Friday , May 24 2019
Breaking News
Home / ಗಲ್ಫ್ ವಿಶೇಷ / ಮರುಭೂಮಿಯ ಕೃಷಿ ಮಾಂತ್ರಿಕ ನಾಸರ್ 40 ವರ್ಷಗಳ ಬಳಿಕ ಪ್ರವಾಸಿ ಬದುಕಿಗೆ ವಿದಾಯ ಹೇಳಿದರು

ಮರುಭೂಮಿಯ ಕೃಷಿ ಮಾಂತ್ರಿಕ ನಾಸರ್ 40 ವರ್ಷಗಳ ಬಳಿಕ ಪ್ರವಾಸಿ ಬದುಕಿಗೆ ವಿದಾಯ ಹೇಳಿದರು

ಸಂದೇಶ ಇ-ಮ್ಯಾಗಝಿನ್: ನಾಲ್ಕು ದಶಕಗಳ ಬಳಿಕ ಕೇರಳದ ನಾಸಿರ್ ಅವರು ಕೊನೆಗೂ ತಮ್ಮ ಪ್ರವಾಸಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಪೊಣ್ಣಾನಿಯ ಪಲಪೆಟ್ಟಿಯವರಾದ ನಾಸರ್ 38 ವರ್ಷಗಳ ಕಾಲ ಅಬೂಧಾಬಿ ಪೊಲೀಸ್ ನಲ್ಲಿ ಕೆಲಸ ಮಾಡಿದ್ದಾರೆ. 1980 ರಲ್ಲಿ ಅರಬ್ ನಾಡಿಗೆ ಹೋದಾಗ ನಾಸಿರ್‌ಗೆ 17 ವರ್ಷ. ಮೈನರ್ ಪಾಸ್ ಪೋರ್ಟ್ ನಲ್ಲಿ ಹೋದ ನಾಸರ್‌ಗೆ ದೊರೆತ ಮೊದಲ ಕೆಲಸ ಇರಾನ್ ಇತಿಹಾಸವನ್ನು ಅಭ್ಯಾಸ ಮಾಡುವ ಸಂಶೋಧಕರೊಬ್ಬರ ಸೇವಕ. ಆ ಬಳಿಕ ಅಬೂಧಾಬಿಯ ತಾರಿಫ್ ನಲ್ಲಿ ಪೊಲೀಸ್ ಇಲಾಖೆಯಲ್ಲಿ ನಾಸರ್ ಅವರಿಗೆ ಕೆಲಸ ದೊರೆಯಿತು. ಪೊಲೀಸ್ ಇಲಾಖೆಯಲ್ಲಿ ಇದ್ದ ಕಾರಣ ನಾಸರ್ ಅವರು ತಮ್ಮ ಸೇವಾ ಅವಧಿಯಲ್ಲಿ ಹಲವಾರು ಕಷ್ಟದಲ್ಲಿದ್ದ ಭಾರತೀಯರಿಗೆ ಸಹಾಯ ಮಾಡಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ನಾಸರ್ “ತಾರಿಫ್ ಪೊಲೀಸ್ ವೆಲ್‌ಫೇರ್ ಅಸೋಸಿಯೇಶನ್” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಇದರ ಮೂಲಕ ಊರಿನಲ್ಲಿರುವ ಮತ್ತು ವಿದೇಶಕ್ಕೆ ಬರುವ ಪ್ರವಾಸಿಗಳಿಗೆ ಸಹಾಯ ಒದಗಿಸಲಾಗುತ್ತಿದೆ.

ತಮ್ಮ ಸೇವಾ ಅವಧಿಯಲ್ಲಿ ಅಬೂಧಾಬಿ ಪೊಲೀಸ್ ಕ್ಯಾಂಪ್‌‍ನ ಕಚೇರಿಯ ಮುಂಭಾಗದಲ್ಲಿ ನಾಸಿರ್ ಅವರು ತಾವೇ ನೆಟ್ಟು ನೀರುಣಿಸಿ ಕೃಷಿ ನಿರ್ಮಿಸಿದ್ದರು. ಇದರ ಬಗ್ಗೆ ಗಲ್ಫ್ ನಾಡಿನ ಪತ್ರಿಕೆಗಳೂ ವರದಿ ಮಾಡಿದ್ದವು. ಇವರನ್ನು ಮರುಭೂಮಿಯಲ್ಲಿ ಕೃಷಿ ಅರಳಿಸಿದ ಮಾಂತ್ರಿಕ ಎಂದೂ ಕರೆಯಲಾಗುತ್ತದೆ. ಕೊನೆಗೂ ತಮ್ಮ 40 ವರ್ಷಗಳ ಪ್ರವಾಸಿ ಜೀವನಕ್ಕೆ ಕೊನೆ ಹಾಡಿ ನಾಸಿರ್ ಅವರು ಮೊನ್ನೆ ಊರಿಗೆ ಬಂದಿದ್ದಾರೆ.

Check Also

ಮದೀನಾದ ಮಸೀದಿಯ 8 ಅಚ್ಚರಿದಾಯಕ ಅಪೂರ್ವ ಸಂಗತಿಗಳು

003ಸಂದೇಶ ಇ-ಮ್ಯಾಗಝಿನ್: ಇಸ್ಲಾಮಿನ ಪವಿತ್ರ ನಗರವಾದ ಮದೀನಾವೆಂದರೆ ಪ್ರತಿಯೊಬ್ಬ ಮುಸಲ್ಮಾನನಿಗೂ ಒಂದು ತೆರನಾದ ಉತ್ಸಾಹ ಗರಿಗೆದರುತ್ತದೆ. ಮರುಭೂಮಿಯಾದರೂ ಅಲ್ಲಿನ ಸುಂದರ …

Leave a Reply

Your email address will not be published. Required fields are marked *