Tuesday , October 15 2019
Breaking News
Home / ಕರಾವಳಿ / ಮಂಗಳೂರು: ಪ್ರವಾದಿ ಮುಹಮ್ಮದ್(ಸ)ರನ್ನು ನಿಂದಿಸಿದ ವ್ಯಕ್ತಿ ಖಾಝಿಯವರ ಮನೆಗೆ ತೆರಳಿ ಕ್ಷಮೆಯಾಚನೆ

ಮಂಗಳೂರು: ಪ್ರವಾದಿ ಮುಹಮ್ಮದ್(ಸ)ರನ್ನು ನಿಂದಿಸಿದ ವ್ಯಕ್ತಿ ಖಾಝಿಯವರ ಮನೆಗೆ ತೆರಳಿ ಕ್ಷಮೆಯಾಚನೆ

ಸಂದೇಶ ಇ-ಮ್ಯಾಗಝಿನ್: ಇಸ್ಲಾಮ್ ಧರ್ಮ ಹಾಗೂ ಪ್ರವಾದಿ ಮುಹಮ್ಮದ್(ಸ) ರನ್ನು ಅವಹೇಳನಕಾರಿಯಾದ ಶಬ್ದ ಬಳಸಿ ನಿಂದಿಸಿದ್ದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಝಿ ತ್ವಾಖ ಉಸ್ತಾದ್ ಅವರ ಮನೆಗೆ ತೆರಳಿ ಕ್ಷಮೆಯಾಚನೆ ಮಾಡಿದ ಅಚ್ಚರಿಯ ಘಟನೆ ವರದಿಯಾಗಿದೆ. ಕೇರಳದ ಮಂಜೇಶ್ವರ ನಿವಾಸಿಯಾಗಿರುವ ಮಂಜುನಾಥ್ ನಾಯಕ್ ಮಂಗಳೂರಿನ ಬಂದರ್‌ನ ಅಡಿಕೆ ಗೋದಾಮೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳುಗಳ ಇಸ್ಲಾಮಿನ ಪ್ರವಾದಿ ಮುಹಮ್ಮದ್(ಸ) ಹಾಗೂ ಇಸ್ಲಾಮ್ ಧರ್ಮವನ್ನು ಅವಹೇಳನಕಾರಿಯಾದ ಪದಗಳನ್ನು ಬಳಸಿ ಅವಮಾನಿಸಿದ್ದರು ಎನ್ನಲಾಗಿದೆ. ಬಳಿಕ ಪಶ್ಚಾತಾಪಪಟ್ಟಿರುವ ಮಂಜುನಾಥ್ ನಾಯಕ್ ತಾನು ಮಾಡಿದ್ದು ತಪ್ಪೆಂದು ಅರಿವಾದಾಗ ಮಂಗಳೂರಿನ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಉಸ್ತಾದ್ ಅವರ ಮನೆಗೆ ತೆರಳಿ ಕ್ಷಮೆಯಾಚಿಸಿದ್ದಾರೆ. ಮಂಜುನಾಥ್ ನಾಯಕ್ ಅವರ ಕ್ಷಮೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು ತಪ್ಪು ಮಾಡುವುದು ಸಹಜ, ಆದರೆ ಕ್ಷಮೆ ಕೇಳುವ ಸ್ವಭಾವ ದೊಡ್ಡದು ಎಂದು ಶ್ಲಾಘಿಸಿದ್ದಾರೆ.

ಮಂಜುನಾಥ್ ನಾಯಕ್ ತಮ್ಮೊಂದಿಗೆ ಪ್ರವಾದಿ ನಿಂದನೆ ಹಾಗೂ ಇಸ್ಲಾಮ್ ಧರ್ಮದ ನಿಂದನೆಯ ಕುರಿತು ಕ್ಷಮೆಯಾಚಿರುವುದರ ಬಗ್ಗೆ ಮಾತನಾಡಿದ ಶೈಖುನಾ ತ್ವಾಖ ಅಹ್ಮದ್ ಮುಸ್ಲಿಯಾರ್, ಇನ್ನು ಮುಂದೆ ಪ್ರವಾದಿ ನಿಂದನೆ ಹಾಗೂ ಇಸ್ಲಾಮ್ ನಿಂದನೆಯ ಕಾರಣವಿಟ್ಟು ಮುಸ್ಲಿಮರು ಯಾರೂ ಮಂಜುನಾಥ್ ನಾಯಕ್ ಅವರೊಂದಿಗೆ ಮನಸ್ತಾಪ ಹೊಂದಬಾರದು ಎಂದಿದ್ದಾರೆ.

Check Also

ತನ್ನ ಮದುವೆಯಲ್ಲಿ ಊರಿನ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಮದುಮಗ

000ಸಂದೇಶ ಇ-ಮ್ಯಾಗಝಿನ್: ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಸಾಮಾನ್ಯವಾಗಿ ರಾಜ್ಯದ ಇತರ ಕಡೆಯ ಜನರು ಕೋಮುಗಲಭೆ, ಹಿಂದೂ ಮುಸ್ಲಿಮ್ ಅಶಾಂತಿ …

Leave a Reply

Your email address will not be published. Required fields are marked *