Sunday , January 19 2020
Breaking News
courtesy: indiatvnews.com
Home / ರಾಜಕೀಯ / ಶೌಚಾಲಯ ಮತ್ತು ಚರಂಡಿಗಳನ್ನು ಸ್ವಚ್ಛ ಗೊಳಿಸಲು ಸಂಸತ್ ಸದಸ್ಯಳಾಗಿಲ್ಲ: ಪ್ರಜ್ಞಾ ಠಾಕೂರ್

ಶೌಚಾಲಯ ಮತ್ತು ಚರಂಡಿಗಳನ್ನು ಸ್ವಚ್ಛ ಗೊಳಿಸಲು ಸಂಸತ್ ಸದಸ್ಯಳಾಗಿಲ್ಲ: ಪ್ರಜ್ಞಾ ಠಾಕೂರ್

ಸಂದೇಶ ಇ-ಮ್ಯಾಗಝಿನ್: ನರೇಂದ್ರ ಮೋದಿ ಸರ್ಕಾರ ‘ಸ್ವಚ್ಛ ಭಾರತ ಅಭಿಯಾನ’ ಯಶಸ್ವಿಯಾಗಲು ಹಣವನ್ನು ವ್ಯಯಿಸಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಈ ಸಮಯದಲ್ಲಿ, ಭೋಪಾಲ್‌ನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಸ್ವಚ್ಛತೆಯ ಬಗ್ಗೆ ವಿವಾದಕ್ಕೆ ಕಾರಣವಾಗುವ ಹೇಳಿಕೆ ನೀಡಿದ್ದಾರೆ. ಭಾನುವಾರ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆಯೊಂದರಲ್ಲಿ ಸಂವಹನ ನಡೆಸುತ್ತಿದ್ದ ಪ್ರಜ್ಞಾ, ನಾನು ಶೌಚಾಲಯ ಮತ್ತು ಚರಂಡಿಗಳನ್ನು ಸ್ವಚ್ಛ ಗೊಳಿಸಲು ಸಂಸತ್ ಸದಸ್ಯಳಾಗಿ ಆಯ್ಕೆಯಾಗಿಲ್ಲ ಎಂದು ಹೇಳಿದ್ದಾರೆ. ಈ ಪ್ರದೇಶದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಇಲ್ಲಿನ ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದ ಕುಂದುಕೊರತೆಗೆ ಪ್ರತಿಕ್ರಿಯೆಯಾಗಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಅಭಿಪ್ರಾಯ ಬಂದಿದೆ.

ಮಾಲೇ ಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಇತ್ತೀಚೆಗೆ ಮಧ್ಯಪ್ರದೇಶದ ಭೂಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೇಸ್ ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಸ್ಪರ್ಧಿಸಿ ಭರ್ಜರಿ ಗೆಲವು ಸಾಧಿಸಿದ್ದರು. ಮಹಾರಾಷ್ಟ್ರದ ಎಟಿಎಸ್ ಮುಖ್ಯಸ್ಥರಾಗಿದ್ದ ದಿವಂಗತ ಹೇಮಂತ್ ಕರ್ಕರೆ ಅವರ ಬಗ್ಗೆ ಕೂಡ ವಿವಾದಾತ್ಮಕ ಹೇಳಿಕೆ ನೀಡಿ ಸಾಧ್ವಿ ಪ್ರಜ್ಞ ಸುದ್ದಿಯಾಗಿದ್ದರು.

Check Also

ಮಾಬ್ ಲಿಂಚಿಂಗ್‌ ವಿರುದ್ಧ ಕಾನೂನು ಯಾಕೆ ಮಾಡುತ್ತಿಲ್ಲ: ಅಮಿತ್ ಶಾಗೆ ಓವೈಸಿ ಪ್ರಶ್ನೆ

ಸಂದೇಶ ಇ-ಮ್ಯಾಗಝಿನ್: ಮಾಬ್ ಲಿಂಚಿಂಗ್ ತಡೆಗಟ್ಟಲು ಕೇಂದ್ರ ಸರಕಾರ ಕಾನೂನು ಯಾಕೆ ಮಾಡುತ್ತಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ …

Leave a Reply

Your email address will not be published. Required fields are marked *