Tuesday , July 23 2019
Breaking News
Home / ವಿಶೇಷ / ಜಗತ್ತಿನ ಅತಿ ಹೆಚ್ಚು ಜನರು ಈ ಪಾಸ್‌ಪರ್ಡ್ ಬಳಸುತ್ತಿದ್ದಾರಂತೆ-ನಿಮ್ಮದೂ ಇದೇನಾ ಚೆಕ್ ಮಾಡಿ

ಜಗತ್ತಿನ ಅತಿ ಹೆಚ್ಚು ಜನರು ಈ ಪಾಸ್‌ಪರ್ಡ್ ಬಳಸುತ್ತಿದ್ದಾರಂತೆ-ನಿಮ್ಮದೂ ಇದೇನಾ ಚೆಕ್ ಮಾಡಿ

ಸಂದೇಶ ಇ-ಮ್ಯಾಗಝಿನ್: ಜಗತ್ತಿನಲ್ಲಿ ಜನರು ತಮ್ಮ ಬ್ಯಾಂಕ್, ಸೋಶಿಯಲ್ ಮೀಡಿಯಾ, ವೆಬ್ ಸೈಟ್ ಮುಂತಾದ ವಿವಿಧ ತರದ ಅಕೌಂಟ್‌ಗಳನ್ನು ಸುರಕ್ಷಿತವಾಗಿಡಲು ವಿವಿಧ ರೀತಿಯ ಪಾಸ್‌ವರ್ಡ್‌ಗಳನ್ನು ಬಳಸುತ್ತಾರೆ. ಆದರೆ ಬ್ರಿಟೆನ್‌ನ ನೇಷನಲ್ ಸೈಬರ್ ಸೆಕ್ಯುರಿಟಿ ಸೆಂಟರ್ ನಡೆಸಿದ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಸುಮಾರು ಎರಡು ಕೋಟಿ ಜನರು (123456) ಈ ಪಾಸ್‌ವರ್ಡನ್ನು ಬಳಸುತ್ತಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಬಯಳಿಗೆಳೆದಿದೆ. ಇದು ಏಕೆ ಆಘಾತಕಾರಿ ಎಂದರೆ ಇಂತಹ ಪಾಸ್‌ವರ್ಡ್‌ಗಳು ಹ್ಯಾಕ್ ಆಗುವ ಸಾಧ್ಯತೆ ಶೇ.99% ರಷ್ಟು ಸಾಧ್ಯತೆ ದಟ್ಟವಾಗಿದೆ. ಜನರು ಯಾಕೆ ಇಷ್ಟು ಸೀಮ್ಪಲ್ ಪಾಸ್ ವರ್ಡ್ ಬಳಸುತ್ತಾರೆ ಎಂದರೆ ನೆನಪಿನಲ್ಲಿಡಲು ಸುಲಭ ಮತ್ತು ಹ್ಯಾಕರ್‌ಗಳು ಇಷ್ಟು ಸುಲಭದ ಪಾಸ್‌ವರ್ಡ್ ಹ್ಯಾಕ್ ಮಾಡಲ್ಲ ಎಂಬ ಉದ್ದೇಶದಿಂದಾಗಿಗೆ ಎಂದು ಅಧ್ಯಯನ ನಡೆಸಿದ ತಂಡ ಅಭಿಪ್ರಯ ಪಟ್ಟಿದೆ..

123456 ನಂತರ ಅತೀ ಹೆಚ್ಚು ಜನರು ಬಳಸಿರುವ ಪಾಸ್‌ವರ್ಡ್ 123456789 ಆಗಿದೆ. ಇನ್ನುಳಿದಂತೆ ಟಾಪ್ 5 ಪಾಸ್‌ವರ್ಡ್ ಟ್ರೆಂಡ್‌ಗಳೆಂದರೆ 1111111, ಫುಟ್ಬಾಲ್ ಟೀಮ್ ಹೆಸರು ಹಾಗೂ ಊರಿನ ಹೆಸರುಗಳಾಗಿವೆ. ನಿಮ್ಮ ಪಾಸ್‌ವರ್ಡ್‌ಗಳನ್ನು ಆದಷ್ಟು ಭಿನ್ನವಾಗಿ ಸುಲಭವಾಗಿ ಹ್ಯಾಕ್ ಮಾಡದ ರೀತಿಯಲ್ಲಿ ರೂಪಿಸಲು ಅಧ್ಯಯನ ತಂಡವು ಸಲಹೆ ನೀಡಿದೆ. ಸೈಬಲ್ ಅಟ್ಯಾಕ್‌ಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಈ ಅಧ್ಯಯಾನ ನಡೆಸಲಾಗಿದೆ.

Check Also

ಬ್ರೈನ್ ಟ್ಯೂಮರ್ ಪೀಡಿತ ಮಗುವಿನ ಆಟಿಕೆ ಕದ್ದ ಕಳ್ಳರು ಕೊನೆಗೆ ಮಾಡಿದ ಕೆಲಸವೇನು ನೋಡಿ

001ಸಂದೇಶ ಇ-ಮ್ಯಾಗಝಿನ್: ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ 5 ವರ್ಷದ ಬಾಲಕನಿಗೆ ಸೇರಿದ ರೆಸ್ಲಿಂಗ್ ಬೆಲ್ಟನ್ನು ಕದ್ದ ಕಳ್ಳರು ನಂತರ …

Leave a Reply

Your email address will not be published. Required fields are marked *