Friday , April 3 2020
Breaking News
Image Credit: https://www.dailymail.co.uk
Home / ಅಂತಾರಾಷ್ಟ್ರೀಯ / ಲಂಡನ್: ಖಲೀಫಾರ ಕಾಲದ 1200 ವರ್ಷ ಹಳೆಯ ಬಂಗಾರದ ನಾಣ್ಯ ದಾಖಲೆ ಬೆಲೆಗೆ ಮಾರಾಟ

ಲಂಡನ್: ಖಲೀಫಾರ ಕಾಲದ 1200 ವರ್ಷ ಹಳೆಯ ಬಂಗಾರದ ನಾಣ್ಯ ದಾಖಲೆ ಬೆಲೆಗೆ ಮಾರಾಟ

ಸಂದೇಶ ಮ್ಯಾಗಝಿನ್ (sandeshamagazine.in): ಉಮಯ್ಯಿದ್ ಖಿಲಾಫತ್ ನ ಕ್ರಿ.ಶ 723ರ ಕಾಲದ್ದೆನ್ನಲಾದ ಬಂಗಾರದ ದಿನಾರ್ ನಾಣ್ಯವೊಂದು ಲಂಡನ್ ನ ಹರಾಜು ಕೇಂದ್ರವಾದ ಮಾರ್ಟನ್ ಆಂಡ್ ಈಡನ್ ನಲ್ಲಿ ಮೊನ್ನೆ 3.7 ಮಿಲಿಯನ್ ಪೌಂಡ್ ಬೆಲೆಗೆ ಮಾರಾಟವಾಗಿದೆ. ಅಂದರೆ ನಮ್ಮ ಭಾರತದ ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ ಸುಮಾರು 33.64 ಕೋಟಿ ರೂಪಾಯಿ ಮೌಲ್ಯಕ್ಕೆ ಈ ಚಿನ್ನದ ದಿನಾರ್ ನಾಣ್ಯ ಹರಾಜಾಗಿದೆ.

ಜಗತ್ತಿನಲ್ಲಿ ಇಂತಹ 12 ಬಂಗಾರದ ದಿನಾರ್ ಮಾತ್ರ ಲಭ್ಯವಿದೆ ಎನ್ನಲಾಗಿದೆ. ಆರಂಭದಲ್ಲಿ ನಾಣ್ಯವನ್ನು ಹರಾಜಿಗಿಟ್ಟ ಅನಾಮಿಕ ವ್ಯಾಪಾರಿ ಈ ನಾಣ್ಯಕ್ಕೆ 1.6 ಮಿಲಿಯನ್ ಪೌಂಡ್ ಬೆಲೆ ಸಿಗಬಹುದು ಎಂದು ಅಂದಾಜಿಸಿದ್ದರು. ಆದರೆ ಗ್ರಾಹಕ ಇದನ್ನು 3.7 ಮಿಲಿಯನ್ ಪೌಂಡ್‌ಗೆ ಖರೀದಿಸಿ ಅಚ್ಚರಿ ಮೂಡಿಸಿದ್ದಾನೆ.

ಪ್ರವಾದಿ ಮೊಹಮ್ಮದ್(ಸ) ರ ಮರಣದ ನಂತರ ಅವರ ಸಂಗಾತಿಯಾಗಿದ್ದ ಮುಆವಿಯಾ ಇಬ್ನ್ ಅಬೀ ಸುಪ್ಯಾನ್ ಅವರು ಈ ಉಮಯ್ಯಿದ್ ಖಿಲಾಫತನ್ನು ಡಮಾಸ್ಕಸ್ ನಗರವನ್ನು ಕೇಂದ್ರವಾಗಿಸಿ ಸ್ಥಾಪಿಸಿದ್ದರು. ಕ್ರಿ.ಶ 661 ರಿಂದ 750ರ ವರೆಗೆ ಈ ಖಿಲಾಫತ್ ಜಾರಿಯಲ್ಲಿತ್ತು.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *