Tuesday , July 23 2019
Breaking News
Home / ವಿಶೇಷ / ಶ್ರೀಲಂಕಾ ಸ್ಪೋಟ: ಕ್ರೈಸ್ತ ಸಮುದಾಯದೊಂದಿಗೆ ಐಕ್ಯತೆ ಪ್ರಕಟಿಸಿದ ಮೈಸೂರಿನ ಮುಸ್ಲಿಮರು

ಶ್ರೀಲಂಕಾ ಸ್ಪೋಟ: ಕ್ರೈಸ್ತ ಸಮುದಾಯದೊಂದಿಗೆ ಐಕ್ಯತೆ ಪ್ರಕಟಿಸಿದ ಮೈಸೂರಿನ ಮುಸ್ಲಿಮರು

ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ಸೋ ಕಾಲ್ಡ್ ಜಿಹಾದಿ ಉಗ್ರರು ಕಳೆದ ಭಾನುವಾರ ಈಸ್ಟರ್ ದಿನದಂದು ಕ್ರೈಸ್ತ ಸಮುದಾಯದ ಪ್ರಾರ್ಥನಾ ಮಂದಿರಗಳಲ್ಲಿ ನಡೆಸಿದ ಸ್ಪೋಟದಲ್ಲಿ 200 ಕ್ಕೂ ಅಧಿಕ ಮಂದಿ ಮೃತ ರಾಗಿದ್ದು, ಈ ದಾಳಿಯ ವಿರುದ್ಧ ಸೆಟೆದು ನಿಂತಿರುವ ಮೈಸೂರಿನ ಮುಸ್ಲಿಮರು ಭಾನುವಾರ ಬೆಳಗ್ಗೆ ನಗರದ ಐತಿಹಾಸಿಕ ಸೈಂಟ್ ಫಿಲೋಮಿನಾ ಚರ್ಚ್‌ನ ಹೊರ ಭಾಗದಲ್ಲಿ ನಿಂತು ಚರ್ಚ್‍೬ಗೆ ಪ್ರಾರ್ಥನೆಗೆ ಆಗಮಿಸುತ್ತಿದ್ದ ಕ್ರೈಸ್ತ ಸಮುದಾಯದ ಭಾಂದವರನ್ನು ಸ್ವಾಗತಿಸಿದರು. ಶ್ರೀಲಂಕಾ ಚರ್ಚ್ ದಾಳಿಯ ಬಳಿಕ ಕ್ರೈಸ್ತ ಸಮುದಾಯದ ಬಾಂಧವರಲ್ಲಿ ಉಂಟಾದ ದುಃಖಕ್ಕೆ ಸಾಂತ್ವನವಾಗಿ ನಿಮ್ಮ ದುಃಖದಲ್ಲಿ ನಾವು ಭಾಗಿದಾರರು ಎಂಬ ಸಂದೇಶವನ್ನು ಸಾರಲು ಜಮಾತೆ ಇಸ್ಲಾಮಿ ಹಿಂದ್ ಘಟಕದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಸಲಾಗಿತ್ತು.

ಕ್ರೈಸ್ತ ಸಮುದಾಯದ ಜೊತೆಗೆ ಐಕ್ಯತೆ ಮೂಡಿಸಲು ಹಾಗೂ ಯಾವುದೇ ಸಮಾಜ ಘಾತುಕ ಉಗ್ರರು ನಮ್ಮ ಐಕ್ಯತೆಯನ್ನು ಮುರಿಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನಾವು ಸಾರಲು ಬಯಸುತ್ತೇವೆ ಎಂದು ಮೈಸೂರು ಜಮಾತೆ ಇಸ್ಲಾಮಿ ಹಿಂದ್ ಘಟಕದ ಅಧ್ಯಕ್ಷ ಮುನವ್ವರ್ ಪಾಷಾ ತಿಳಿಸಿದರು.

Check Also

ಬ್ರೈನ್ ಟ್ಯೂಮರ್ ಪೀಡಿತ ಮಗುವಿನ ಆಟಿಕೆ ಕದ್ದ ಕಳ್ಳರು ಕೊನೆಗೆ ಮಾಡಿದ ಕೆಲಸವೇನು ನೋಡಿ

001ಸಂದೇಶ ಇ-ಮ್ಯಾಗಝಿನ್: ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ 5 ವರ್ಷದ ಬಾಲಕನಿಗೆ ಸೇರಿದ ರೆಸ್ಲಿಂಗ್ ಬೆಲ್ಟನ್ನು ಕದ್ದ ಕಳ್ಳರು ನಂತರ …

Leave a Reply

Your email address will not be published. Required fields are marked *