Tuesday , April 7 2020
Breaking News
Home / ಅಂತಾರಾಷ್ಟ್ರೀಯ / ಝಾಕಿರ್ ನಾಯ್ಕ್ ಹಸ್ತಾಂತರ ವಿಚಾರ: ಮಲೇಷ್ಯಾ ವಿದೇಶಾಂಗ ಮಂತ್ರಿಯ ಮಹತ್ವದ ಹೇಳಿಕೆ

ಝಾಕಿರ್ ನಾಯ್ಕ್ ಹಸ್ತಾಂತರ ವಿಚಾರ: ಮಲೇಷ್ಯಾ ವಿದೇಶಾಂಗ ಮಂತ್ರಿಯ ಮಹತ್ವದ ಹೇಳಿಕೆ

ಸಂದೇಶ ಇ-ಮ್ಯಾಗಝಿನ್: ಮಲೆಷ್ಯಾದ ವಿದೇಶಾಂಗ ಸಚಿವ ದಾತುಕ್ ಸೈಫುದ್ದೀನ್ ಅಬ್ದುಲ್ಲಾ ಅವರು ಇಸ್ಲಾಮಿಕ್ ಪ್ರಭೋಧಕ ದಾ. ಝಾಕಿರ್ ನಾಯ್ಕ್ ಅವರನ್ನು ಹಸ್ತಾಂತರಿಸಲು ಭಾರತ ಮಾಡಿರುವ ಮನವಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಭಾರತದ ಮನವಿಯ ಬಗ್ಗೆ ಉಲ್ಲೇಖಿಸಿದ ಮಲೆಷ್ಯಾ ವಿದೇಶಾಂಗ ಸಚಿವ ಡಾ. ಝಾಕಿರ್ ನಾಯ್ಕ್ ರನ್ನು ಗಡೀಪಾರು ವಿಚಾರದಲ್ಲಿ ಮಲೆಷ್ಯಾ ಸರಕಾರ ತನ್ನ ಹಿಂದಿನ ನಿರ್ಧಾರಕ್ಕೆ ಬದ್ಧವಾಗಿದ್ದು, ಸೌದಿ ಹಾಗೂ ಮಲೇಷ್ಯಾದ ಖಾಯಂ ನಿವಾಸಿತ್ವವನ್ನು ಹೊಂದಿರುವ ಭಾರತೀಯ ಮೂಲದ ಇಸ್ಲಾಮಿಕ್ ಪ್ರಭೋಧಕ ಝಾಕಿರ್ ನಾಯ್ಕ್ ರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಭಾರತದ ಮನವಿಯನ್ನು ತಿರಸ್ಕರಿಸಿದ್ದಾರೆ. ನಾವು ಭಾರತದ ಸರಕಾರ ದಿಂದ ಹಸ್ತಾಂತರದ ಮನವಿಯನ್ನು ಪಡೆದಿದ್ದು ನಿಜ, ಆದರೆ ಸದ್ಯಕ್ಕೆ ಹೊಸ ನಿರ್ಧಾರವಿಲ್ಲ. ನಾವು ಮೂಲ ನಿರ್ಧಾರಕ್ಕೆ ಅಂಟಿಕೊಳ್ಳುತ್ತಿದ್ದೇವೆ ಎಂದು ಮಲೆಷ್ಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಸೈಫುದ್ದೀನ್ ತಿಳಿಸಿದ್ದಾರೆ.

ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇಡಿ) ಮನವಿಯ ಮೇರೆಗೆ ಭಾರತದ ಮನಿ ಲಾಂಡ್ರಿಂಗ್ ತಡೆ ಕಾನೂನಿನ ನ್ಯಾಯಾಲಯವೊಂದು ಡಾ. ಝಾಕಿರ್ ನಾಯ್ಕ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಜೂನ್ 30 ರ ಒಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆಯೂ ತಿಳಿಸಿತ್ತು. ಭಾರತದ ಸುಪ್ರಿಂ ಕೋರ್ಟ್ ತನ್ನ ವಿರುದ್ಧ ಆರೋಪ ಸಾಬೀತಾಗುವ ವರೆಗೆ ಬಂಧಿಸಲ್ಲ ಎಂದು ಲಿಖಿತವಾಗಿ ಆದೇಶ ನೀಡಿದರೆ ನಾನು ಭಾರತಕ್ಕೆ ಬಂದು ಕಾನೂನು ಪ್ರಕ್ರಿಯೆ ಎದುರಿಸಲು ಸಿದ್ದ ಎಂದು ಝಾಕಿರ್ ನಾಯ್ಕ್ ತಿಳಿಸಿದ್ದರು.

Check Also

ಸೌದಿ ರಾಜಕುಮಾರಿಯ ವಿರುದ್ಧ ಫ್ರಾನ್ಸ್ ನಲ್ಲಿ ಮೊಕದ್ದಮೆ-ಕಾರಣವೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಏಕೈಕ ಪುತ್ರಿ ರಾಜಕುಮಾರಿ ಹಸ್ಸಾ ಬಿಂತ್ ಸಲ್ಮಾನ್ ಅವರ ವಿರುದ್ಧ …

Leave a Reply

Your email address will not be published. Required fields are marked *