Tuesday , April 7 2020
Breaking News
image Credit: samatv
Home / ಗಲ್ಫ್ ಸುದ್ದಿ / ಹಜ್ 2019: ಕಾಬಾದ ಇಮಾಮರಿಂದ ಜಾಗತಿಕ ಮುಸ್ಲಿಮರಿಗೆ ಒಗ್ಗಟ್ಟಿನ ಸಂದೇಶ

ಹಜ್ 2019: ಕಾಬಾದ ಇಮಾಮರಿಂದ ಜಾಗತಿಕ ಮುಸ್ಲಿಮರಿಗೆ ಒಗ್ಗಟ್ಟಿನ ಸಂದೇಶ

ಸಂದೇಶ ಇ-ಮ್ಯಾಗಝಿನ್: ಕಾಬಾದ ಇಮಾಮರು ಪ್ರವಾದಿ ಮೊಹಮ್ಮದ್ (ಸ) ರವರು ವಿದಾಯ ಭಾಷಣದಲ್ಲಿ ಉಲ್ಲೇಖಿಸಿದ್ದ ಅದೇ ಮಾತನ್ನು ಪುನರುಚ್ಚರಿಸಿದರು. ಭೂಮಿಯ ನಿವಾಸಿಗಳ ಮೇಲೆ ಕರುಣೆ ತೋರಿಸಿ, ಆಕಾಶದಲ್ಲಿರುವವನು(ಅಲ್ಲಾಹು) ನಿಮ್ಮ ಮೆಲೆ ಕರುಣೆ ತೋರಿಸುವನು ಎಂದು 2019ರ ಹಜ್ ನಲ್ಲಿ ಹೇಳಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಪ್ರಸ್ತುತ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಮುಸ್ಲಿಮರು ನಿರಾಶೆಗೊಳ್ಳದಂತೆ ಮುಸ್ಲಿಂ ಸಮುದಾಯವನ್ನು ಅವರು ಪ್ರೋತ್ಸಾಹಿಸುತ್ತಿದ್ದರು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅಲ್ಲಾಹ್ ಸುಬ್‌ಹಾನಹುವ ತ‌ಆಲ ಎಲ್ಲ ಮುಸ್ಲಿಮರನ್ನು ಒಂದೇ ಸಹೋದರತ್ವಕ್ಕೆ ಹೆಣೆದಿದ್ದಾನೆ. ಈ ದಿನಗಳಲ್ಲಿ ಒಳ್ಳೆಯ ಸ್ವಭಾವದ ಅವಶ್ಯಕತೆ ಇದೆ. ಅಲ್ಲಾಹನ ಕರುಣೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಅವರು ಹೇಳಿದರು. ಇಮಾಮ್ ವಿಶ್ವದ ಎಲ್ಲ ಮುಸ್ಲಿಮರಿಗೆ ತಮ್ಮ ದ್ವೇಷ ಮತ್ತು ಪಂಥೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡುವಂತೆ ಕರೆ ನೀಡಿದರು.

ಹಜ್ ಮಾಡಲು ಮತ್ತು ಇಮಾಮರ ಆಧ್ಯಾತ್ಮಿಕ ಭಾಷಣವನ್ನು ಕೇಳಲು ವಿಶ್ವದ ಮೂಲೆ ಮೂಲೆಯಿಂದ ಸುಮಾರು 20 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಅರಾಫತ್‌ನಲ್ಲಿ ಜಮಾಯಿಸಿದ್ದರು. ನಮ್ಮ ಪ್ರಾರ್ಥನೆಯನ್ನು ಆಲಿಸುವವನು ಮತ್ತು ಅದಕ್ಕೆ ಉತ್ತರಿಸುವವನು ಅಲ್ಲಾಹನು ಏಕೈಕನು ಮಾತ್ರ, ಆದುದರಿಂದ ಅವನನ್ನು ಸದಾ ಸಮಯ ನೆನಪಿಡುವಂತೆ ಇಮಾಮ್ ಕರೆ ನೀಡಿದರು. ಪ್ರವಾದಿ ಮೊಹಮ್ಮದ್ (ಸ) ನಮಗೆ ಮಾದರಿಯಾಗಿದ್ದಾರೆ, ಅವರ ಬೋಧನೆಗಳನ್ನು ಅನುಸರಿಸಬೇಕೆಂದು ಇಮಾಮರು ಮುಸ್ಲಿಮರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ, ಹಜ್ ಗಾಗಿ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಮಾಡಿದ್ದಕ್ಕಾಗಿ ಇಮಾಮ್ ಸೌದಿ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

Check Also

ಹಜ್: ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ; ಸಚಿವ ಸಂಪುಟದ ತೀರ್ಮಾನ

ಸಂದೇಶ ಇ-ಮ್ಯಾಗಝಿನ್: ಹಜ್ ಅನ್ನು ರಾಜಕೀಯಗೊಳಿಸುವ ಯಾವುದೇ ಕೃತ್ಯವು ಸ್ವೀಕಾರಾರ್ಹವಲ್ಲ ಎಂದು ಮಂಗಳವಾರ ಜಿದ್ದಾದಲ್ಲಿ ನಡೆದ ಸೌದಿ ಮಂತ್ರಿ ಪರಿಷತ್ತಿನ …

Leave a Reply

Your email address will not be published. Required fields are marked *