Monday , July 22 2019
Breaking News
Home / ರಿಯಲ್ ಹೀರೋಸ್ / ತನ್ನ ಉಪವಾಸ ಮುರಿದು ನವಜಾತ ಶಿಶುವಿನ ಜೀವ ಉಳಿಸಿದ ಅಶ್ಪಾಕ್

ತನ್ನ ಉಪವಾಸ ಮುರಿದು ನವಜಾತ ಶಿಶುವಿನ ಜೀವ ಉಳಿಸಿದ ಅಶ್ಪಾಕ್

ಸಂದೇಶ ಇ-ಮ್ಯಾಗಝಿನ್: ಎರಡು ದಿನಗಳೊಳಗಿನ ನವಜಾತ ಶಿಶುವಿಗೆ ರಕ್ತದ ತುರ್ತು ಅಗತ್ಯವಾಗಿತ್ತು. ಆ ಮಗುವಿನ ರಕ್ತದ ಗುಂಪು O- ಇದು ಅಪರೂಪದ ರಕ್ತ ಗುಂಪಾಗಿದೆ. ನವಜಾತ ಶಿಶುವಿನ ಕುಟುಂಬವು ರಕ್ತದಾನಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ ನಂತರ, ಮುಸ್ಲಿಂ ಯುವಕ ಅಶ್ಫಾಕ್ ಕುಟುಂಬವನ್ನು ಸಂಪರ್ಕಿಸಿ ತನ್ನ ರಕ್ತವನ್ನು ಮಗುವಿನೆ ನೀಡಿದ್ದಾರೆ.

ಆರತಿ ಕುಮಾರಿ ಎಂಬ ಮಹಿಳೆ ಬಿಹಾರದ ದರ್ಬಂಗದಲ್ಲಿನ ದರ್ಬಂಗ ಮೆಡಿಕಲ್ ಕಾಲೇಜಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹುಟ್ಟಿದ ಕೂಡಲೇ ನವಜಾತ ಮಗುವಿನ ಸ್ಥಿತಿಯು ಹದಗೆಟ್ಟಿತು. ಮಗುವಿಗೆ ರಕ್ತದ ಅಗತ್ಯವಿದ್ದು, ಅವಳ ರಕ್ತದ ಗುಂಪು O- ಅಪರೂಪದ್ದಾಗಿದೆ ಎಂದು ವೈದ್ಯರು ತಿಳಿಸಿದ್ದರು. ಪರಿಣಾಮವಾಗಿ ಕುಟುಂಬಕ್ಕೆ ಆ ಗುಂಪಿನ ರಕ್ತವನ್ನು ಹುಡುಕುವುದು ಕಷ್ಟಕರವಾಗಿತ್ತು. ನವಜಾತ ಶಿಶುವಿನ ತಂದೆ ರಮೇಶ್ ಕುಮಾರ್ ಸಿಂಗ್ ಪೊಲೀಸ್ ಅಧಿಕಾರಿಯಾಗಿದ್ದು ಡ್ಯೂಟಿಯ ನಿಮಿತ್ತ ಹೋಗಿದ್ದರಿಂದ ಮನೆಯಲ್ಲಿ ಇರಲಿಲ್ಲ. ಈ ಕಾರಣದಿಂದಾಗಿ ಕುಟುಂಬವು ರಕ್ತ ದಾನ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿಮಾಡಿತ್ತು.

ಅಶ್ಫಾಕ್ ಕುಟುಂಬದ ಮನವಿಗೆ ಸ್ಪಂದಿಸಿ ಆಸ್ಪತ್ರೆಗೆ ರಕ್ತದಾನ ಮಾಡಲು ಬಂದಾಗ ವೈದ್ಯರು ಅಶ್ಪಾಕ್ ಅವರ ರಕ್ತವನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಅಶ್ಪಾಕ್ ಉಪವಾಸ ಮಾಡುತ್ತಿರುವುದರಿಂದ ಅವರು ರಕ್ತವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಅಶ್ಫಾಕ್ ನವಜಾತ ಜೀವನವನ್ನು ರಕ್ಷಿಸಲು ತನ್ನ ರಕ್ತವನ್ನು ತೆಗೆದುಕೊಳ್ಳಬೇಕೆಂದು ಎಷ್ಟೆ ಮನವಿ ಮಾಡಿಕೊಂಡರು ವೈದ್ಯರು ಒಪ್ಪಲಿಲ್ಲ. ನೀವು ಬೆಳಗ್ಗಿನಿಂದ ಏನನ್ನೂ ತಿಂದಿಲ್ಲದ ಕಾರಣ ಖಾಲಿ ಹೊಟ್ಟೆಯಲ್ಲಿರುವ ನಿಮ್ಮ ರಕ್ತವನ್ನು ತೆಗೆಯಲು ಸಾಧ್ಯವಿಲ್ಲ ಎಂದು ವೈದ್ಯರು ಕಡಾ ಖಂಡಿತವಾಗಿ ನಿರಾಕರಿಸಿ ಬಿಟ್ಟರು.

ನಂತರ ನವಜಾತ ಶಿಶುವಿನ ಜೀವವನ್ನು ಉಳಿಸಲು ಅಶ್ಫಾಕ್ ತನ್ನ ಉಪವಾಸವನ್ನು ಮುರಿಯಲು ನಿರ್ಧರಿಸಿದರು. ನನ್ನ ರೋಜಾವನ್ನು ಮುಂದಿನ ದಿನಗಳಲ್ಲಿ ನಾನು ಪೂರೈಸಲು ಸಾಧ್ಯವಿದೆ. ಆದರೆ ಒಮ್ಮೆ ಸತ್ತ ವ್ಯಕ್ತಿಯನ್ನು ಮತ್ತೆ ಬದುಕಿಸಲು ಸಾಧ್ಯವಿಲ್ಲ. ಆದುದರಿಂದ ನಾನು ನನ್ನ ಉಪವಾಸ ಮುರಿದಾದರೂ ಮಗುವಿಗೆ ಜೀವಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ಬಯಸಿದೆ ಎಂದರು.

ನವಜಾತ ಶಿಶುವಿನ ಅಜ್ಜಿ ಸುದ್ದಿಗಾರರೊಂದಿಗೆ ಮಾತನಾಡಿ ನಾವು ಹಿಂದೂ ಅಥವಾ ಮುಸ್ಲಿಂ ಎಂದು ಜನರನ್ನು ಭೇದಿಸುವುದಿಲ್ಲ. ಅಶ್ಫಾಕ್ ನಂತಹ ಒಳ್ಳೆಯ ಹೃದಯವಿರುವ ಜನರಲ್ಲಿ ದೇವರನ್ನು ಕಾಣುತ್ತೇವೆ ಎಂದು ಹೇಳಿದ್ದಾರೆ.

Check Also

ನನ್ನಿಂದ ಇಷ್ಟೇ ಸಾಧ್ಯ ಇದರಿಂದ ಆ ಅನಾಥ ಮಕ್ಕಳಿಗೆ ಏನಾದರೂ ಖರೀದಿಸಿಕೊಡು

000ಸಂದೇಶ ಇ-ಮ್ಯಾಗಝಿನ್: ನನ್ನನ್ನು ಅಪಾರವಾಗಿ ಕಾಡಿದ ಈ ವ್ಯಕ್ತಿಯ ಬಗ್ಗೆ ಬರೆಯಬೇಕು ಅಂತ ಬಯಸಿದೆ. ಇವರ ಹೆಸರು ಬಾಷಾ, 82 …

Leave a Reply

Your email address will not be published. Required fields are marked *