Friday , April 3 2020
Breaking News
image credit: swiggy twitter
Home / ಸುದ್ದಿ / ಮುಸ್ಲಿಮ್ ಎಂಬ ಕಾರಣಕ್ಕೆ ಸ್ವಿಗ್ಗಿ ಡೆಲಿವರಿ ಬಾಯ್ ನಿಂದ ಆಹಾರ ನಿರಾಕರಿಸಿದ ಮತಾಂಧ

ಮುಸ್ಲಿಮ್ ಎಂಬ ಕಾರಣಕ್ಕೆ ಸ್ವಿಗ್ಗಿ ಡೆಲಿವರಿ ಬಾಯ್ ನಿಂದ ಆಹಾರ ನಿರಾಕರಿಸಿದ ಮತಾಂಧ

ಸಂದೇಶ ಮ್ಯಾಗಝಿನ್: ಕೆಲವು ದಿನಗಳ ಹಿಂದೆಯಷ್ಟೆ ಝೋಮಾಟೋದ ಮುಸ್ಲಿಮ್ ಡೆಲಿವರಿ ಬಾಯ್‌ನ ಕೈಯಿಂದ ಆಹಾರದ ಪಾರ್ಸಲ್ ಪಡೆಯಲು ನಿರಾಕರಿಸಿದ ಹಿಂದೂ ಗ್ರಾಹಕನೊಬ್ಬನ ನಡೆ ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ಝೊಮಾಟೋ ಡೆಲಿವರಿ ಬಾಯ್ ಪರ ಟ್ವೀಟ್ ಮಾಡಿ ಆಹಾರಕ್ಕೆ ಯಾವುದೇ ಧರ್ಮವಿಲ್ಲ ಎಂದು ಹೇಳಿತ್ತು. ಝೊಮಾಟೋ ಮಾಡಿದ ಈ ಟ್ವೀಟ್ ಹಿಂದೂ ಮೂಲ ಭೂತ ವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಝೊಮಾಟೋವನ್ನು ಬಾಯ್ಕಾಟ್ ಮಾಡಿ ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿತ್ತು. ಇಂತದ್ದೇ ಘಟನೆಯೊಂದು ಮತ್ತೊಂದು ಆಹಾರ ವಿತರಣೆ ಮಾಡುವ ಕಂಪೆನಿಯಾದ ಸ್ವಿಗ್ಗಿಯಲ್ಲೂ ನಡೆದಿದ್ದು, ಹೈದರಾಬಾದ್ ನಿಂದ ವರದಿಯಾಗಿದೆ.

ಹೈದರಾಬಾದಿನ ಶಾ ಅಲಿ ಬಂದಾ ನಿವಾಸಿಯೊಬ್ಬ ಚಿಕನ್ 65 ಯನ್ನು ಸ್ವಿಗ್ಗಿ ಆಪ್ ನಲ್ಲಿ ಆರ್ಡರ್ ಮಾಡಿದ್ದ. ಸಮೀಪದ ಹೋಟೆಲ್ ಒಂದು ಆತನ ಆರ್ಡರ್ ಪಡೆದಿದ್ದು, ಅದನ್ನು ಸ್ವಿಗ್ಗಿಯ ಡೆಲಿವರಿ ಬಾಯ್ ಒಬ್ಬರು ಗ್ರಾಹಕನಿಗೆ ತಲುಪಿಸಿದ್ದರು. ಆದರೆ ಆಹಾರದ ಪೊಟ್ಟಣವನ್ನು ಸ್ವೀಕರಿಸುವ ಮುನ್ನ ಡೆಲಿವರಿ ಬಾಯ್ ಯ ಧರ್ಮ ಯಾವುದೆಂದು ವಿಚಾರಿಸಿದ ಮತಾಂಧ ಗ್ರಾಹಕ ಆ ಬಳಿಕ ಡೆಲಿವರಿ ಬಾಯ್ ಮುಸ್ಲಿಮ್ ಎಂದು ಅರಿತು ಆಹಾರದ ಪೊಟ್ಟನವನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ಇದಕ್ಕೆ ಕಾರಣವಾಗಿ ಮತಾಂಧ ಗ್ರಾಹಕ ನಾನು ಹಿಂದೂ ಡೆಲಿವರಿ ಬಾಯ್ ನನ್ನ ಆಹಾರವನ್ನು ಡೆಲಿವರಿ ಮಾಡಬೇಕು ಎಂದು ಬಯಸಿದ್ದೆ. ಮುಸ್ಲಿಮರು ಡೆಲಿವರಿ ಮಾಡುವ ಆಹಾರ ನಾನು ತಿನ್ನಲ್ಲ ಎಂದು ಹೇಳಿದ್ದಾನೆ. ಇದರಿಂದ ಮನ ನೊಂದ ಡೆಲಿವರಿ ಬಾಯ್ ಗ್ರಾಹಕನ ವಿರುದ್ಧ ಧರ್ಮ ನಿಂದನೆಯ ಪ್ರಕರಣ ದಾಖಲಿಸಿದ್ದಾನೆ.

Leave a Reply

Your email address will not be published. Required fields are marked *