Saturday , April 4 2020
Breaking News
Home / ಆರೋಗ್ಯ / ಮಹಾಮಾರಿ ನಿಫಾ ವೈರಸ್: ಮುಂಜಾಗ್ರತ ಕ್ರಮ ಹೇಗೆ?

ಮಹಾಮಾರಿ ನಿಫಾ ವೈರಸ್: ಮುಂಜಾಗ್ರತ ಕ್ರಮ ಹೇಗೆ?

ಇದುವರೆಗೂ ಯಾರೂ ಹೆಸರು ಕೇಳಿರದ ಹಾಗೂ ಕೆಲವು ದಿನಗಳಿಂದ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಹೆಸರೇ ‘ನಿಪಾ ವೈರಸ್’. ಇತ್ತೀಚೆಗೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಒಂದೇ ಮನೆಯ ಮೂವರನ್ನು ಒಂದು ವಾರದಲ್ಲಿ ಬಲಿಪಡೆದ ಈ ಮಾರಣಾಂತಿಕ ವೈರಸ್ ಇದೀಗ ಇಡೀ ಕೇರಳ ಹಾಗೂ ಕರ್ನಾಟಕದ ಜನರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.

ಕೋಯಿಕ್ಕೋಡಿನಲ್ಲಿ ಮರಿಯಮ್ಮ ಎಂಬ ಮಹಿಳೆ ಜ್ವರ ಪೀಡಿತಳಾಗಿ ಮೃತಪಟ್ಟಾಗ ಇದು ಸುದ್ಧಿಯಾಗಿಲ್ಲ ಕಾರಣ ಇದು ಡೆಂಗ್ಯು ಅಥವಾ ಮಲೇರಿಯಾದಂತಹ ಜ್ವರದ ಕಾರಣದಿಂದಾಗಿ ಸಂಭವಿಸಿದ ಮರಣ ಆಗಿರಬಹುದೆಂದು ನಿರ್ಧರಿಸಲಾಗಿತ್ತು. ಆದರೆ ನಂತರದ ಮೂರೇ ದಿನಗಳ ಅಂತರದಲ್ಲಿ ಮೃತ ಮರಿಯಮ್ಮಳ ಸಹೋದರ ಸಂಬಂಧಿಗಳಾದ ಸಾದಿಕ್ ಹಾಗೂ ಸಾಲಿಹ್ ಎಂಬಿಬ್ಬರು ಸಹೋದರರು ಜ್ವರದಿಂದಾಗಿ ಮರಣಹೊಂದಿದರೋ, ಅಂದಿನಿಂದ ವೈದ್ಯರಿಗೆ ಹಾಗೂ ಕೇರಳ ಸರಕಾರಕ್ಕೆ ಭೀತಿ ಕಾಡಲು ಪ್ರಾರಂಭವಾಯಿತು. ಇದು ಇಡೀ ವೈದ್ಯಲೋಕಕ್ಕೇ ಸವಾಲಾಗಿ ಪರಿಣಮಿಸಿತು.

ಜ್ವರ, ತಲೆನೋವು, ವಾಂತಿ, ಮೈಕೈ ನೋವಿನಂತಹ ಲಕ್ಷಣವನ್ನು ಹೊಂದಿರುವ ಈ ಕಾಯಿಲೆಯು ಯಾವ ಜ್ವರದ ಔಷಧಿ ನೀಡಿದರೂ ಕಡಿಮೆಯಾಗುವುದಿಲ್ಲ. ದಿನದಿಂದ ದಿನಕ್ಕೆ ಜ್ವರದಲ್ಲಿ ಏರಿಕೆಯಾಗಿ ರೋಗಿ ಮರಣಕ್ಕೆ ಈಡಾಗುವುದನ್ನು ನೋಡಿ ವೈದ್ಯರು ಚಿಂತಿತರಾದರು. ಈಗಾಗಲೇ ರೋಗದ ಕಾರಣ ತಿಳಿಯಲು ರೋಗಿಗಳ ರಕ್ತದ ಸ್ಯಾಂಪಲ್ ಗಳನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕಳುಹಿಸಲಾಗಿದ್ದರೂ ಇದುವರೆಗೆ ರಕ್ತಪರೀಕ್ಷಾ ವರದಿ ಬಂದಿಲ್ಲ. ಈ ಕಾರಣದಿಂದ ವೈದ್ಯರು ತಮಗೆ ತಿಳಿದಿರುವ ಔಷಧಿಗಳನ್ನು ನೀಡಿ ರೋಗಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಇದುವರೆಗೂ ಸುಮಾರು 30ಕ್ಕು ಹೆಚ್ಚು ಇಂತಹ ಜ್ವರದ ಪ್ರಕರಣಗಳು ಪತ್ತೆಯಾಗಿದ್ದು, ಕೇರಳದಾದ್ಯಂತ ಹೈ ಅಲರ್ಟ್ ಘೋಷಣೆಯಾಗಿದೆ.

ಇದನ್ನು ಓದಿದ ನಂತರ ಇದು ನಮ್ಮ ಕರ್ನಾಟಕಕ್ಕೆ ಬಂದಿಲ್ವಲ್ಲಾ ಎಂದು ಯೋಚಿಸಿದರೆ ಅದು ಮೂರ್ಖತನವಾಗುತ್ತದೆ. ಕಾರಣ ಭೌಗೋಳಿಕವಾಗಿ ಕೇರಳ ಹಾಗೂ ಕರ್ನಾಟಕಕ್ಕೆ ಅದರಲ್ಲೂ ಮುಖ್ಯವಾಗಿ ಕರಾವಳಿ ಕರ್ನಾಟಕಕ್ಕೆ ಬಹಳ ನಂಟಿದೆ. ಕೇರಳದ ಆಹಾರ ಪದ್ಧತಿಗೂ ನಮ್ಮ ಆಹಾರ ಪದ್ಧತಿಗೂ ಸಾಮ್ಯತೆಯಿರುವುದರಿಂದ ನಾವು ನಿಪಾ ವೈರಸ್ ಕುರಿತು ಜಾಗರೂಕರಾಗಿರುವುದು ಅತೀ ಅಗತ್ಯ.

Image result for nifa virus

ಇನ್ನು ವೈದ್ಯರ ಪ್ರಾಥಮಿಕ ಅಭಿಪ್ರಾಯದಂತೆ ಮಾರಾಣಾಂತಿಕ ನಿಪಾ ವೈರಸ್ ಪಕ್ಷಿಗಳಿಂದ ಹರಡುತ್ತದೆ ಅದರಲ್ಲೂ ಮುಖ್ಯವಾಗಿ ಬಾವಲಿ ಗಳಿಂದ ಹರಡುತ್ತದೆ. ಬಾವಲಿಗಳಿಂದ ಮನುಷ್ಯರಿಗೆ ಹೇಗೆ ಹರಡುತ್ತದೆ ಎಂದು ನೀವು ಯೋಚಿಸಬಹುದು. ಬಾವಲಿಗಳು ಹಣ್ಣುಹಂಪಲುಗಳ ಮೇಲೆ ಕುಳಿತು ತನ್ನ ಕೊಕ್ಕುವಿನಿಂದ ಹಣ್ಣಗಳನ್ನು ಕುಕ್ಕುತ್ತದೆ. ಬಾವಲಿ ಕುಕ್ಕಿದ ಇಂತಹ ಹಣ್ಣುಗಳನ್ನು ನಾವು ತೊಳೆದು ಶುಚೀಕರಿಸಿ ತಿನ್ನುತ್ತೇವೆ. ಇದು ಈ ರೋಗ ಹರಡಲು ಮುಖ್ಯ ಕಾರಣ. ಇನ್ನು ಬಾವಲಿ ಹಣ್ಣನ್ನು ಕುಕ್ಕ ಬೇಕೆಂದಿಲ್ಲ ಅದು ಹಣ್ಣಿನ ಮೇಲೆ ಕುಳಿತ ತಕ್ಷಣ ನಿಫಾ ವೈರಸ್ ಹಣ್ಣಿನ ಮೇಲೆ ಅಂಟಿಕೊಳ್ಳುತ್ತದೆ. ಅಂತಹ ತಾಜಾ ಹಣ್ಣುಗಳನ್ನು ತಿನ್ನುವುದರಿಂಲೂ ಇದು ಹರಡಬಹುದು.

ಆದುದರಿಂದ ಪವಿತ್ರ ರಂಝಾನ್ ಮಾಸದಲ್ಲಿ ಇಫ್ತಾರಿಗೆ ಉಪಯೋಗಿಸುವ ಹಣ್ಣುಗಳ ಕುರಿತು ಜಾಗ್ರತೆ ವಹಿಸುವುದು ಅಗತ್ಯ. ಅದರೊಂದಿಗೆ ಹಕ್ಕಿಗಳಿಗೂ ನಿಫಾ ವೈರಸ್ ಗೆ ನಂಟಿರುವುದರಿಂದ ಆದಷ್ಟು ಕೋಳಿಯನ್ನು ದೂರಮಾಡುವುದು ಉತ್ತಮ. ಕೇವಲ ಕರ್ಜೂರ ತಿಂದು ರಂಝಾನ್ ವೃತಾಚರಣೆ ಮಾಡಿದ ಪ್ರವಾದಿಯವರ ಅನುಯಾಯಿಗಳಾದ ಮುಸಲ್ಮಾನರು ಭೂರಿಭೋಜನಕ್ಕೆ ಕೆಲವು ದಿನ ಕಡಿವಾಣ ಹಾಕುವುದು ಉತ್ತಮ. ಕಷ್ಟ ಬಂದೊದಗುವುದಕ್ಕಿಂತ ಮೊದಲು ಎಚ್ಚರಗೊಳ್ಳುವುದು ಬುದ್ಧಿವಂತರ ಲಕ್ಷಣವಾಗಿದೆ.

ವರದಿ: ಎಸ್.ಎ.ರಹಿಮಾನ್ ಮಿತ್ತೂರು

Check Also

ಜೇನು ಶುದ್ಧವೋ ಅಶುದ್ಧವೋ ಅಂತ ಈ 4 ವಿಧಾನಗಳಿಂದ ಪರೀಕ್ಷೆ ಮಾಡಿ ನೋಡಿ

ಸಂದೇಶ ಇ-ಮ್ಯಾಗಝಿನ್: ಜೇನು ಎಂಬುದು ಪ್ರಾಕೃತಿಕವಾಗಿ ದೊರೆಯುವಂತಹ ಒಂದು ಶುದ್ಧ ಆಹಾರ ಪದಾರ್ಥವಾಗಿದೆ. ಇದು ಸ್ವಾದದಲ್ಲಿ ಎಷ್ಟು ಸಿಹಿಯೋ ಅಷ್ಟೇ …

Leave a Reply

Your email address will not be published. Required fields are marked *