Monday , August 26 2019
Breaking News
Home / ಕ್ರೀಡೆ / ಫೈನಲ್‌ನಲ್ಲಿ ಯಾವ ತಂಡವೂ ಸೋತಿಲ್ಲ: ಕೇನ್ ವಿಲಿಯಮ್ಸನ್

ಫೈನಲ್‌ನಲ್ಲಿ ಯಾವ ತಂಡವೂ ಸೋತಿಲ್ಲ: ಕೇನ್ ವಿಲಿಯಮ್ಸನ್

ಸಂದೇಶ ಇ-ಮ್ಯಾಗಝಿನ್: ರವಿವಾರ ಲಾರ್ಡ್ಸ್ ನಲ್ಲಿ ನಡೆದ 2019ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ನಿಯಮಾವಳಿ ಕಪ್ ಸೋಲಿನ ಬಳಿಕ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನ್ಯೂಝಿಲ್ಯಾಂಡ್ ಕಪ್ತಾನ ಕೇನ್ ವಿಲಿಯಮ್ಸನ್ “ಫೈನಲ್‌ನಲ್ಲಿ ಯಾವ ತಂಡವೂ ಸೋತಿಲ್ಲ. ಆದರೆ ಯಾರಾದರೂ ಒಬ್ಬರನ್ನು ವಿಶ್ವಚಾಂಪಿಯನ್ ಎಂದು ಘೋಷಿಸಲೇ ಬೇಕಾಗಿತ್ತು. ಅದನ್ನು ಮಾಡಲಾಗಿದೆ” ಎಂದು ಹೇಳಿದ್ದಾರೆ. ಪ್ರಸ್ತುತ ಕ್ರಿಕೆಟ್ ಆಡುತ್ತಿರುವ ಕ್ರೀಡಾಪಟುಗಳಲ್ಲಿ ಅತ್ಯುತ್ತಮ ಸೌಮ್ಯ ಸ್ವಭಾವದ ಸಂಭಾವಿತ ವ್ಯಕ್ತಿಗಳಲ್ಲಿ ಒಬ್ಬರಾದ ವಿಲಿಯಮ್ಸನ್ ಮತ್ತವರ ತಂಡವನ್ನು ಐಸಿಸಿಯ ಈ ಒಂದು ನಿಯಮ ಪ್ರಕಾರದ ಸೋಲನ್ನು ಒಪ್ಪಿಕೊಂಡು ಪಂದ್ಯಾವಳಿಯನ್ನು ನಿಯಂತ್ರಿಸುವ ನಿಯಮಗಳಿಗೆ ಸಹಿ ಹಾಕಿರುವ ಕಾರಣಕ್ಕಾಗಿ ವ್ಯಾಪಕವಾಗಿ ಪ್ರಶಂಶಿಸಲಾಗುತ್ತಿದ್ದು, ಆದರೂ ಕೂಡ ಕೆಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಮತ್ತು ಅಂಪಾಯರ್ ಗಳು ಬೌಂಡರಿ ಎಣಿಕೆಯಲ್ಲಿ ಪ್ರಶಸ್ತಿಯನ್ನು ಕಳೆದುಕೊಂಡಿರುವ ನ್ಯೂಜಿಲೆಂಡ್‌ನ ಸೋಲನ್ನು ಪ್ರಶ್ನೆ ಮಾಡಿದ್ದಾರೆ. ಅವರಲ್ಲಿ ಹಲವರು ನಿಯಮದ ಬಗ್ಗೆ “ಅಸಂಬದ್ದ” ಎಂದು ವಾಗ್ದಾಳಿಯನ್ನೂ ನಡೆಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ತಮ್ಮ ತಂಡವನ್ನು ಸೋಲಿಸಿದ ನಿಯಮದ ಬಗ್ಗೆ ಪ್ರಶ್ನೆ ಕೇಳಿದಾಗ ಕೇನ್ ವಿಲಿಯಮ್ಸನ್ ನಗುತ್ತಾ”ನೀವು ಆ ಪ್ರಶ್ನೆಯನ್ನು ಕೇಳಬೇಕು ಎಂದು ನೀವು ಎಂದಿಗೂ ಯೋಚಿಸಲಿಲ್ಲ ಮತ್ತು ನಾನು ಅದಕ್ಕೆ ಉತ್ತರಿಸಬೇಕೆಂದು ನಾನು ಭಾವಿಸಿರಲಿಲ್ಲ” ಎಂದು ಜಾಣ್ಮೆಯ ಉತ್ತರ ನೀಡಿದರು. ನಿಗದಿತ 50 ಓವರ್ ಮತ್ತು ಸೂಪರ್ ಓವರ್‌ ಎರಡೂ ಪಂದ್ಯಗಳು ಟೈ ನಲ್ಲಿ ಮುಕ್ತಾಯವಾದಾಗ, ಬೌಂಡರಿ ಎಣಿಕೆಯ ಮೂಲಕ (26-17) ಫೈನಲ್ ವಿಜೇತರನ್ನು ಘೋಷಿಸಲಾಯಿತು.

Check Also

ವಲ್ಡ್ ಕಪ್: ವಿಜಯೋತ್ಸವದಿಂದ ದೂರ ಉಳಿದ ಇಬ್ಬರು ಆಟಗಾರರು

102ಸಂದೇಶ ಇ-ಮ್ಯಾಗಝಿನ್: ಲಂಡನ್‌ನ ಲಾರ್ಡ್ಸ್‌ನಲ್ಲಿ ಭಾನುವಾರ ನಡೆದ ಐಸಿಸಿ ವಿಶ್ವಕಪ್ 2019 ರ ಫೈನಲ್‌ನಲ್ಲಿ ಪಂದ್ಯ ಟೈ ಆದ ನಂತರ …

Leave a Reply

Your email address will not be published. Required fields are marked *