Monday , August 26 2019
Breaking News
Home / ಅಂತಾರಾಷ್ಟ್ರೀಯ / ಕ್ರೈಸ್ಟ್ ಚರ್ಚ್ ಆರೋಪಿಯ ವಿರುದ್ಧ ಪ್ರಥಮ ಬಾರಿಗೆ ಭಯೋತ್ಪಾದನೆಯ ಆರೋಪ ಪಟ್ಟಿ ಸಲ್ಲಿಕೆ

ಕ್ರೈಸ್ಟ್ ಚರ್ಚ್ ಆರೋಪಿಯ ವಿರುದ್ಧ ಪ್ರಥಮ ಬಾರಿಗೆ ಭಯೋತ್ಪಾದನೆಯ ಆರೋಪ ಪಟ್ಟಿ ಸಲ್ಲಿಕೆ

ಸಂದೇಶ ಇ-ಮ್ಯಾಗಝಿನ್: ನ್ಯೂಜಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್‌ನ ಎರಡು ಮಸೀದಿಗಳಲ್ಲಿ ದಾಳಿ ನಡೆಸಿದ್ದ ಆರೋಪಿಯ ಬ್ರೆಂಟ್ಟನ್ ಟೆರೆಂಟ್ ವಿರುದ್ಧ ಮಂಗಳವಾರ ಮೊದಲ ಬಾರಿಗೆ ಭಯೋತ್ಪಾದನೆಯ ಆರೋಪಪಟ್ಟಿ ಸಲ್ಲಿಸಲಾಗಿದೆ. ಟೆರೆಂಟ್ ವಿರುದ್ಧ 51 ಕೊಲೆ ಹಾಗೂ 40 ಹತ್ಯಾ ಯತ್ನದ ಆರೋಪವನ್ನು ಹೊರಿಸಲಾಗಿದೆ. ಎಫೆ ನ್ಯೂಸ್ ವರದಿಯ ಪ್ರಕಾರ ಭಯೋತ್ಪಾದನಾ ನಿಗ್ರಹ 2002 ರ 6A ಕಾಯಿದೆಯಡಿಯಲ್ಲಿ ಬ್ರೆಂಟ್ಟನ್ ಟೆರೆಂಟ್ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಮೈಕ್ ಬುಷ್ ಹೇಳಿದ್ದಾರೆ. ಪೊಲೀಸರು ಪೀಡಿತ ಕುಟುಂಬಗಳ ಬದುಕುಳಿದ ಜನರನ್ನು ಭೇಟಿಯಾಗಿ ಹೊಸ ಆರೋಪಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ತ್ವರಿತಗತಿಯಲ್ಲಿ ನಡೆಯುತ್ತಿರುವ ತನಿಖೆಯ ಬಗ್ಗೆಯೂ ಮಾಹಿಯನ್ನೂ ನೀಡಲಾಗಿದೆ ಎಂದು ಮೈಕ್ ಬುಷ್ ತಿಳಿಸಿದ್ದಾರೆ.

ಭಯೋತ್ಪಾದಕ ಬ್ರೆಂಟ್ಟನ್ ಟೆರೆಂಟ್‌ನನ್ನು ಆಕ್‌ಲ್ಯಾಂಡ್‌ನ ಬಿಗು ಭದ್ರತೆಯಿಂದ ಕೂಡಿದ ಜೈಲಿನಲ್ಲಿಡಲಾಗಿದ್ದು, ಎಪ್ರಿಲ್ ಐದರಂದು ಕ್ರೈಸ್ಟ್ ಚರ್ಚ್ ಹೈಕೋರ್ಟ್ ನ್ಯಾಯಾಧೀಶರ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಬ್ರೆಂಟ್ಟನ್ ಟೆರೆಂಟ್ ಮಾತನಾಡಿದ್ದ. ಅದರ ನಂತರ ನ್ಯಾಯಾಧೀಶರು ಆತನ ಮಾನಸಿಕ ಆರೋಗ್ಯವನ್ನು ದಾಖಲಿಸಲು ವೈದ್ಯಕೀಯ ತಪಾಸಣೆಗೆ ಆದೇಶಿಸಿದ್ದರು.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *