Monday , July 22 2019
Breaking News
Home / ರಾಷ್ಟ್ರೀಯ / ಮುಸ್ಲಿಮ್ ವಿದ್ಯಾರ್ಥಿಗಳಿಗೆ 80% ವಿದ್ಯಾರ್ಥಿವೇತನ ಮಂಜೂರು ಮಾಡಿದ ಮೋದಿ ಸರಕಾರ

ಮುಸ್ಲಿಮ್ ವಿದ್ಯಾರ್ಥಿಗಳಿಗೆ 80% ವಿದ್ಯಾರ್ಥಿವೇತನ ಮಂಜೂರು ಮಾಡಿದ ಮೋದಿ ಸರಕಾರ

ಸಂದೇಶ ಇ-ಮ್ಯಾಗಝಿನ್: ಕೇಂದ್ರದ ಮೊದಿ ಸರಕಾರ 2018-19 ರ ಸಾಲಿನ ತನ್ನ 20 ಯೋಜನೆಗಳ ಅನುಸಾರ ನೀಡುವ ವಿದ್ಯಾರ್ಥಿವೇತನ ಶೇ.80 ರಷ್ಟು ಮುಸ್ಲಿಮ್ ವಿದ್ಯಾರ್ಥಿಗಳ ಪಾಲಾಗಿದೆ. ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಪ್ರಕಾರ ಮುಸ್ಲಿಮ್ ವಿದ್ಯಾರ್ಥಿಗಳಿಗೆ 80%, ಕ್ರೈಸ್ತ ವಿದ್ಯಾರ್ಥಿಗಳಿಗೆ 7.5%, ಸಿಖ್ಖ್ ವಿದ್ಯಾರ್ಥಿಗಳಿಗೆ 5%, ಹಿಂದೂ ವಿದ್ಯಾರ್ಥಿಗಳಿಗೆ 4.7% ವಿದ್ಯಾರ್ಥಿ ವೇತನ ದೊರೆತಿದೆ. 1.4 ಕೋಟಿ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದ್ದು, ಇದರಲ್ಲಿ 1.08 ವಿದ್ಯಾರ್ಥಿಗಳಿಗೆ ಈ ಬಾರಿ ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗಿದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಪೈಕಿ 88 ಲಕ್ಷ ಮುಸ್ಲಿಮರು, 8.26 ಲಕ್ಷ ಕ್ರೈಸ್ತ, 5.45 ಲಕ್ಷ ಸಿಖ್ಖ್, 5.2 ಲಕ್ಷ ಹಿಂದೂ, 1.94 ಲಕ್ಷ ಬೌದ್ಧ ಹಾಗೂ 1.07 ಲಕ್ಷ ಜೈನ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಪೋರ್ಟಲ್‌ನ ಅಂಕಿ ಅಂಶ ಹೇಳುತ್ತಿದೆ. ಈ ಸಾಲಿನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಒಟ್ಟು 2,157 ಕೋಟಿ ಹಣವನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ 1,032 ಕೋಟಿ ಮುಸ್ಲಿಮ್ ವಿದ್ಯಾರ್ಥಿಗಳ ಪಾಲಾಗಿದೆ.

ಒಟ್ಟು ಕೇಂದ್ರದ 14 ಸಚಿವಾಲಯದ ಇಲಾಖೆಗಳಿಂದ ಈ ಹಣವನ್ನು ಮಂಜೂರು ಮಾಡಲಾಗಿದೆ. ರಾಜ್ಯವಾರು ಲೆಕ್ಕಾಚಾರದಲ್ಲಿ ಅತೀ ಹೆಚ್ಚು ಹಣ ಪಡೆದ ರಾಜ್ಯ ಉತ್ತರಪ್ರದೇಶವಾಗಿದ್ದು ಈ ರಾಜ್ಯಕ್ಕೆ ಒಟ್ಟು 336 ಕೋಟಿ ವಿದ್ಯಾರ್ಥಿ ವೇತನ ಮಂಜೂರಾಗಿದೆ. ಎರಡನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳವಿದ್ದು, ಈ ರಾಜ್ಯಕ್ಕೆ 281 ಕೋಟಿ ರೂ. ನೀಡಲಾಗಿದೆ.

Check Also

ಐಎಂಎ ವಂಚಕ ಮನ್ಸೂರ್ ಖಾನ್ ದೆಹಲಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್

000ಸಂದೇಶ ಇ-ಮ್ಯಾಗಝಿನ್: ಶುಕ್ರವಾರ ಮುಂಜಾನೆ ದುಬೈನಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಹು ಕೋಟಿ ಐಎಂಎ ಫಾಂಝಿ ಸ್ಕೀಮ್ ಹಗರಣದ …

Leave a Reply

Your email address will not be published. Required fields are marked *