Monday , September 16 2019
Breaking News
Home / ಮಹಿಳೆ / ಹೆಣ್ಣು ಮಕ್ಕಳು ನಿಷ್ಪ್ರಯೋಜಕರು ಎನ್ನುವವರಿಗೆ ನಕೀಬ್‌ರ ಈ ಇಬ್ಬರು ಹೆಣ್ಣು ಮಕ್ಕಳು ಸ್ಪಷ್ಟ ಉತ್ತರವಾಗಿದ್ದಾರೆ

ಹೆಣ್ಣು ಮಕ್ಕಳು ನಿಷ್ಪ್ರಯೋಜಕರು ಎನ್ನುವವರಿಗೆ ನಕೀಬ್‌ರ ಈ ಇಬ್ಬರು ಹೆಣ್ಣು ಮಕ್ಕಳು ಸ್ಪಷ್ಟ ಉತ್ತರವಾಗಿದ್ದಾರೆ

ಸಂದೇಶ ಇ-ಮ್ಯಾಗಝಿನ್: ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಹೆಣ್ಣುಮಕ್ಕಳು “ನಿಷ್ಪ್ರಯೋಜಕರು” ಎಂದು ಭಾವಿಸಲಾಗುತ್ತದೆ. ಆದರೆ ಅಲ್ ನಕೀಬ್‌ ಅವರ ಈ ಇಬ್ಬರು ಹೆಣ್ಮಮಕ್ಕಳು ಅಮೂಲ್ಯರು. ಈ ಜೋಡಿಯು ತಮ್ಮ ಯಕೃತ್ತಿನ ಭಾಗವನ್ನು ತಮ್ಮ ಅನಾರೋಗ್ಯ ಪೀಡಿತ ತಂದೆಗೆ ದಾನ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿದೆ.

ಯೆಮೆನ್ ಪ್ರಜೆಯಾದ ನಕೀಬ್ ಕೊನೆಯ ಹಂತದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಮತ್ತು ಅವರ ಉಳಿವಿಗಾಗಿ ಯಕೃತ್ತಿನ(ಲಿವರ್) ಕಸಿ ನಿರ್ಣಾಯಕವಾಗಿತ್ತು. ಈ ಸಮಯದಲ್ಲಿ ನಕೀಬ್ ಅವರ ಮೂವರೂ ಮಕ್ಕಳು ತಮ್ಮ ತಂದೆಯನ್ನು ಉಳಿಸಿಕೊಳ್ಳಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಮಂದೆ ಬಂದರು. ತಮ್ಮ ಯಕೃತ್ತನ್ನು ತಂದೆಗೆ ಕಸಿ ಮಾಡಲು ಅನುಮತಿಸಿದರು.

ನಕೀಬ್ ಅವರ ಮಗ ಬೊಜ್ಜು ಹೊಂದಿದ್ದರಿಂದ, ದೆಹಲಿಯ ಅಪೊಲೊ ಆಸ್ಪತ್ರೆಯ ವೈದ್ಯರು ಅವನನ್ನು ಸಂಭಾವ್ಯ ದಾನಿಗಳ ಪಟ್ಟಿಯಿಂದ ನಿರಾಕರಿಸಿದರು. ಆ ನಂತರ ಕುಟುಂಬದ ಕೋರಿಕೆಯ ಮೇರೆಗೆ, ನಕೀಬ್ ಅವರ ಹೆಣ್ಣುಮಕ್ಕಳಾದ ಬಹಜಾ ಮತ್ತು ಸಾರಾ ಅವರನ್ನು ಯಕೃತ್ತಿನ ಕಸಿಗಾಗಿ ಪರಿಗಣಿಸಲಾಯಿತು. ಆದರೆ ಇಬ್ಬರೂ ಹೆಣ್ಣು ಮಕ್ಕಳು 20 ವರ್ಷಕ್ಕಿಂತ ಕಡಿಮೆ ವರ್ಷದವರಾಗಿದ್ದ ಕಾರಣ ಅವರ ದೇಹದಲ್ಲಿ ಅಗತ್ಯ ಪ್ರಮಾಣಕ್ಕಿಂತ ಕಡಿಮೆ ಲಿವರ್ ಇದೆ. ಆದ್ದರಿಂದ ಇದು ತುಂಬಾ ಅಪಾಯಕಾರಿ, ಇಬ್ಬರಿಂದರೂ ಕಸಿ ಮಾಡಬೇಕಾಗ ಬಹುದು. ಡ್ಯುಯಲ್ ಲೋಬ್ ಲಿವರ್ ಕಸಿ ಸಾಧ್ಯ, ಆದರೆ ಇದು ಹೆಚ್ಚು ಸಂಕೀರ್ಣವಾಗಿದೆ ಎಂದು ವೈದ್ಯರು ಕುಟುಂಬವನ್ನು ಎಚ್ಚರಿಸಿದ್ದಾರೆ.

ಆದರೆ ಬೇರೆ ದಾನಿಗಳಿಲ್ಲದ ಕಾರಣ ಕುಟುಂಬದವರ ಒತ್ತಾಯದ ಮೇರೆಗೆ ವೈದ್ಯರು ಕಸಿ ಮಾಡಲು ಸಾಧ್ಯವಿರುವ ಮಾರ್ಗವನ್ನು ಅನ್ವೇಷಿಸುತ್ತಾರೆ. ಕೊನೆಗೆ ರಿಸ್ಕ್ ತೆಗೆದುಕೊಂಡು ನಕೀಬ್ ಅವರ ಮಕ್ಕಳಾದ ಬಹಜಾ ಮತ್ತು ಸಾರಾ ಅವರ ಲಿವರನ್ನೇ ನಕೀಬ್ ಅವರಿಗೆ ಕಸಿ ಮಾಡಿದೆವು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು ಎಂದು ಅಪೋಲೋ ಆಸ್ಪತ್ರೆಯ ಹಿರಿಯ ಪಿತ್ತಜನಕಾಂಗ ಕಸಿ ಸಲಹೆಗಾರ ಡಾ. ಗೋಯಲ್ ಹೇಳಿದರು.

ಕಳೆದ ಮೇ 23 ರಂದು ಈ ಮೂವರ ಶಸ್ತ್ರ ಚಿಕಿತ್ಸೆ ನಡೆದಿದೆ. “ಇಬ್ಬರು ದಾನಿಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದರಿಂದ ನಮ್ಮ ತಂಡದ ಮೇಲೆ ಸಾಕಷ್ಟು ಒತ್ತಡವಿತ್ತು. ರೋಗಿಯು ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದುದರಿಂದ ಶಸ್ತ್ರ ಚಿಕಿತ್ಸೆ ಹೆಚ್ಚಿನ ಅಪಾಯವನ್ನು ಹೊಂದಿತ್ತು. ಆದರೆ ರೋಗಿಗೆ ಹೊಸ ಜೀವನವನ್ನು ನೀಡಲು ನಾವು ಯಶಸ್ವಿಯಾಗಿದ್ದೇವೆ ”ಎಂದು ಡಾ ಗೋಯಲ್ ಹೇಳಿದರು.

Check Also

ತಂದೆ ಇಲ್ಲದೆ ಬೆಳೆದ ಇಲ್ಮಾ ಅಫ್ರೋಝ ಅವರ ಯಶಸ್ವಿ IPS ಪಯಣ

106ಸಂದೇಶ ಇ-ಮ್ಯಾಗಝಿನ್: ನಾನು ಬಡ ಕುಟುಂಬದಲ್ಲಿ ಹುಟ್ಟಿದ್ದು, ನನ್ನ ಬಡತನವೇ ನನ್ನ ಸಾಧನೆಗೆ ಅಡ್ಡಿ ಇಲ್ಲದಿದ್ದಲ್ಲಿ ಸಾಧನೆ ಮಾಡುತ್ತಿದ್ದೆ ಎಂದು …

Leave a Reply

Your email address will not be published. Required fields are marked *