Thursday , June 20 2019
Breaking News
Home / ಗಲ್ಫ್ ಸುದ್ದಿ / ಯುಎಇ: ಆನ್‌ಲೈನ್ ಭಿಕ್ಷಾಟನೆ ಪ್ರಕರಣದಲ್ಲಿ ಮಹಿಳೆ ಬಂಧನ

ಯುಎಇ: ಆನ್‌ಲೈನ್ ಭಿಕ್ಷಾಟನೆ ಪ್ರಕರಣದಲ್ಲಿ ಮಹಿಳೆ ಬಂಧನ

ಸಂದೇಶ ಇ-ಮ್ಯಾಗಝಿನ್: ನಾನೊಬ್ಬಳು ವಿಫಲ ಮದುವೆಯ ಸಂತ್ರಸ್ತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಅನುಕಂಪ ಗಿಟ್ಟಿಸಿ ಹಣ ಪೀಕುತ್ತಿದ್ದ ಚಾಲಾಕಿ ಮಹಿಳೆಯೊಬ್ಬಳನ್ನು ಯುಎಇ ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆ ಫೆಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್‌ನಲ್ಲಿ ಬೇರೆ ಬೇರೆ ಹೆಸರಿನಲ್ಲಿ ಜನರಿಂದ ಸಹಾಯ ಅಭ್ಯರ್ಥನೆ ಮಾಡಿ ಕೇವಲ 17 ದಿನದಲ್ಲಿ 183,500 ಯುಎಇ ದಿರ್‌ಹಂ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿ ಕೊಂಡಿದ್ದಾಳೆ ಎಂದು ಯುಎಇ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಬೇರೆ ಬೇರೆ ಖಾತೆಗಳ ಮೂಲಕ ತನ್ನ ಮಕ್ಕಳ ಚಿತ್ರವನ್ನು ಪ್ರಕಟಿಸಿ ನಾನೊಬ್ಬಳು ವಿಫಲ ವೈವಾಹಿಕ ಸಂಬಂಧದ ಸಂತ್ರಸ್ತಳಾಗಿದ್ದು, ನನ್ನ ಮಕ್ಕಳನ್ನು ಸಾಕುವ ಸಂಪೂರ್ಣ ಜವಾಬ್ದಾರಿ ಇದೀಗ ನನ್ನ ಮೇಲೆ ಇದೆ. ನಮಗೆ ಯಾರೂ ಗತಿಯಿಲ್ಲ. ಇವರನ್ನು ಬೆಳೆಸಲು ನನಗೆ ಹಣದ ಅವಶ್ಯಕತೆ ಇದೆ ಎಂದು ಜನರಿಗೆ ಕನಿಕರ ಬರುವ ಹಾಗೆ ಪೋಸ್ಟ್ ಮಾಡಿ ಸಹೃದಯಿ ಜನರಿಂದ ಮೋಸದಲ್ಲಿ ಹಣ ಪಡೆಯುತ್ತಿದ್ದಳು ಎನ್ನಲಾಗಿದೆ.

ಆಕೆಯ ಪತಿ ಈ ವಿಷಯ ಅರಿತಾಗ ವಿಷಯ ಬೆಳಕಿಗೆ ಬಂದಿದೆ. ತನ್ನ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಭಿಕ್ಷಾಟನೆ ಮಾಡಲಾಗುತ್ತಿದೆ ಎಂಬುದನ್ನು ಸಂಬಂಧಿಗಳ ಮುಖಾಂತರ ಅರಿತ ಮಹಿಳೆಯ ಪತಿ, ನನ್ನ ಹೆಂಡತಿ ನನ್ನ ಮಕ್ಕಳನ್ನು ಬಳಸಿ ಭಿಕ್ಷೆ ಬೇಡುತ್ತಿದ್ದಾಳೆ. ಇದರಿಂದಾಗಿ ನನ್ನ ಗೌರವ ಹಾಳಾಗಿದೆ ನನ್ನ ಕುಟುಂಬದಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

Check Also

ದುಬೈ: ಭೀಕರ ಬಸ್ ಅಪಘಾತ: 8 ಭಾರತೀಯರೂ ಸೇರಿದಂತೆ 17 ಮಂದಿ ಸಾವು

001ಸಂದೇಶ ಇ-ಮ್ಯಾಗಝಿನ್: ಒಮಾನಿನಿಂದ ಬಂದಿದ್ದ ಪ್ರವಾಸಿ ಬಸ್ ಒಂದು ದುಬೈಯಲ್ಲಿ ರಸ್ತೆಯ ಸೈನ್ ಬೋರ್ಡ್‌ಗೆ ಡಿಕ್ಕಿ ಹೊಡೆದ ಪರಿಣಾಮ 8 …

Leave a Reply

Your email address will not be published. Required fields are marked *