Friday , November 15 2019
Breaking News
Home / ರಾಷ್ಟ್ರೀಯ / ಬುರ್ಖಾ ಧರಿಸಿದ ಕಾರಣಕ್ಕೆ ಮುಸ್ಲಿಮ್ ಮಹಿಳೆಯರಿಗೆ ಲಕ್ನೋ ಮೆಟ್ರೋದಲ್ಲಿ ಪ್ರಯಾಣ ನಿಷೇಧ

ಬುರ್ಖಾ ಧರಿಸಿದ ಕಾರಣಕ್ಕೆ ಮುಸ್ಲಿಮ್ ಮಹಿಳೆಯರಿಗೆ ಲಕ್ನೋ ಮೆಟ್ರೋದಲ್ಲಿ ಪ್ರಯಾಣ ನಿಷೇಧ

ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ರಾಜಧಾನಿ ಲಕ್ನೌದಲ್ಲಿ ಮೆಟ್ರೊ ನಿಲ್ದಾಣದಲ್ಲಿ ಸುರಕ್ಷತಾ ಕಾವಲುಗಾರರು ಬುರ್ಖಾ ಧರಿಸಿದ ಕಾರಣ ಮುಸ್ಲಿಂ ಮಹಿಳೆಯರನ್ನು ಪ್ರಯಾಣಿಸದಂತೆ ತಡೆದ ಪ್ರಕರಣ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಮಹಿಳೆಯರು ಬುರ್ಖಾವನ್ನು ತೆಗೆದುಹಾಕಲು ನಿರಾಕರಿಸಿದ್ದರು. ಬಳಿಕ ಅವರಿಗೆ ಪ್ರಯಾಣ ನಿಷೇಧಿಸಲಾಯಿತು ಎನ್ನಾಲಗಿದೆ. ಈ ಐದು ಮಹಿಳೆಯರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮಾಹಿತಿ ಪ್ರಕಾರ, ಮಂಗಳವಾರ ಸಂಜೆ ಮಹಿಳೆಯರು ಮೈವಾಯಾ ನಿಲ್ದಾಣಕ್ಕೆ ತಲುಪಿದ್ದು, ಟೋಕನ್ ಅನ್ನು ತೆಗೆದುಕೊಂಡ ನಂತರ ಮೆಟಲ್ ಡಿಟೆಕ್ಟರ್‌ನ ಮುಂದೆ ಬಂದ ತಕ್ಷಣ ಅಲ್ಲಿದ್ದ ಸಿಬ್ಬಂದಿ ಬುರ್ಕಾವನ್ನು ತೆಗೆದುಹಾಕುವಂತೆ ತಿಳಿಸಿದರು. ಅದು ವಿವಾದವಾಯಿತು. ಮಹಿಳೆಯರು ಲಕ್ನೋ ಮೆಟ್ರೋದ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರು. ಮೆಟ್ರೊ ರೈಲು ನಿರ್ದೇಶಕ ಸುಶೀಲ್ ಕುಮಾರ್ ಸಿ.ಸಿ.ಟಿ.ವಿ ತುಣುಕನ್ನು ಪರಿಶೀಲಿಸಿದ ನಂತರ ಈ ಬಗ್ಗೆ ಕ್ರಮದ ಕುರಿತು ಮಾತನಾಡಿದರು.

ಲಕ್ನೋ ಮೆಟ್ರೋ ಸೆಕ್ಯುರಿಟಿ ಕಮಿಷನರ್ ಐ.ಎಸ್. ರಾವತ್ ಅವರು ಮೆಟ್ರೋ ಗಾರ್ಡ್‌ಗಳಿಂದ ತಪ್ಪು ಸಂಭವಿಸಿದೆ. ಅವರು ಮಹಿಳೆಯರನ್ನು ಒತ್ತಾಯ ಮಾಡಬಾರದಿತ್ತು. ಗಾರ್ಡ್‌ಗಳು ಮಹಿಳೆಅರ ಮುಖ ಸಿಸಿಟಿವಿಯಲ್ಲಿ ಕಾಣಬೇಕು ಎಂದು ಬಯಸಿದ್ದರು ಎಂದಿದ್ದಾರೆ. ಏತನ್ಮಧ್ಯೆ, ಕುಟುಂಬದ ಮುಖ್ಯಸ್ಥ ಎಮ್. ಅಹ್ಮದ್ ಲಖನೌ ಮೆಟ್ರೊ ರೈಲ್ ಕಾರ್ಪೊರೇಶನ್‌ಗೆ ದೂರು ಸಲ್ಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *