Sunday , September 22 2019
Breaking News
Home / ಅಂತಾರಾಷ್ಟ್ರೀಯ / ತಾಯಿಯ ಕಾಲಡಿಯಲ್ಲಿ ಸ್ವರ್ಗ; ಎರ್ದೋಗಾನ್ ತಾಯಂದಿರ ದಿನದ ಮಹತ್ವದ ಸಂದೇಶ

ತಾಯಿಯ ಕಾಲಡಿಯಲ್ಲಿ ಸ್ವರ್ಗ; ಎರ್ದೋಗಾನ್ ತಾಯಂದಿರ ದಿನದ ಮಹತ್ವದ ಸಂದೇಶ

ಸಂದೇಶ ಇ-ಮ್ಯಾಗಝಿನ್: ಟರ್ಕಿಯ ಅಧ್ಯಕ್ಷ ರೆಸೆಪ್ ತೆಯ್ಯಿಬ್ ಎರ್ದೋಗಾನ್ ಅವರು ವಿಶ್ವ ತಾಯಂದಿರ ದಿನದಂದು ಸಂದೇಶ ನೀಡುತ್ತಾ, ತಾಯಿ ಕರುಣೆ ಮತ್ತು ಸ್ವ ತ್ಯಾಗದ ಸಂಕೇತವಾಗಿದ್ದಾರೆ ಎಂದು ಹೇಳಿದರು. ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸುವಲ್ಲಿ ತಾಯಂದಿರು ಪಾತ್ರ ವಹಿಸಿದ್ದಾರೆ ಎಂದ ಎರ್ದೋಗಾನ್, ನಮ್ಮ ತಾಯಂದಿರು ನಮಗೆ ಪ್ರೀತಿ, ಗೌರವ, ಐಕಮತ್ಯ, ಪಾಲುದಾರಿಕೆ ಮತ್ತು ಸಹಿಷ್ಣುತೆಗಳನ್ನು ಕಲಿಸುತ್ತಾರೆ. ನಮ್ಮ ದೇಶದಲ್ಲಿ ಸಂತೋಷ ಮತ್ತು ಶಾಂತಿಯನ್ನು ಸ್ಥಾಪಿಸುವಲ್ಲಿ ನಮ್ಮ ತಾಯಂದಿರು ನಮಗೆ ಹೆಚ್ಚಿನ ಸಾಮರ್ಥ್ಯ ಒದಗಿಸುತ್ತಾರೆ. ತಾಯಿಯ ಪ್ರೀತಿಗೆ ಸಮಾನವಾದುದು ಈ ವಿಶ್ವದಲ್ಲಿ ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ತಾಯಿಯನ್ನು ಯಾರೂ ದುಃಖಕ್ಕೀಡು ಮಾಡಬೇಡಿ. ತಾಯಿ ಯಾವತ್ತೂ ನಗು ನಗುತ್ತಾ ಬದುಕಬೇಕು ಎಂದು ಹೇಳಿದರು.

‘ತಾಯಿಯ ಕಾಲಡಿಯಲ್ಲಿ ಸ್ವರ್ಗವಿದೆ’ ಎಂಬ ಪ್ರವಾದಿ ಮುಹಮ್ಮದ್(ಸ)ರ ವಚನವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದ ಎರ್ದೋಗಾನ್, ತಾಯಂದಿರು ತಮ್ಮ ಮಕ್ಕಳ ಸಾಮರ್ಥ್ಯವಾಗಿದ್ದಾರೆ. ತಾಯಿ ಮೊದಲು ಶಿಕ್ಷಕಿಯಾಗಿದ್ದು, ನಂತರ ಮಕ್ಕಳ ಸುರಕ್ಷಿತ ಆಶ್ರಯವಾಗಿದ್ದಾಳೆ ಎಂದು ಎರ್ದೋಗಾನ್ ಹೇಳಿದ್ದಾರೆ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *