Sunday , November 17 2019
Breaking News
Home / ಮಹಿಳೆ / ತಂದೆ ಇಲ್ಲದೆ ಬೆಳೆದ ಇಲ್ಮಾ ಅಫ್ರೋಝ ಅವರ ಯಶಸ್ವಿ IPS ಪಯಣ

ತಂದೆ ಇಲ್ಲದೆ ಬೆಳೆದ ಇಲ್ಮಾ ಅಫ್ರೋಝ ಅವರ ಯಶಸ್ವಿ IPS ಪಯಣ

ಸಂದೇಶ ಇ-ಮ್ಯಾಗಝಿನ್: ನಾನು ಬಡ ಕುಟುಂಬದಲ್ಲಿ ಹುಟ್ಟಿದ್ದು, ನನ್ನ ಬಡತನವೇ ನನ್ನ ಸಾಧನೆಗೆ ಅಡ್ಡಿ ಇಲ್ಲದಿದ್ದಲ್ಲಿ ಸಾಧನೆ ಮಾಡುತ್ತಿದ್ದೆ ಎಂದು ಜಂಭ ಕೊಚ್ಚಿಕೊಳ್ಳುವವರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಆದರೆ ನಿಜವಾಗಿಯೂ ಸಾಧಿಸಿದವರು ಕೆಲವೇ ಕೆಲವರು. ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಕುಂಡಾರ್ಕಿ ಎಂಬ ಹಳ್ಳಿಯ ಯುವತಿ ಇಲ್ಮಾ ಅಫ್ರೋಝ ಅವರು ಇದೀಗ ಐಪಿಎಸ್ ಆಫೀಸರ್ ಆಗಿದ್ದಾರೆ. ಆದರೆ ಅವರು ಬಾಯಲ್ಲಿ ಬಂಗಾರದ ಚಮಚ ಇಟ್ಟು ಹುಟ್ಟಿ ಈ ಸಾಧನೆ ಮಾಡಿಲ್ಲ ಎಂಬುದೇ ವಿಶೇಷ.

ಇಲ್ಮಾ ಅಫ್ರೋಝ ಅವರು 10 ವರ್ಷ ಪ್ರಾಯದವರಾಗಿದ್ದಾಗಲೇ ಅವರ ತಂದೆ ತೀರಿ ಹೋಗಿದ್ದಾರಂತೆ. ಆದರೂ ತನ್ನ ತಾಯಿಯ ನೆರವಿನೊಂದಿಗೆ ಇಲ್ಮಾ ಅಫ್ರೋಝ ಅವರು ದೆಹಲಿಯ ಸೈಂಟ್ ಸ್ಟಿಫನ್ ಕಾಲೇಜ್ ಆ ಬಲಿಅಕ್ ದೆಹಲಿ ವಿಸ್ವ ವಿದ್ಯಾಲಯ ಆ ಬಳಿಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕೇವಲ ವಿದ್ಯಾರ್ಥಿ ವೇತನದ ಸಹಾಯದೊಂದಿಗೆ ಕಲಿತು ಇದೀಗ ಸಾಧನೆಯ ಶಿಖರವೇರಿದ್ದಾರೆ.

ಇತ್ತೀಚೆಗೆ ನಡೆಸಲಾದ ಒಂದು ಸಂದರ್ಶನದಲ್ಲಿ ಇಲ್ಮಾ ಅಫ್ರೋಝ ಅವರು ತಮ್ಮ ಯಶಸ್ಸಿನ ಹಿಂದಿರುವ ನೋವಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ನನ್ನ ಎಲ್ಲಾ ಯಶಸ್ಸಿಗೆ ನನ್ನ ತಾಯಿಯೇ ಕಾರಣ ಎಂದು ಇಲ್ಮಾ ಅಫ್ರೋಝ ಹೇಳಿದ್ದಾರೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣ ಗೊಳಿಸಿದ ಬಳಿಕ ತನ್ನ ಸ್ವಗ್ರಾಮಕ್ಕೆ ಆಗಮಿಸಿದ ಇಲ್ಮಾ ಅಫ್ರೋಝ ಬಳಿಕ ತನ್ನ ಈ ಉನ್ನತ ಶಿಕ್ಷಣ ದೇಶಕ್ಕಾಗಿ ವ್ಯಯಿಸಬೇಕು ಎಂದು ತೀರ್ಮಾನಿಸಿ ‘ಸಿವಿಲ್ ಸರ್ವೀಸ್ ಎಕ್ಸಾಮ್” (CSE ) ಬರೆಯಲು ತೀರ್ಮಾನಿಸಿದರು.

2017ರಲ್ಲಿ CSE ಪರೀಕ್ಷೆ ಬರೆದ ಇಲ್ಮಾ 217 ನೇ ರಾಂಕ್ ಪಡೆದರು. ಆ ಬಳಿಕ ‘ಭಾರತೀಯ ಪೊಲೀಸ್ ಸೇವೆ’ (IPS) ಗೆ ಸೇರ್ಪಡೆಯಾಗಿ ದೇಶದ ಸೇವೆಯಲ್ಲಿ ತೊಡಗಿಸಿಕೊಂಡರು. ತಾನು ಹುಡುಗಿಯಾದ ಕಾರಣ ನನ್ನನ್ನು ಶಾಲೆಗೆ ಕಲಿಸುವುದಕ್ಕೆ ನನ್ನ ಕುಟುಂಬದಲ್ಲೇ ವಿರೊಧವಿತ್ತು, ಆದರೂ ನನ್ನ ತಾಯಿ ಹಠದಿಂದ ನನಗೆ ಶಿಕ್ಷಣ ಕೊಟ್ಟಿದ್ದಾರೆ ಎಂದು ಇಲ್ಮಾ ಹೇಳಿದ್ದಾರೆ.

ನಾಗರಿಕ ಸೇವಾ ಪರೀಕ್ಷೆಯ ತಯಾರಿ ಬಗ್ಗೆ ಮಾತನಾಡುತ್ತಾ, Ms. ಇಲ್ಮಾ ಅವರು ಪ್ರಸ್ತುತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಘಟನೆಗಳ ಬಗ್ಗೆ ತಿಳಿದಿರಬೇಕೆಂದು ಪರೀಕ್ಷೆಯ ಅಪೇಕ್ಷಕರಿಗೆ ಸಲಹೆ ನೀಡಿದ್ದಾರೆ.

Check Also

ಹೆಣ್ಣು ಮಕ್ಕಳು ನಿಷ್ಪ್ರಯೋಜಕರು ಎನ್ನುವವರಿಗೆ ನಕೀಬ್‌ರ ಈ ಇಬ್ಬರು ಹೆಣ್ಣು ಮಕ್ಕಳು ಸ್ಪಷ್ಟ ಉತ್ತರವಾಗಿದ್ದಾರೆ

ಸಂದೇಶ ಇ-ಮ್ಯಾಗಝಿನ್: ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಹೆಣ್ಣುಮಕ್ಕಳು “ನಿಷ್ಪ್ರಯೋಜಕರು” ಎಂದು ಭಾವಿಸಲಾಗುತ್ತದೆ. ಆದರೆ ಅಲ್ ನಕೀಬ್‌ ಅವರ ಈ ಇಬ್ಬರು …

Leave a Reply

Your email address will not be published. Required fields are marked *