Tuesday , July 23 2019
Breaking News
Home / ಸಂಪಾದಕೀಯ / ಅನ್ಯಧರ್ಮೀಯರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದ ವೈದ್ಯರಿಗೆ ಮಂಗಳೂರಿನ ಅನ್ಯಧರ್ಮೀಯ ವೈದ್ಯರೇ ಚಿಕಿತ್ಸೆ ನೀಡಿದರಂತೆ!

ಅನ್ಯಧರ್ಮೀಯರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದ ವೈದ್ಯರಿಗೆ ಮಂಗಳೂರಿನ ಅನ್ಯಧರ್ಮೀಯ ವೈದ್ಯರೇ ಚಿಕಿತ್ಸೆ ನೀಡಿದರಂತೆ!

ವೈದ್ಯರು ಕೋಮುವಾದಿಗಳಾಗಬಾರದು. ವೈದ್ಯರಿಗೆ ಅವರವರು ಅನುಸರಿಸುವ ಧರ್ಮಕ್ಕಿಂತ ಮಿಗಿಲಾದ ಮತ್ತೊಂದು ಧರ್ಮವಿದೆ. ಅದೇ ಮಾನವೀಯತೆಯ ಧರ್ಮ. ಈ ಮಾತು ಯಾಕೆ ಹೇಳಿದೆ ಅಂದ್ರೆ ಮೊನ್ನೆ ಉದಯವಾಣಿಯಲ್ಲಿ ಒಂದು ಕೃತಜ್ಞತೆ ಸಲ್ಲಿಸಿದ ಜಾಹೀರಾತು ನೋಡಿದೆ. ಪುತ್ತೂರಿನ ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ. ಪ್ರಸಾದ್ ಭಂಡಾರಿಯವರಿಗೆ ಮಂಗಳೂರಿನ ಇಂಡಿಯಾನಾ ಅಸ್ಪತ್ರೆಯ ವೈದ್ಯರಾದ ಡಾ. ಯೂಸುಫ್ ಕುಂಬ್ಳೆ ಮತ್ತು ಡಾ. ಮನ್ಸೂರ್ ಈ ಇಬ್ಬರು ವೈದ್ಯರು ಅನಾರೋಗ್ಯಕ್ಕೆ ಚಿಕಿತ್ಸೆ ನೀಡಿ ಗುಣ ಪಡಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ನೀಡಿದ ಜಾಹೀರಾತಾಗಿತ್ತು ಅದು.

ನಿಮ್ಮಲ್ಲಿ ಎಷ್ಟು ಮಂದಿಗೆ ನೆನಪಿದೆಯೋ ಗೊತ್ತಿಲ್ಲ. ಅವತ್ತು ಪುತ್ತೂರಿನ ಸಾಲ್ಮರದ ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಆವರಣ ಗೋಡೆ ಕುಸಿದು ಶಾಲಾ ಅಂಗಳದಲ್ಲಿ ಆಡುತ್ತಿದ್ದ ಹಲವಾರು ಪುಟಾಣಿಗಳು ಗಂಭೀರ ಗಾಯಗೊಂಡಿದ್ದರು. ಶಾಲೆಯ ಪಕ್ಕದಲ್ಲೇ ಇರುವ ಡಾ. ಪ್ರಸಾದ್ ಭಂಡಾರಿಯವರ ಒಡೆತನದ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಗೆಂದು ಮಕ್ಕಳನ್ನು ಕರೆದೊಯ್ದಾಗ ಅಲ್ಲಿನ ವೈದ್ಯರು ಗಾಯಗೊಂಡಿದ್ದ ವಿದ್ಯಾರ್ಥಿಗಳಲ್ಲೂ ಹಿಂದೂ – ಮುಸ್ಲಿಮ್ ಭೇದ ಮಾಡಿ, ಮುಸ್ಲಿಮ್ ವಿದ್ಯಾರ್ಥಿನಿಗೆ ಚಿಕಿತ್ಸೆ ನಿರಾಕರಿಸಿ ಹಿಂದೂ ವಿದ್ಯಾರ್ಥಿನಿಗೆ ಮಾತ್ರ ಚಿಕಿತ್ಸೆ ನೀಡಿ ಅಮಾನವೀಯತೆನ್ನು ಪ್ರದರ್ಶಿಸಿದ್ದರು. ಚಿಕಿತ್ಸೆ ನಿರಾಕರಿಸಲ್ಪಟ್ಟ ಮುಸ್ಲಿಂ ವಿದ್ಯಾರ್ಥಿನಿಯನ್ನು ಬೇರೊಂದು ಆಸ್ಪತ್ರೆಗೆ ಸಾಗಿಸುವಾಗ ಆ ಮಗು ದಾರಿ ಮಧ್ಯೆ ಕೊನೆಯುಸಿರೆಳೆದಿತ್ತು.

ಆದರೆ ಇವತ್ತು ಮುಸ್ಲಿಮ್ ಒಡೆತನದ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಡಾ. ಪ್ರಸಾದ್ ಭಂಡಾರಿಯವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರಂತೆ! ಇರಲಿ, ವೈದ್ಯ ಧರ್ಮವನ್ನು ಮಾತ್ರ ಪಾಲಿಸಿದ ಇಂಡಿಯಾನಾ ಆಸ್ಪತ್ರೆಯ ವೈದ್ಯರಿಗೆ ತುಂಬು ಹೃದಯದ ಕೃತಜ್ಞತೆಗಳಿರಲಿ. ಈ ಸುದ್ದಿ ತಿಳಿದಾಗ ಸಂತೋಷವೂ ಆಯಿತು. ಜೊತೆಗೆ ದುಃಖವೂ ಆಯಿತು. ಇಂಡಿಯಾನಾ ಆಸ್ಸತ್ರೆಯ ವೈದ್ಯರ ಕಾರ್ಯದಿಂದ ಸಂತೋಷವಾದರೆ, ಆವತ್ತು ಪ್ರಸಾದ್ ಭಂಡಾರಿಯವರಿಗೆ ಆ ಮುಸ್ಲಿಮ್ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಿ ಆ ಮಗುವಿನ ಪ್ರಾಣ ಉಳಿಸಲು ತಮ್ಮ ಕೈಲಾದ ಪ್ರಯತ್ನ ಮಾಡಲು ಸಾಧ್ಯವಾಗಲಿಲ್ಲವಲ್ಲ ಎಂಬ ವಿಷಯದಲ್ಲಿ ದುಃಖವೂ ಆಯಿತು.

ಅದೇನೇ ಇರಲಿ, ತಮ್ಮ ಬಳಿ ಚಿಕಿತ್ಸೆಗೆಂದು ಬರುವ ರೋಗಿಗಳ ಜಾತಿ, ಧರ್ಮ ನೋಡಿ ಚಿಕಿತ್ಸೆ ನೀಡುವ ಕೋಮುವಾದಿ ಮನಸ್ಥಿತಿಯ ವೈದ್ಯರಿಗೆ ಈ ಘಟನೆ ಒಂದು ಪಾಠವಾಗಲಿ. ಡಾ. ಪ್ರಸಾದ್ ಭಂಡಾರಿಯವರಿಗೆ ಆ ದೇವರು ಸ್ವಸ್ಥ ಆರೋಗ್ಯ ಮತ್ತು ಆಯುಷ್ಯವನ್ನು ನೀಡಿ ಇನ್ನಷ್ಟು ರೋಗಿಗಳ ಸೇವೆ ಮಾಡುವ ಭಾಗ್ಯ ಕರುಣಿಸಲಿ.

Check Also

ಕಾಂಗ್ರೇಸಿಗರೇ ಜನರ ಆಯ್ಕೆಗೆ ಮನ್ನಣೆ ನೀಡಿ

002ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಅಂತೂ ಮುಗಿದಿದೆ. ಈಗ ಏನಿದ್ದರೂ ಫಲಿತಾಂಶದ ಮೇಲೆ ಎಲ್ಲರ ಚಿತ್ತ. ಗೆಲ್ಲುವ ಮುನ್ನವೇ ಮುಂದಿನ …

Leave a Reply

Your email address will not be published. Required fields are marked *