Monday , September 16 2019
Breaking News
Home / ಟೆಕ್ನಾಲಜಿ / ಈ ಒಂದು ಕಾರಣದಿಂದಾಗಿ ಏರ್ಪೋರ್ಟ್‌ನಲ್ಲಿ ನಿಮ್ಮ ಮೊಬೈಲನ್ನು ಯಾವತ್ತೂ ಚಾರ್ಜ್ ಮಾಡಲು ಹೋಗಬೇಡಿ

ಈ ಒಂದು ಕಾರಣದಿಂದಾಗಿ ಏರ್ಪೋರ್ಟ್‌ನಲ್ಲಿ ನಿಮ್ಮ ಮೊಬೈಲನ್ನು ಯಾವತ್ತೂ ಚಾರ್ಜ್ ಮಾಡಲು ಹೋಗಬೇಡಿ

ಸಂದೇಶ ಇ-ಮ್ಯಾಗಝಿನ್: ಏರ್ಪೋರ್ಟ್‌ನಲ್ಲಿ ವಿಮಾನಕ್ಕಾಗಿ ಕಾಯುವುದು ಅತ್ಯಂತ ಬೋರಿಂಗ್ ಸಂಗತಿ ಅಲ್ವೇ! ಅದೂ ಆ ಸಮಯದಲ್ಲಿ ನಿಮ್ಮ ಮೊಬೈಲ್ ನ ಚಾರ್ಜ್ ಮುಗಿದಿದ್ದಲ್ಲಂತೂ ಕೇಳುವುದೇ ಬೇಡ. ಯಾವುದೋ ಸ್ಮಶಾನದಲ್ಲಿದ್ದ ಅನುಭವ. ಈ ಸಂದರ್ಭದಲ್ಲಿ ನಾವೆಲ್ಲರೂ ಸಾಮಾನ್ಯವಾಗಿ ಮೊಬೈಲ್ ಚಾರ್ಜ್ ಮಾಡುವ ಯುಎಸ್‌ಬಿ ಡಿವೈಸ್ ಎಲ್ಲಿದೆ ಅಂತ ಹುಡುಕುತ್ತೇವೆ ಅಲ್ವ? ಹೌದು…ಇದೇ ನಾವು ಮಾಡುವ ಪ್ರಮುಖ ತಪ್ಪು.

ಈಗ ನಿಮಗೆ ಅನಿಸಬಹುದು ಇಲ್ಲಿ ನೂರಾರು ಜನರು ಚಾರ್ಜ್ ಮಾಡುತ್ತಾರೆ. ನಾನು ಮಾಡಿದರೆ ತಪ್ಪೇನು ಅಂತ. ದಯವಿಟ್ಟು ನೀವು ಆ ಕೆಲಸ ಮಾಡಲು ಹೋಗಬೇಡಿ. ಇಂತಹ ಪಬ್ಲಿಕ್ ಚಾರ್ಜರ್‌ನಲ್ಲಿ ಮೊಬೈಲ್ ಚಾರ್ಜ್ ಮಾಡಿದ ತಪ್ಪಿಗೆ ಹಲವಾರು ಮಂದಿ ಅತಿದೊಡ್ಡ ಬೆಲೆ ತೆತ್ತಿದ್ದಾರೆ. ಕೆಲವರ ಜೀವನವೇ ಹಾಳಾಗಿದೆಯಂತೆ. ಐಬಿಎಂ ಸೆಕ್ಯುರಿಟಿಯಲ್ಲಿ ಎಕ್ಸ್ ಫೋರ್ಸ್ ಥ್ರೆಟ್ ಇಂಟೆಲಿಜನ್ಸ್ ಉಪಾಧ್ಯಕ್ಷರಾಗಿರುವ ಕ್ಯಾಲೆಬ್ ಬಾರ್ಲೊ ಅವರು ಈ ಬಗ್ಗೆ ಎಚ್ಚರಿಸಿದ್ದಾರೆ.

ಕ್ಯಾಲೆಬ್ ಬಾರ್ಲೊ ಅವರ ಪ್ರಕಾರ ಇಂತಹ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಗಳಲ್ಲಿ ಮೊಬೈಲ್ ಚಾರ್ಜ್ ಮಾಡುವುದು ನೀವು ದಾರಿಯಲ್ಲಿ ನಡೆದಾಡುವಾಗ ಬಿದ್ದು ಸಿಗುವ ಟೂತ್ ಬ್ರಶ್ ನಲ್ಲಿ ಹಲ್ಲುಜ್ಜುವಂತೆ ಎಂದು ಅವರು ಬಣ್ಣಿಸಿದ್ದಾರೆ.

ಕ್ಯಾಲೆಬ್ ಬಾರ್ಲೊ ಅವರು ಹೇಳುವ ಪ್ರಕಾರ ಸೈಬರ್ ಕ್ರಿಮಿನಲ್ಸ್ ಗಳು ಇಂತಹ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಗಳಲ್ಲಿ ಮಾಲ್ವೇರ್ ವೈರಸ್ ಗಳನ್ನು ಅಳವಡಿಸಿ ಅಲ್ಲಿ ಚಾರ್ಜ್ ಮಾಡಲು ಬರುವ ಜನರ ಮೊಬೈಲ್ ನಲ್ಲಿರುವ ಅತ್ಯಮೂಲ್ಯ ಡಾಟಾಗಳನ್ನು ಕದಿಯುತ್ತಾರಂತೆ.

2017 ರಲ್ಲಿ ಸಾರಿಗೆ ವಲಯವು ಅತೀ ಹೆಚ್ಚು ಸೈಬರ್ ಅಟ್ಯಾಕ್ ನಡೆಯುವ ಕ್ಷೇತ್ರಗಳ ಪೈಕಿ 10 ನೇ ಸ್ಥಾನದಲ್ಲಿತ್ತು. 2018 ರಲ್ಲಿ ಅದು ಎರಡನೇ ಸ್ಥಾನದಲ್ಲಿತ್ತು. 2019 ರಲ್ಲಿ ಪ್ರಥಮ ಸ್ಥಾನ ಪಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ. ಸಾರ್ವಜನಿಕ ಫ್ರೀ ವೈಫೈ ಕೂಡ ಇಂತಹ ಸೈಬರ್ ಅಟ್ಯಾಕ್ ಗಳಿಂದ ಹೊರತಾಗಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.

Check Also

ಅಚಾತುರ್ಯದಿಂದ ಡಿಸೇಲ್ ಕಾರಿ‌ಗೆ ಪೆಟ್ರೋಲ್ ತುಂಬಿಸಿದಾಗ ಈ ರೀತಿ ಮಾಡಿ ನಿಮ್ಮ ವಾಹನವನ್ನು ರಕ್ಷಿಸಿ

004ಸಂದೇಶ ಇ-ಮ್ಯಾಗಝಿನ್: ಇವತ್ತಿನ ದಿನಗಳಲ್ಲಿ ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ನೀವು ಪೆಟ್ರೋಲ್ ಪಂಪ್‌ಗೆ ಹೋದರೆ ಅಲ್ಲಿರುವ …

Leave a Reply

Your email address will not be published. Required fields are marked *