Monday , September 16 2019
Breaking News
Home / ಓದುಗರ ಲೇಖನ / ಮುಸ್ಲಿಮರೇ ಓಲೈಕೆಯ ರಾಜಕಾರಣಕ್ಕೆ ವೇದಿಕೆ ಸಜ್ಜಾಗುತ್ತಿದೆ ಎಚ್ಚರವಿರಲಿ!

ಮುಸ್ಲಿಮರೇ ಓಲೈಕೆಯ ರಾಜಕಾರಣಕ್ಕೆ ವೇದಿಕೆ ಸಜ್ಜಾಗುತ್ತಿದೆ ಎಚ್ಚರವಿರಲಿ!

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೀಗ ರಾಜಕೀಯ ಪಕ್ಷಗಳ ಹೇಳಿಕೆಗಳು ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಲು ಆರಂಭಿಸಿವೆ, ಈ ಬಾರಿ ಪಕ್ಷಗಳು ಮುಸ್ಲಿಮರ ಮೀಸಲಾತಿ ವಿಷಯದ ಮೇಲೆ ಪೊಳ್ಳು ಭರವಸೆಗಳನ್ನು ನೀಡಲು ಸಜ್ಜಾಗಿ ನಿಂತಿವೆ. ಈ ಬಗ್ಗೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆಯಾದ ಮಾಯಾವತಿಯವರು ತನ್ನ 63 ನೇ ಹುಟ್ಟುಹಬ್ಬದಂದು ತನ್ನ ಖಾಸಗಿ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಇದೀಗ ಎಸ್ಪಿ ಮತ್ತು ಬಿಎಸ್ಪಿ ಹಳೆಯ ವೈಷಮ್ಯಗಳನ್ನು ಮರೆಯುವ ಮೂಲಕ, ತಮ್ಮ ನಡುವೆ ಒಕ್ಕೂಟವನ್ನು ಬಲಪಡಿಸಿವೆ. ಮತ್ತು 2019 ರಲ್ಲಿ ನಡೆಯುವ ಲೋಕ ಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವಿಗೆ ಎದುರು ನೋಡುತ್ತಿವೆ. ಈ ನಿಟ್ಟಿನಲ್ಲಿ ಯಶಸ್ವಿಯ ಬೆನ್ನು ಹತ್ತುತ್ತಾ ಮುಸ್ಲಿಮರನ್ನು ಮತ್ತು ಹಿಂದುಳಿದವರೊಂದಿಗೆ ಸಮಾಲೋಚಿಸಲು ಪ್ರಯತ್ನಿಸುತ್ತಿದೆ. ತಕ್ಷಣದ ಪ್ರತಿಫಲವೆಂಬಂತೆ ಮಾಯಾವತಿಯವರು, ಮುಸ್ಲಿಮರಿಗೂ 10 ಪ್ರತಿಶತ ಮೀಸಲಾತಿಯನ್ನು ನೀಡಬೇಕು ಹಾಗೂ ಜುಮಾ ಪ್ರಾರ್ಥನೆಗೆ ಯಾವುದೇ ತರಹದ ಅಡ್ಡಿಯನ್ನು ಮಾಡಬಾರದೆಂದು ಹೇಳಿದ್ದಾರೆ.

ಸ್ವಾತಂತ್ರ್ಯದ ನಂತರ, ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರ ಸರಾಸರಿ ಪಾಲ್ಗೊಳ್ಳುವಿಕೆಯು ಸುಮಾರು 33 ರಷ್ಟಿತ್ತು. ಅದು ಈಗ 2 ರಿಂದ 3 ಶೇಕಡಾಕ್ಕೆ ಇಳಿದಿದೆ. ಈ ಅಂತರವನ್ನು ತೆಗೆದು ಹಾಕಬೇಕು. ಇತ್ತೀಚೆಗೆ, ಮೋದಿಯವರು 10 ಪ್ರತಿಶತದಷ್ಟು ಉನ್ನತ ಜಾತಿಯವರ ಮೀಸಲಾತಿಗೆ ಬೆಂಬಲವನ್ನು ಘೋಷಿಸಿದ್ದಾರೆ. ಅದನ್ನು ನಾನು ಬೆಂಬಲಿಸುತ್ತೇನೆ. ಜೊತೆಗೆ ಕೇಂದ್ರ ಸರ್ಕಾರವು ಮುಸ್ಲಿಮರಿಗೂ 10 ಶೇಕಡಾ ಮೀಸಲಾತಿಯನ್ನು ನೀಡಬೇಕೆಂದು ಅವರು ಹೇಳಿದ್ದಾರೆ. ಇದನ್ನು ಓಲೈಕೆಯ ರಾಜಕಾರಣವೆನ್ನದೇ ಇನ್ನೇನೆನ್ನಬೇಕು ?

-ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

Check Also

ಮುಹಮ್ಮದ್ (ಸ) ರವರ ವಿವಾಹಗಳು, ವಿವಾದಗಳು ಮತ್ತು ವಿಮರ್ಶಕರು (ಭಾಗ -2)

002ಪ್ರವಾದಿ ಮುಹಮ್ಮದ್ ಸ ಆಯಿಷಾ ಎಂಬ ಕನ್ಯೆಯನ್ನು ವಿವಾಹ ಆಗಿದ್ದಾರೆ ಮತ್ತು ಆಯಿಷಾರವರು ಪ್ರವಾದಿ ವರ್ಯರಿಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯರು …

Leave a Reply

Your email address will not be published. Required fields are marked *