Monday , August 26 2019
Breaking News
Home / ಗಲ್ಫ್ ಸುದ್ದಿ / ಮಕ್ಕಾ: ಉಮ್ರಾ ಯಾತ್ರಾರ್ಥಿಗಳ ವೀಕ್ಷಣೆಗಾಗಿ ತೆರೆದ ಮಕ್ಕಾ ಕ್ಲಾಕ್ ಟವರ್ ಮ್ಯೂಸಿಯಂ

ಮಕ್ಕಾ: ಉಮ್ರಾ ಯಾತ್ರಾರ್ಥಿಗಳ ವೀಕ್ಷಣೆಗಾಗಿ ತೆರೆದ ಮಕ್ಕಾ ಕ್ಲಾಕ್ ಟವರ್ ಮ್ಯೂಸಿಯಂ

ಸಂದೇಶ ಇ-ಮ್ಯಾಗಝಿನ್: ಮಕ್ಕಾ ಉಮ್ರಾ ಯಾತ್ರಿಗಳಿಗೆ ಮಕ್ಕಾ ಕ್ಲಾಕ್ ಟವರ್‌ನಲ್ಲಿ ಮ್ಯೂಸಿಯಂ ತೆರೆಯಲಾಗಿದೆ. ನಾಲ್ಕು ಮಹಡಿಯ ಈ ವಸ್ತುಸಂಗ್ರಹಾಲಯವು ಇಡೀ ರಂಝಾನ್ ತಿಂಗಳಲ್ಲಿ ಪ್ರವಾಸಿಗರಿಗಾಗಿ ತೆರೆದಿರಲಿದೆ.

ಮೊದಲ ಮಹಡಿಯಲ್ಲಿ ಸೌರಮಂಡವನ್ನು ಚಿತ್ರಿಸಲಾಗಿದೆ ಮತ್ತು ಸಮಯದ ನಿರ್ಣಯ ಮತ್ತು ಗ್ಯಾಲಕ್ಸಿ ಗ್ರಹಗಳ ಪರಿಭ್ರಮಣೆಯನ್ನು ವಿವರಿಸಲಾಗಿದೆ. ಈ ಟವರ್ ವಿಶ್ವದಲ್ಲೇ ಅತಿ ದೊಡ್ಡದೆನ್ನಲಾದ ಗಡಿಯಾರವನ್ನು ಹೊಂದಿದೆ ಎನ್ನಲಾಗಿದೆ.

ಟವರ್‌ನ ಎರಡನೇ ಮಹಡಿಯಲ್ಲಿ, ವಿವಿಧ ಶತಮಾನಗಳಲ್ಲಿ ಬಳಕೆಯಾಗುತ್ತಿದ್ದ ಗಡಿಯಾರಗಳ ಉತ್ಪಾದನೆಯನ್ನು ತೋರಿಸಲಾಗಿದೆ. ಮೂರನೇ ಮಹಡಿಯಲ್ಲಿ ಸೌರವ್ಯೂಹದ ವಿವಿಧ ರಹಸ್ಯಗಳನ್ನು ತೋರಿಸಲಾಗಿದೆ. ಸೂರ್ಯ ಮತ್ತು ಚಂದ್ರ ಗ್ರಹಣಗಳ ವಿದ್ಯಮಾನವನ್ನೂ ಇಲ್ಲಿ ಪ್ರದರ್ಶಿಸಲಾಗಿದೆ. ನಾಲ್ಕನೇ ಮಹಡಿಯಲ್ಲಿ ಆಕಾಶ ಮಂಡಲ ಮತ್ತು ಗ್ರಹಗಳ ವಿವರಗಳನ್ನು ನೀಡಲಾಗಿದೆ.

ಮಕ್ಕಾದ ಈ ಅತ್ಯುನ್ನತ ಕ್ಲಾಕ್ ಟವರ್‌ನ ಕೊನೆಯ ತುದಿಯನ್ನು ‘ಶರಾಫಾ’ ಎಂದು ಕರೆಯಲಾಗುತ್ತದೆ. ಯಾತ್ರಾರ್ಥಿಗಳು ಇಲ್ಲಿಂದ ಮಕ್ಕಾ ನಗರವನ್ನು ವೀಕ್ಷಿಸಬಹುದು ಮತ್ತು ಸುಂದರವಾದ ಹರಾಮ್-ಇ-ಶರೀಫ್ (ಕಾಬಾ) ದೃಶ್ಯವನ್ನು ನೋಡಬಹುದು. ತನ್ನ ಅತ್ಯುನ್ನತ ಎತ್ತರದಿಂದಾಗಿ ಈ ಕ್ಲಾಕ್ ಟವರನ್ನು ಸುಮಾರು 25 ಕಿ.ಮೀ ದೂರದಲ್ಲಿರುವ ವ್ಯಕ್ತಿಯೂ ಕಾಣಬಹುದು.

Check Also

ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

103ಸಂದೇಶ ಇ-ಮ್ಯಾಗಝಿನ್: ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ಸಂತ್ರಸ್ತರ 200 ಕುಟುಂಬ ಸದಸ್ಯರಿಗೆ ಈ ಬಾರಿಯ ಹಜ್ ಆತಿಥ್ಯ ವಹಿಸುವಂತೆ ಸೌದಿ …

Leave a Reply

Your email address will not be published. Required fields are marked *