Tuesday , December 10 2019
Breaking News
Home / ಭಾರತೀಯ ಮುಸ್ಲಿಮರು / ಭಾರತೀಯ ಮುಸ್ಲಿಮರು ಅತಿ ದೊಡ್ಡ ದೇಶಭಕ್ತರು: CSDS ಸಮೀಕ್ಷಾ ವರದಿ

ಭಾರತೀಯ ಮುಸ್ಲಿಮರು ಅತಿ ದೊಡ್ಡ ದೇಶಭಕ್ತರು: CSDS ಸಮೀಕ್ಷಾ ವರದಿ

ಸಂದೇಶ ಇ-ಮ್ಯಾಗಝಿನ್: ಸೆಂಟರ್ ಫಾರ್ ಸ್ಟಡೀಸ್ ಆಫ್ ಡೆವಲಪ್‌ಮೆಂಟ್ ಸೊಸಾಯಿಟೀಸ್ (CSDS) ಸಾಮಾಜಿಕ ಜಾಲತಾಣ ಹಾಗೂ ಜನರ ಮಧ್ಯೆ ನೇರವಾಗಿ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಭಾರತೀಯ ಮುಸ್ಲಿಮರನ್ನು ಅತಿದೊಡ್ಡ ದೇಶಭಕ್ತರು ಎನ್ನಲಾಗಿದೆ. ದೇಶದ 211 ಲೋಕಸಭಾ ಕ್ಷೇತ್ರದ ಸುಮಾರು 24 ಸಾವಿರ ಜನರನ್ನು ಸಂಪರ್ಕಿಸಿ ಈ ಅಧ್ಯಯನ ವರದಿ ಸಿದ್ಧ ಪಡಿಸಲಾಗಿದೆ.

ದೇಶದ 26 ರಾಜ್ಯಗಳಲ್ಲಿ ಎಪ್ರಿಲ್-ಮೇ ತಿಂಗಳ ನಡುವೆ ನಡೆಸಲಾದ ಈ ಸಮೀಕ್ಷೆಯಲ್ಲಿ ದಿನಂಪ್ರತಿ ಸಾಮಾಜಿಕ ಜಾಲತಾಣ ಬಳಸುವವರನ್ನು ಮತ್ತು ವಾರಕ್ಕೊಮ್ಮೆ ಬಳಸುವವರನ್ನು ಮಾತಾಡಿಸಲಾಗಿದೆ. ಮತ್ತು ಇದರ ಹೊರತು ಸೋಶಿಯಲ್ ಮೀಡಿಯಾ ಬಳಸದ ಜನರನ್ನು ನೇರವಾಗಿಯೂ ಮಾತಾಡಿಸಿ ಮಾಹಿತಿ ಪಡೆಯಲಾಗಿದೆ.

ಸಾಮಾಜಿಕ ಜಾಲತಾಣ ಬಳಸುವ ಮತ್ತು ಬಳಸದ ಜನರ ಅನಿಸಿಕೆಗಳನ್ನು ಬೇರೆ ಬೇರೆಯಾಗಿ ಪರಿಗಣಿಸಿ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದ್ದು, ಸಾಮಾಜಿಕ ಜಾಲತಾಣ ಬಳಸುವ ಜನರಲ್ಲಿ 28 % ಜನರು ಭಾರತೀಯ ಮುಸ್ಲಿಮರು ಇತರ ಧರ್ಮೀಯರಿಗಿಂತ ಅತ್ಯಧಿಕ ರಾಷ್ಟ್ರಪ್ರೇಮಿಗಳಾಗಿದ್ದಾರೆ ಎಂದಿದ್ದಾರೆ. ಕೇವಲ 15 % ಜನರು ಮಾತ್ರ ಭಾರತೀಯ ಮುಸ್ಲಿಮರನ್ನು ದೇಶದ್ರೋಹಿಗಳು ಎಂದಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾ ಬಳಸದ ಜನರ ವಿಚಾರಕ್ಕೆ ಬಂದರೆ ಅಲ್ಲಿ 21% ಮಂದಿ ಮುಸ್ಲಿಮರನ್ನು ಅತ್ಯಂತ ದೊಡ್ಡ ದೇಶ ಭಕ್ತರು ಎಂದಿದ್ದಾರೆ. ಕೇವಲ 12%ಮಂದಿ ಮಾತ್ರ ಮುಸ್ಲಿಮರನ್ನು ದೇಶದ್ರೋಹಿಗಳು ಎಂದಿದ್ದಾರೆ.

ಭಾರತ ಹಿಂದೂ ರಾಷ್ಟ್ರವೇ ಎಂದು ಕೇಳಲಾದ ಪ್ರಶ್ನೆಗೆ ಸಾಮಾಜಿಕ ಜಾಲತಾಣ ಬಳಸುವ ಜನರಲ್ಲಿ 19% ಜನರು ಹೌದು ಎಂದಿದ್ದಾರೆ. 75‍ % ಮಂದಿ ಭಾರತ ಒಂದು ಜಾತ್ಯಾತೀತ ರಾಷ್ಟ್ರ ಎಂದಿದ್ದಾರೆ. ಇನ್ನು ಸಾಮಾಜಿಕ ಜಾಲತಾಣ ಬಳಸದವರ ವಿಚಾರಕ್ಕೆ ಬಂದರೆ, 17% ಜನರು ಭಾರತ ಹಿಂದೂ ರಾಷ್ಟ್ರ ಎಂದಿದ್ದಾರೆ. 73% ಜನರು ಇದಕ್ಕೆ ವಿರುದ್ಧವಾಗಿ ಉತ್ತರಿಸಿದ್ದಾರೆ.

ಈ ಸಮೀಕ್ಷೆ ನಡೆಸಲು ಸಂಸ್ಥೆಯು ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಬಳಕೆದಾರರನ್ನು ಬಳಸಿಕೊಂಡಿತ್ತು. ಈ ಸಮೀಕ್ಷೆ ನಡೆಸಿದ ಸಂಸ್ಥೆಯ ಉದ್ದೇಶ ವರ್ತಮಾನ ರಾಜಕಾರಣದಲ್ಲಿ ಸ್ಮಾರ್ಟ್ಫೊನ್ ಬಳಕೆದಾರರು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಿದ್ದಾರೆ ಎಂಬುದನ್ನು ಅರಿಯುವುದಾಗಿತ್ತು.

Check Also

ಕೇಂದ್ರೀಯ ಹಜ್ ಕಮಿಟಿಯ ವತಿಯಿಂದ ಮುಸ್ಲಿಮ್ ಅಭ್ಯರ್ಥಿಗಳಿಗೆ ಉಚಿತ ಐಎ‌ಎಸ್ ಕೋಚಿಂಗ್: ಅರ್ಜಿ ಆಹ್ವಾನ

ಸಂದೇಶ ಇ-ಮ್ಯಾಗಝಿನ್: ಕೇಂದ್ರೀಯ ಹಜ್ ಕಮಿಟಿಯ ಪರವಾಗಿ ಬರುವ ಸಾಲಿನ ಐಎ‌ಎಸ್ ಪರೀಕ್ಷೆ ಬರೆಯುವ ಮುಸ್ಲಿಮ್ ಅಭ್ಯರ್ಥಿಗಳಿಗೆ ನಿಶುಲ್ಕ ಕೋಚಿಂಗನ್ನು …

Leave a Reply

Your email address will not be published. Required fields are marked *