಲು ಪ್ರಮುಖ ಕಾರಣ ಓವೈಸಿ. ಇಂತಹ ಕುಖ್ಯಾತ ಜನರು ದೇಶ ವಿರೋಧಿ ಘೋಷಣೆ ಹೆಚ್ಚಲೂ ಕಾರಣರಾಗಿದ್ದಾರೆ. ಇವರು ಇಸ್ಲಾಮ್ ಧರ್ಮಕ್ಕೂ ಕೆಟ್ಟ ಹೆಸರು ತರುತ್ತಿದ್ದಾರೆ. ಈ ಜನರು ಭಾರತದಲ್ಲಿ ವಾಸಿಸುತ್ತಾರಾದರೂ ಇವರು ಈಗಲೂ ದೇಶ ವಿರೋಧಿ ಸಿದ್ಧಾಂತವನ್ನು ತಲೆಯಲ್ಲಿ ತುಂಬಿಸಿಕೊಂಡಿದ್ದಾರೆ. ಇಂತಹ ಜನರಿಗೆ ಭಾರತೀಯರು ತಮ್ಮನ್ನು ಸುರಕ್ಷಿತರನ್ನಾಗಿಸಬೇಕಾಗಿದೆ ಎಂದು ಪರಮ ಹಂಸ ದಾಸ್ ಹೇಳಿದ್ದಾರೆ.

ಮೋದಿ ಅವರು ಅಧಿಕಾರಕ್ಕೆ ಹಿಂದಿರುಗಿರುವುದರ ಬಗ್ಗೆ ಮುಸ್ಲಿಮರು ಭಯಪಡಬಾರದು ಇಲ್ಲಿ ಪ್ರತಿ ಪ್ರಜೆಯೂ ದೇಶದಲ್ಲಿ ಗೌರವಾನ್ವಿತರಾಗಿದ್ದಾರೆ ಎಂದು ಓವಿಸಿಯವರು ನೀಡಿದ ಹೇಳಿಕೆ ಪ್ರತಿಕ್ರಿಯೆಯಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅರ್ಚಕ ಪರಮ ಹಂಸ ದಾಸ್ “ಮುಸ್ಲಿಮರು ಈ ದೇಶದಲ್ಲಿ ಯಾವತ್ತೂ ಭಯದಲ್ಲೇ ಜೀವಿಸುತ್ತಿದ್ದಾರೆ ಎಂದು ಓವೈಸಿಯವರು ಹೇಳಲು ಹೊರಟಂತಿದೆ ಎಂದು ಹೇಳಿದರು.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *