Friday , May 24 2019
Breaking News
Home / ವಿಶೇಷ / ಒಂದೇ ಕುಟುಂಬಕ್ಕೆ ಸೇರಿದ ಜನರ ನಡುವಿನ ಮದುವೆ ಪುರುಷರ ಈ ಸಮಸ್ಯೆಗೆ ಕಾರಣವಾಗುತ್ತದೆ-ವಿಜ್ಞಾನಿಗಳ ವಾದ

ಒಂದೇ ಕುಟುಂಬಕ್ಕೆ ಸೇರಿದ ಜನರ ನಡುವಿನ ಮದುವೆ ಪುರುಷರ ಈ ಸಮಸ್ಯೆಗೆ ಕಾರಣವಾಗುತ್ತದೆ-ವಿಜ್ಞಾನಿಗಳ ವಾದ

ಸಂದೇಶ ಇ-ಮ್ಯಾಗಝಿನ್: ಹೈದರಾಬಾದಿನ ಪ್ರತಿಷ್ಟಿತ ಸೆಂಟರ್ ಫಾರ್ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಸಿಎಮ್‌ಬಿ) ಯ ಅಂಗಸಂಸ್ಥೆಯಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ನಡೆಸಿದ ಅಧ್ಯಯನದ ಪ್ರಕಾರ ಭಾರತೀಯರಲ್ಲಿ ಹೆಚ್ಚಾಗಿ ರೂಢಿಯಲ್ಲಿರುವ ‘ಸೇಮ್ ಸೆಕ್ಟ್ ಮ್ಯಾರೇಜ್’ (ಒಂದೇ ಕುಟುಂಬಕ್ಕೆ ಸೇರಿದ ಜೋಡಿಗಳಿಬ್ಬರ ಮದುವೆ) ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ. ಈ ರೀತಿ ಮದುವೆಯಾದ ದಂಪತಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಶೇ.50 ರಷ್ಟು ಪುರುಷರಲ್ಲಿ ಬಂಜೆತನವಿರುವುದು ಪತ್ತೆಯಾಗಿದೆ. ಇನ್ನೂ ಕೆಲವು ಪುರುಷರಲ್ಲಿ ರೋಗ, ಗಾಯ, ಜೀವನ ಪದ್ಧತಿ ಮುಂತಾದ ಕಾರಣದಿಂದಾಗಿ ಬಂಜೆತನ ಉಂಟಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಡಾ. ಕೆ. ತಂಗರಾಜ್ ಅವರ ತಂಡವು ಈ ಅಧ್ಯಯನವನ್ನು ಕೈಗೊಂಡಿದ್ದು, ಈ ತಂಡವು ಕಳೆದ ಎರಡು ದಶಕಗಳಿಂದ ಈ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದು, ವಿಜ್ಞಾನಿಗಳ ಈ ವಾದವು ಎಷ್ಟರ ಮಟ್ಟಿಗೆ ಸರಿ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಷ್ಟೆ.

Check Also

ರಾಹುಲ್ ಗಾಂಧಿಯನ್ನು ಮೊದಲ ಬಾರಿಗೆ ಎತ್ತಿದ್ದ ಕೇರಳದ ನರ್ಸ್ ಇದೀಗ ಹೇಳದ ಕಥೆಯನ್ನು ಹೇಳಲು ರಾಹುಲ್‌ರನ್ನು ಕಾಯುತ್ತಿದ್ದಾರೆ

000ಸಂದೇಶ ಇ-ಮ್ಯಾಗಝಿನ್: ನಿವೃತ್ತ ನರ್ಸ್ ಕೇರಳದ ವಯನಾಡ್ ನಿವಾಸಿ ರಾಜಮ್ಮ ಜನಿಸಿದ ತಕ್ಷಣ ರಾಹುಲ್ ಗಾಂಧಿಯನ್ನು ಮೊದಲ ಬಾರಿಗೆ ಎತ್ತಿದವರಂತೆ. …

Leave a Reply

Your email address will not be published. Required fields are marked *