Monday , July 22 2019
Breaking News
Home / ರಿಯಲ್ ಹೀರೋಸ್ / ಮಕ್ಕಳ ಆಸ್ಪತ್ರೆಯಲ್ಲಿ ಸೆಖೆಯಿಂದ ಮಕ್ಕಳು ಕಷ್ಟ ಪಡುತ್ತಿದ್ದಾಗ ಈ ಸಹೃದಯಿ ಜಿಲ್ಲಾಧಿಕಾರಿ ಮಾಡಿದ್ದೇನು ನೋಡಿ

ಮಕ್ಕಳ ಆಸ್ಪತ್ರೆಯಲ್ಲಿ ಸೆಖೆಯಿಂದ ಮಕ್ಕಳು ಕಷ್ಟ ಪಡುತ್ತಿದ್ದಾಗ ಈ ಸಹೃದಯಿ ಜಿಲ್ಲಾಧಿಕಾರಿ ಮಾಡಿದ್ದೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಜಿಲ್ಲಾಧಿಕಾರಿ ತನ್ನ ಕಛೇರಿಯಲ್ಲಿದ್ದ ಏರ್ ಕಂಡಿಷನರ್‌ಗಳನ್ನು ಮಕ್ಕಳ ಆಸ್ಪತ್ರೆಗೆ ಅಳವಡಿಸಿ ಸುದ್ದಿಯಾಗಿದ್ದಾರೆ. ಈ ವರ್ಷ ಬೇಸಗೆಯಲ್ಲಿ ನಮ್ಮ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಸಿಯ ಝಳ ಎಷ್ಟರ ಮಟ್ಟಿಗೆ ಏರಿಕೆಯಾಗಿದೆ ಎಂಬುದು ಈಗಾಗಲೇ ಗೊತ್ತಿರುವ ವಿಷಯ. ಬಿಸಿಲಿನ ತಾಪಕ್ಕೆ ಕೆಲವು ಕಡೆ ಜೀವ ಕೂಡ ಹೋಗಿದೆ.

ಕುಪೋಷಣೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ಪೋಷಣೆ ಪುನರ್ವಸತಿ ಕೇಂದ್ರಗಳಲ್ಲಿ (NRC) ಮಕ್ಕಳು ಏರಿಕೆಯಾಗಿರುವ ಬಿಸಿಲಿನ ತಾಪದಿಂದ ಕಷ್ಟ ಪಡುತ್ತಿದ್ದಾರೆ ಎಂಬುದನ್ನು ಅರಿತು ಜಿಲ್ಲಾಧಿಕಾರಿ ಸ್ವರೋಚಿಶ್ ಸೊಮಾವಂಶಿ ತಮ್ಮ ಕೋಣೆ ಹಾಗೂ ಕಚೇರಿಯಲ್ಲಿದ್ದ ಎಲ್ಲಾ ಏರ್ ಕಂಡಿಷನರ್‌ಗಳನ್ನು ತೆಗೆಸಿ ಆಸ್ಪತ್ರೆಗೆ ನೀಡಿದ್ದಾರೆ.

ನನ್ನ ಅಧಿಕಾರ ಸ್ಥಾನದ ಅಡಿಯಲ್ಲಿ ಬರುವ 4 ಪೋಷಣೆ ಪುನರ್ವಸತಿ ಕೇಂದ್ರಗಳಲ್ಲಿ ಏರ್ ಕಂಡಿಷನರ್‌ಗಳನ್ನು ಅಳವಡಿಸುವ ನಿರ್ಧಾರ ಸ್ವಾಭಾವಿಕವಾದುದು, ಮೊದಲೇ ಕುಪೋಷಣೆಯಲ್ಲಿರುವ ಮಕ್ಕಳು ಅಲ್ಲಿ ನಿಜಕ್ಕೂ ತಾಪಮಾನ ಏರಿಕೆಯಿಂದ ಕಂಗೆಟ್ಟು ಅವರ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆ ಇತ್ತು ಎಂದಿದ್ದಾರೆ.

ಪೋಷಣೆ ಪುನರ್ವಸತಿ ಸೆಂಟರ್ ಕಟ್ಟಡದೊಳಗೆ ನಿಜವಾಗಿಯೂ ಬಿಸಿಯಾಗಿತ್ತು. ನಾವು ಏರ್ ಕಂಡಿಷನರ್ಗಳಿಗೆ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೆವು. ಆದರೆ ವಿವಿಧ ಕಾರಣಗಳಿಂದಾಗಿಅ ದು ವಿಳಂಬವಾಗಿತ್ತು. ಇದೀಗ ಅಲ್ಲಿ ಮಕ್ಕಳನ್ನು ಅಡ್ಮಿಟ್ ಮಾಡಿರುವ ಕಾರಣ ತಕ್ಷಣಕ್ಕೆ ಲಭ್ಯವಿರುವ ನಮ್ಮ ಕಚೇರಿಯ ಏರ್ ಕಂಡಿಷನರ್‌‌ಗಳನ್ನೆ ಅಳವಡಿಸಲು ತೀರ್ಮಾನಿಸಿದೆವು ಎಂದು ಜಿಲ್ಲಾಧಿಕಾರಿ ಸ್ವರೋಚಿಶ್ ಸೊಮಾವಂಶಿ ಹೇಳಿದ್ದಾರೆ.

“ಪೌಷ್ಟಿಕತೆರಹಿತ ಮಕ್ಕಳಲ್ಲಿ, ಶಾಖವು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೊರತು ಇದು ಒಂದು ಉದಾರ ಪ್ರಯತ್ನವಲ್ಲ. ಕೇಂದ್ರದಲ್ಲಿ ರೋಗಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿ” ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಸ್ವರೋಚಿಶ್ ಸೊಮಾವಂಶಿ ಅವರ ಈ ಮಾನವೀಯ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಪಬ್ಲಿಕ್ ಸರ್ವಿಸ್ ಕೆಲಸವೆಂದರೆ ತನ್ನ ಮೂಗಿನ ನೇರಕ್ಕೆ ತನ್ನ ಅನುಕೂಲಕ್ಕೆ ಎಂದು ವರ್ತಿಸುವ ಅಧಿಕಾರಿಗಳ ಮಧ್ಯೆ ಸ್ವರೋಚಿಶ್ ಸೊಮಾವಂಶಿ ಭಿನ್ನರಾಗಿ ನಿಲ್ಲುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Check Also

ನನ್ನಿಂದ ಇಷ್ಟೇ ಸಾಧ್ಯ ಇದರಿಂದ ಆ ಅನಾಥ ಮಕ್ಕಳಿಗೆ ಏನಾದರೂ ಖರೀದಿಸಿಕೊಡು

000ಸಂದೇಶ ಇ-ಮ್ಯಾಗಝಿನ್: ನನ್ನನ್ನು ಅಪಾರವಾಗಿ ಕಾಡಿದ ಈ ವ್ಯಕ್ತಿಯ ಬಗ್ಗೆ ಬರೆಯಬೇಕು ಅಂತ ಬಯಸಿದೆ. ಇವರ ಹೆಸರು ಬಾಷಾ, 82 …

Leave a Reply

Your email address will not be published. Required fields are marked *