Sunday , September 22 2019
Breaking News
Home / ರಾಷ್ಟ್ರೀಯ / ಆತ ನನಗೆ ಇಫ್ತಾರ್ ಮಾಡಲು ಸ್ವಲ್ಪ ನೀರು ಕೊಡಿ ಎಂದರು, ಏರ್‌‍ಹೋಸ್ಟೆಸ್ ನೀಡಿದ್ದೇನು ನೋಡಿ

ಆತ ನನಗೆ ಇಫ್ತಾರ್ ಮಾಡಲು ಸ್ವಲ್ಪ ನೀರು ಕೊಡಿ ಎಂದರು, ಏರ್‌‍ಹೋಸ್ಟೆಸ್ ನೀಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಭಾರತವು ಒಂದು ವೈವಿಧ್ಯಮಯ ದೇಶ ಇಲ್ಲಿ ಹಿಂದು ಮುಸ್ಲಿಮರು ಹಾಗೂ ಇನ್ನಿತರ ಧರ್ಮದ ಜನರು ತಮ್ಮ ತಮ್ಮ ವಿಶ್ವಾಸವನ್ನು ಅನುಸರಿಸಿ ಬೇರೆ ಧರ್ಮದ ಜನರ ವಿಶ್ವಾಸವನ್ನು ಗೌರವಿಸಿ ಬದುಕುತ್ತಾರೆ. ಕೆಟ್ಟವರು ಇಲ್ಲಾ ಅಂತಲ್ಲ ಇದ್ದಾರೆ. ಆದರೆ ಕೆಟ್ಟವರಿಗಿಂತ ಒಳ್ಳೆಯ ಜನರು ಇತರರ ಭಾವನೆಗಳನ್ನು ಗೌರವಿಸುವ ಜನರು ನಮ್ಮ ದೇಶದಲ್ಲಿ ಇರುವಷ್ಟು ಇತರ ಯಾವ ದೇಶದಲ್ಲೂ ಇಲ್ಲ ಎಂಬುದು ಹೆಮ್ಮೆಯ ಸಂಗತಿ.

ಜನತಾಕಾ ರಿಪೋರ್ಟರ್ ಆನ್‌ಲೈನ್ ಪೋರ್ಟಲ್‌ನ ಮುಖ್ಯಸ್ಥ ರಿಫಾತ್ ಜಾವೆದ್ ಅವರು ಇತ್ತೀಚೆಗೆ ತಮಗಾದ ಒಂದು ಅನುಭವವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಿಫಾತ್ ಅವರು ದೆಹಲಿಯಿಂದ ಗೋರಖ್‌ಪುರ್‌ಗೆ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು.

ಉಪವಾಸಿಗನಾಗಿದ್ದ ರಿಫಾತ್ ಜಾವೆದ್ ವಿಮಾನ ಪ್ರಯಾಣದ ಮಧ್ಯೆ ಇಫ್ತಾರ್ ಮಾಡುವ ಸಮಯವಾಗಿತ್ತು. ಇದಕ್ಕಾಗಿ ರಿಫಾತ್ ಜಾವೆದ್ ಅವರು ವಿಮಾನದಲ್ಲಿ ಸೇವೆ ನಿರ್ವಹಿಸುತ್ತಿದ್ದ ಏರ್ ಹೋಸ್ಟೆಸ್ ಮಂಜುಳಾ ಅವರನ್ನು ಕರೆದು ನನಗೆ ಸ್ವಲ್ಪ ನೀರು ಕೊಡಿ ನಾನು ಇಫ್ತಾರ್ ಮಾಡಬೇಕು ಎಂದು ಕೇಳಿಕೊಳ್ಳುತ್ತಾರೆ.

ಹಾಗೆ ಹೋದ ಏರ್‌ಹೋಸ್ಟೆಸ್ ಹಿಂದಿರುಗುವಾಗ ನೀರಿನ ಬಾಟಲಿಯ ಜೊತೆಗೆ ಎರಡು ಸ್ಯಾಂಡ್‌ವಿಚ್ ಕೂಡ ತಂದು ರಿಫಾತ್ ಕೈಗಿಟ್ಟರು. ಪ್ಲೀಸ್ ನಿಮಗೆ ಇನ್ನೂ ಏನಾದರೂ ಬೇಕಾದಲ್ಲಿ ಕೇಳಲು ಹಿಂಜರಿಯದಿರಿ ಎಂದು ಮಂಜುಳಾ ವಿನಯ ಪೂರ್ವಕವಾಗಿ ಹೇಳಿದರು.

ತನ್ನ ಟ್ವೀಟ್‌ನಲ್ಲಿ ಈ ಬಗ್ಗೆ ಬರೆದಿರುವ ರಿಫಾತ್ ನನಗೆ ಹೆಚ್ಚು ಏನೂ ಬೇಕಾಗಿರಲಿಲ್ಲ. ಮಂಜುಳಾ ಅವರ ನಡತೆ ಹಾಗೂ ಅವರ ವಿನಯ ಪೂರ್ವಕ ಸೇವೆಯಿಂದಲೇ ನನ್ನ ಹೊಟ್ಟೆ ತುಂಬಿತ್ತು. ಇದು ನನ್ನ ಭಾರತ ಎಂದು ಬರೆದಿದ್ದಾರೆ. ರಿಫಾತ್ ಅವರ ಟ್ವೀಟ್‌ ವೈರಲ್ ಆಗಿದ್ದು, ಏರ್‌ಹೋಸ್ಟೆಸ್ ಮಂಜುಳಾ ಅವರ ಕಾರ್ಯವನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.

Check Also

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಯೋಧ ಆರಿಫ್ ಖಾನ್ ಹುತಾತ್ಮ

001ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನ ಸೋಮವಾರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಜಮ್ಮು ಕಾಶ್ಮೀರದ ರಾಜೋರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. …

Leave a Reply

Your email address will not be published. Required fields are marked *