Friday , April 3 2020
Breaking News
note ban pic
Home / ಲೇಖನ / ನೋಟ್ ಬ್ಯಾನ್ ಭಾರತಿಯರಿಗೆ ದಕ್ಕಿದ್ದೇನು?

ನೋಟ್ ಬ್ಯಾನ್ ಭಾರತಿಯರಿಗೆ ದಕ್ಕಿದ್ದೇನು?

ನೋಟ್ ಬ್ಯಾನ್ ಎಂಬ ಕರಾಳ ಇತಿಹಾಸಕ್ಕೆ ಇಂದಿಗೆ ಮೂರು ವರ್ಷ. ಇದರಿಂದ ಜನಸಾಮಾನ್ಯರಿಗಾದ ಲಾಭ ಏನಂದ್ರೆ… ಏನೂ ಇಲ್ಲ.! ಯಾವುದೇ ಒಬ್ಬ ಶ್ರೀಮಂತ ಬೀದಿಗೆ ಬರಲಿಲ್ಲ. ಬಡವರು, ದಿನಗೂಲಿ ಕಾರ್ಮಿಕರು ಬ್ಯಾಂಕ್ ಮುಂದೆ ಕಾವಲು ನಿಂತ್ರು. ಅವರಲ್ಲಿ ಕೆಲವರು ಸತ್ರು. ನೋಟ್ ಬ್ಯಾನ್ ಆದ ಒಂದೇ ವಾರದಲ್ಲಿ ಕಳ್ಳ ನೋಟು ಬಂತು. ಭಯೋತ್ಪಾದನೆ ನಿಂತೇ ಹೊಯ್ತು ಅಂದ್ರು. ಅದೂ ಸಾಧ್ಯವಾಗಲಿಲ್ಲ ಈಗಲೂ ಸೈನಿಕರು ಸಾಯ್ತಾ ಇದ್ದಾರೆ. ಚುನಾವಣೆ ಸಮಯದಲ್ಲಂತೂ ಅಲ್ಲಲ್ಲಿ ಭಯೋತ್ಪಾದಕರು ನುಗ್ಗುತ್ತಲೇ ಇರ್ತಾರೆ ಅಂತ ಸರಕಾರವೇ ಹೇಳ್ತಿದೆ. ಹಣದ ವ್ಯವಹಾರ ಡಿಜಿಟಲ್ ಆಗುತ್ತೆ ಅಂದ್ರು, ಅದೂ ಆಗ್ಲಿಲ್ಲ. ದೇಶದ ಜಿಡಿಪಿ ಕುಸಿಯಿತು. ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿದವು. ಉದ್ಯೋಗ ನಷ್ಟ ಇನ್ನಷ್ಟು ತೀವ್ರವಾಯಿತು. ಬಡವರ ಬದುಕು ಡೋಲಾಯಮಾನ ವಾಯಿತು.

ಆದರೆ ಅಂಬಾನಿ‌ ಜಿಯೋ ಪ್ರಾರಂಭಿಸಿದರು. ಶ್ರೀಮಂತರ ಪಟ್ಟಿಯಲ್ಲಿ 87 ನೇ ಸ್ಥಾನದಲ್ಲಿದ್ದ ಅದಾನಿ ಎರಡನೇ ಸ್ಥಾನಕ್ಕೆ ಬಂದ್ರು.

ಇಷ್ಟೆಲ್ಲಾ ಆದ್ರೂ ಸರಕಾರ ಇನ್ನೂ ಏನೇನೋ ಹೇಳಿ ಜನರನ್ನು ಯಾಮಾರಿಸ್ತಾ ಇದೆ. ತಪ್ಪಾಗಿದೆ ಕ್ಷಮಿಸಿ ಅನ್ನೋ ಮಾತು ಕೂಡ ಅವರ ಬಾಯಲ್ಲಿ ಬರಲಿಲ್ಲ. ಬೇರೆ ದೇಶಗಳಲ್ಲಾದರೆ ಕ್ರಾಂತಿಯಾಗುತ್ತಿತ್ತು. ನಮ್ಮದು ಗ್ರೇಟ್ ಡೆಮಾಕ್ರೇಝಿ ಅಲ್ವ. ಇಲ್ಲಿ ಏನೂ ಆಗಲ್ಲ.

ಸೋವಿಯತ್ ಯೂನಿಯನ್ ನ ಅಧ್ಯಕ್ಷರಾಗಿದ್ದ ಜೋಸಫ್ ಸ್ಟಾಲಿನ್ ಅವರು ಒಂದು ಬಾರಿ ಸಂಸತ್ತಿನಲ್ಲಿ ಕೋಳಿಯೊಂದನ್ನು ತಂದು,‌ ಎಲ್ಲರೂ ನೋಡುತ್ತಿದ್ದಂತೆಯೇ‌ ಅದರ ಗರಿಯನ್ನು ಒಂದೊಂದಾಗಿ ಕೀಳಲಾರಂಭಿಸಿದರು. ಕೋಳಿ ನೋವಿನಿಂದ ಅರಚಾಡ್ತಾ ಇದ್ದರೂ ಬಿಡದೆ ಎಲ್ಲಾ ಗರಿಗಳನ್ನು ಕಿತ್ತು ಹಾಕಿ ಕೋಳಿಯನ್ನು ಕೆಳಗೆ ಬಿಸಾಡಿದರು. ನಂತರ ತನ್ನ ಜೇಬಿನಿಂದ ಸ್ವಲ್ಪ ಧಾನ್ಯಗಳನ್ನು ತೆಗೆದು ಕೋಳಿಯತ್ತ ಎಸೆದು ಮುಂದೆ ಸಾಗಿದಾಗ ಕೋಳಿ ಧಾನ್ಯಗಳನ್ನು ಹೆಕ್ಕುತ್ತಾ ಸ್ಟಾಲಿನ್ ಹಿಂದೆಯೇ ನಡೆಯಲಾರಂಭಿಸಿತು. ಹಾಗೆಯೇ ಧಾನ್ಯ ಹೆಕ್ಕುತ್ತಾ ಸ್ಟಾಲಿನ್ರ ಕಾಲಿನೆಡೆಯಲ್ಲಿ ಹೋಗಿ ನಿಂತುಕೊಂಡಿತು.

ಸ್ಟಾಲಿನ್ ಸ್ಪೀಕರ್ ಕಡೆಗೆ ನೋಡಿ ಹೇಳಿದರು, “ಪ್ರಜಾಪ್ರಭುತ್ವ ದೇಶಗಳ ನಾಗರಿಕರು ಈ ಕೋಳಿ ತರಹ ಇರ್ತಾರೆ. ಅವರನ್ನು ಆಳುವವರು, ಮೊದಲು ಅವರ ಎಲ್ಲವನ್ನು ಕಿತ್ತುಕೊಂಡು ನಿಸ್ಸಹಾಯಕರಾಗಿಸ್ತಾರೆ, ನಂತರ ಸ್ವಲ್ಪ ಆಮಿಷ ಒಡ್ಡಿ, ಅಲ್ಪ ಏನಾದರೂ ನೀಡಿ ಅವರ ಮಸೀಹರಾಗ್ತಾರೆ”. ಆ ಕೋಳಿಯ ಸ್ಥಿತಿಯಲ್ಲೇ ನಾವೂ ಇದ್ದೇವೆ ಅನ್ನೋದು ವಾಸ್ತವ.

_ನೌಫಲ್ ಕರೀಂ

Check Also

ಪಕ್ಷ ಸಂಘಟನೆಗಳೇ ನಮ್ಮ ಜೀವನ ಆಗದಿರಲಿ, ಚುನಾವಣೆಯ ನಂತರವೂ ನಮಗೆ ಬದುಕಬೇಕು

ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಎಂಬುವುದೊಂದು ನಿರಂತರ ಪ್ರಕ್ರಿಯೆಯಾಗಿದೆ. ಈ ಚುನಾವಣೆಗಳಲ್ಲಿ ಗೆದ್ದವರು …

Leave a Reply

Your email address will not be published. Required fields are marked *