ಸಂದೇಶ ಇ-ಮ್ಯಾಗಝಿನ್: ಅಮೇರಿಕಾದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹಿಳೆಯರ ಕುರಿತಾದ ವಿವಾದಾತ್ಮಕ ಹೇಳಿಕೆಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಮಿಚೆಲ್ ಒಬಾಮ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಡೆಮಾಕ್ರಟಿಕ್ ಪಕ್ಷದ ನಾಲ್ಕು ಕಾಂಗ್ರೆಸ್ ಮಹಿಳೆಯರ ಬಗ್ಗೆ ಅಮೆರಿಕದಲ್ಲಿ ನೀವು ಸಂತೋಷವಾಗಿಲ್ಲದಿದ್ದರೆ ತಮ್ಮ ದೇಶಗಳಿಗೆ ಮರಳಬೇಕು. ಇಲ್ಲಿ ಇರುವುದು ಬೇಡ ಎಂದಿದ್ದರು. ಈ ಕುರಿತು ಮಿಚೆಲ್ ಒಬಾಮಾ, “ನಮ್ಮ ದೇಶವನ್ನು ನಿಜವಾಗಿಯೂ ಶ್ರೇಷ್ಠವನ್ನಾಗಿ ಮಾಡುವುದು ಅದರ ವೈವಿಧ್ಯತೆಯಾಗಿದೆ. ನಾವು ಇಲ್ಲೇ ಹುಟ್ಟಿದ್ದರೂ ಅಥವಾ ವಲಸಿಗರಾದರೂ ಈ ದೇಶ ನಮ್ಮೆಲ್ಲರದ್ದಾಗಿದೆ. ಇದು ನನ್ನ ಅಥವಾ ನಿನ್ನ ಅಮೇರಿಕಾವಲ್ಲ, ಇದು ನಮ್ಮೆಲ್ಲರ ಅಮೇರಿಕಾವಾಗಿದೆ ಎಂಬುದನ್ನು ಮೊದಲು ನೆನಪಿಟ್ಟುಕೊಳ್ಳಿ ಎಂದಿದ್ದಾರೆ.
ನಾರ್ಥ್ ಕೆರೊಲಿನಾದಲ್ಲಿ ನಡೆದ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ್ದ ಟ್ರಂಪ್ ಸೊಮಾಲಿಯಾ ಮೂಲದ ಇಲ್ಹಾನ್ ಒಮರ್ ಅವರ ಬಗ್ಗೆ ಉಲ್ಲೇಖಿಸುತ್ತಾ, ಆಕೆಯನ್ನು ಆಕೆಯ ದೇಶಕ್ಕೆ ಮರಳಿಸಿ ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದರು. ಇದರ ನಂತರ ಟ್ರಂಪ್ ವಿರುದ್ಧ ಜನಾಂಗೀಯ ದೂಷಣೆಯ ಆರೋಪ ಕೇಳಿ ಬಂದಿದೆ.