Tuesday , April 7 2020
Breaking News
courtesy: Sharjah police instagram
Home / ಗಲ್ಫ್ ಸುದ್ದಿ / ಶಾರ್ಜಾ: ಕಾಣೆಯಾದ ಭಾರತೀಯ ಬಾಲಕ ಅಜ್ಮಾನ್‌ನಲ್ಲಿ ಪತ್ತೆ

ಶಾರ್ಜಾ: ಕಾಣೆಯಾದ ಭಾರತೀಯ ಬಾಲಕ ಅಜ್ಮಾನ್‌ನಲ್ಲಿ ಪತ್ತೆ

ಸಂದೇಶ ಇ-ಮ್ಯಾಗಝಿನ್: ಜುಲೈ 4 ರಿಂದ ನಾಪತ್ತೆಯಾಗಿದ್ದ ಭಾರತೀಯ ಬಾಲಕ ಮೊಹಮ್ಮದ್ ಪರ್ವೆಜ್ ಅಜ್ಮಾನ್‌ನಲ್ಲಿ ಪತ್ತೆಯಾಗಿದ್ದಾನೆ. ತಡರಾತ್ರಿ ಯುಟ್ಯೂಬ್ ವೀಕ್ಷಿಸಿದ್ದಕ್ಕಾಗಿ ತಾಯಿ ಗದರಿಸಿದ್ದರಿಂದ 15 ವರ್ಷದ ಬಾಲಕ ಶಾರ್ಜಾದ ಮುವೀಲಾ ಪ್ರದೇಶದಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ನಂತರ ಬಾಲಕನ ತಂದೆ ಮೊಹಮ್ಮದ್ ಅಫ್ತಾಬ್ ಆಲಂ ತನ್ನ ಮಗನನ್ನು ಹುಡುಕಿಕೊಟ್ಟವರಿಗೆ 5,000 ದಿರ್ಹಾಮ್ ಬಹುಮಾನವನ್ನು ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ. ಶಾರ್ಜಾ ಪೊಲೀಸ್ ವಕ್ತಾರ ಕ್ಯಾಪ್ಟನ್ ಅಹ್ಮದ್ ಅಲ್ ಹಮ್ಮಾದಿಯವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, “ಬಾಲಕನನ್ನು ಅಜ್ಮಾನ್‌ನ ವಸತಿ ಪ್ರದೇಶದಲ್ಲಿ ಅಲೆ ದಾಡುತ್ತಿದ್ದಾಗ ಸ್ಥಳೀಯರು ಗುರುತಿಸಿದ್ದಾರೆ. ಸ್ಥಳೀಯರು ತಕ್ಷಣವೇ ಅಜ್ಮಾನ್ ಪೊಲೀಸರಿಗೆ ಹುಡುಗನ ಬಗ್ಗೆ ಮಾಹಿತಿ ನೀಡಿದ್ದು, ನಂತರ ಅಜ್ಮಾನ್ ಪೊಲೀಸರು ಸ್ಥಳಕ್ಕೆ ಧಾವಿಸಿ ಹುಡುಗನನ್ನು ಹುಡುಕುವಲ್ಲಿ ಯಶಸ್ವಿಯಾದರು” ಎಂದಿದ್ದಾರೆ.

ಗುರುವಾರ ಅತ್ಯಂತ ಭಾವುಕವಾಗಿ ಮಾತನಾಡಿದ್ದ ಬಾಲಕನ ತಂದೆ ಅಫ್ತಾಬ್ ಆಲಂ, “ನನ್ನ ಮಗ ಸುರಕ್ಷಿತವಾಗಿ ಮನೆಗೆ ಬರುವುದನ್ನು ನೋಡಲು ನಾನು ಬಯಸುತ್ತೇನೆ. ಅವನು ಕಣ್ಮರೆಯಾದಾಗಿನಿಂದ ನಾವು ಇಡೀ ದಿನ ಪ್ರಾರ್ಥಿಸುತ್ತಿದ್ದೇವೆ. ನನ್ನ ಮಗನ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡುವ ಯಾರಿಗಾದರೂ ನಾವು 5,000 ದಿರ್ಹಾಮ್‌ಗಳನ್ನು ನೀಡುತ್ತೇವೆ” ಎಂದು ಹೇಳಿದ್ದರು. ಈ ಸುದ್ದಿ ಗಲ್ಫ್ ನ್ಯೂಸ್ ನಲ್ಲಿ ಪ್ರಕಟವಾಗಿತ್ತು.

Check Also

ಹಜ್: ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ; ಸಚಿವ ಸಂಪುಟದ ತೀರ್ಮಾನ

ಸಂದೇಶ ಇ-ಮ್ಯಾಗಝಿನ್: ಹಜ್ ಅನ್ನು ರಾಜಕೀಯಗೊಳಿಸುವ ಯಾವುದೇ ಕೃತ್ಯವು ಸ್ವೀಕಾರಾರ್ಹವಲ್ಲ ಎಂದು ಮಂಗಳವಾರ ಜಿದ್ದಾದಲ್ಲಿ ನಡೆದ ಸೌದಿ ಮಂತ್ರಿ ಪರಿಷತ್ತಿನ …

Leave a Reply

Your email address will not be published. Required fields are marked *