Friday , November 15 2019
Breaking News
Home / ಗಲ್ಫ್ ಸುದ್ದಿ / ಮುಂದಿನ ವರ್ಷದಿಂದ ಈ ಹೊಸ ವಿಧಾನದ ಮೂಲಕ ಸೌದಿ ಅರೇಬಿಯಾ ಚಂದ್ರದರ್ಶನ ಮಾಡಲಿದೆ

ಮುಂದಿನ ವರ್ಷದಿಂದ ಈ ಹೊಸ ವಿಧಾನದ ಮೂಲಕ ಸೌದಿ ಅರೇಬಿಯಾ ಚಂದ್ರದರ್ಶನ ಮಾಡಲಿದೆ

ಸಂದೇಶ ಇ-ಮ್ಯಾಗಝಿನ್: ಇಸ್ಲಾಮಿಕ್ ತಿಂಗಳನ್ನು ಅಧಿಕೃತವಾಗಿ ನಿರ್ಧರಿಸಲು ಚಂದ್ರ ದರ್ಶನ ಅತೀ ಮುಖ್ಯವಾಗಿದೆ. ಇಸ್ಲಾಮಿನ ಪ್ರತೀ ತಿಂಗಳನ್ನು ಚಂದ್ರ ದರ್ಶನ ಮೂಲಕವೇ ನಿರ್ಧರಿಸಲಾಗುತ್ತದೆಯಾದರೂ ರಮದಾನ್ ಮತ್ತು ಶವ್ವಾಲ್ ತಿಂಗಳ ಚಂದ್ರ ದರ್ಶನ ಇದರಲ್ಲಿ ಹೆಚ್ಚು ಮಹತ್ವವುಳ್ಳದ್ದಾಗಿದೆ. ಮುಂದಿನ ವರ್ಷದಿಂದ ರಮದಾನ್ ಹಾಗೂ ಶವ್ವಾಲ್ ಚಂದ್ರ ದರ್ಶನಕ್ಕಾಗಿ ಸೌದಿ ಸರಕಾರವು ಮಕ್ಕಾದಲ್ಲಿರುವ ಅತಿ ಎತ್ತರದ ಕ್ಲಾಕ್ ಟವರ್ ನಲ್ಲಿ ವ್ಯವಸ್ಥೆ ಮಾಡಲಿದೆ. ಕ್ಲಾಕ್ ಟವರ್‌ನ ಮೇಲಿನ ಕೊನೆಯ ಅಂತಸ್ಥಿನಲ್ಲಿ ಇದಕ್ಕಾಗಿ ಅತ್ಯಾಧುನಿಕ ಬೈನಾಕುಲರ್, ದೂರದರ್ಶಕದ ಸ್ಟೂಡಿಯೋ ಸಿದ್ಧವಾಗಿದ್ದು, ಮೋಡವಿದ್ದರೂ ನಿಖರವಾಗಿ ಚಂದ್ರ ದರ್ಶನ ಮಾಡ ಬಲ್ಲಂತಹ ವ್ಯವಸ್ಥೆಯನ್ನು ಸಿದ್ಧ ಪಡಿಸಿದೆ.

ಈ ವರ್ಷ ರಂಝಾನ್ ತಿಂಗಳು ಮುಗಿದ ಶವ್ವಾಲ್ ಚಂದ್ರ ದರ್ಶನ ಮಾಡಬೇಕಾದರೆ ಸೌದಿ ಅರೇಬಿಯಾ ಎಡವಟ್ಟ್ ಮಾಡಿಕೊಂಡಿದೆ. ಅನ್ಯಾಯವಾಗಿ ಒಂದು ಉಪವಾಸ ನಷ್ಟ ಮಾಡಿಸಿದ ಕಾರಣ ಸೌದಿ 1.6 ಬಿಲಿಯನ್ ಫಿದಿಯ ಕೂಡ ನೀಡಿದೆ ಎಂದು ಇರಾನ್ ಹಾಗೂ ಪಾಕಿಸ್ತಾನದ ಮೀಡಿಯಾಗಳು ವರದಿ ಮಾಡಿದ್ದವು. ಆದರೆ ಸೌದಿ ಅರೇಬಿಯಾ ಹಾಗೂ ಇತರ ಯಾವುದೇ ದೇಶದ ಮಾಧ್ಯಮಗಳೂ ಇದನ್ನು ಅನುಮೋದಿಸಿರಲಿಲ್ಲ. ಮಾತ್ರವಲ್ಲ ಇದು ಸೌದಿ ಅರೇಬಿಯಾದ ವಿರುದ್ಧ ಇರಾನ್ ನಡೆಸಿದ ಮತ್ತೊಂದು ಷಡ್ಯಂತ್ರ ಎಂದು ಆ ಬಳಿಕ ವರದಿಯಾಗಿತ್ತು. ಅದೇನೇ ಇದ್ದರೂ ಈ ಯೋಜನೆ ಸುಮಾರು 4 -5 ವರ್ಷ ಹಿಂದಿನ ಸೌದಿ ಅರೇಬಿಯಾದ ಯೋಜನೆಯಾಗಿದೆ ಎನ್ನಲಾಗಿದೆ.

Check Also

ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

ಸಂದೇಶ ಇ-ಮ್ಯಾಗಝಿನ್: ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ಸಂತ್ರಸ್ತರ 200 ಕುಟುಂಬ ಸದಸ್ಯರಿಗೆ ಈ ಬಾರಿಯ ಹಜ್ ಆತಿಥ್ಯ ವಹಿಸುವಂತೆ ಸೌದಿ …

Leave a Reply

Your email address will not be published. Required fields are marked *