Thursday , June 20 2019
Breaking News
Home / ರಾಜ್ಯ / ನಿಖಿಲ್ ಮಂಡ್ಯದಲ್ಲಿ ಸೋತಿದ್ದಕ್ಕೆ ಅಭಿಮಾನಿ ಮಾಡಿದ್ದೇನು ನೋಡಿ: ಶಾಕಿಂಗ್

ನಿಖಿಲ್ ಮಂಡ್ಯದಲ್ಲಿ ಸೋತಿದ್ದಕ್ಕೆ ಅಭಿಮಾನಿ ಮಾಡಿದ್ದೇನು ನೋಡಿ: ಶಾಕಿಂಗ್

ಸಂದೇಶ ಇ-ಮ್ಯಾಗಝಿನ್: ರಾಜ್ಯ ಸರ್ಕಾರದ ಪ್ರತಿಷ್ಟೆಯ ಜಿದ್ದಾಜಿದ್ದಿನ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರ ಸ್ವಾಮಿಯವರು ಸೋತಿರುವುದರಿಂದ ಬೇಸರಗೊಂಡಿರುವ ಅವರ ಅಭಿಮಾನಿಯೊಬ್ಬರು ತಮ್ಮ ಕೈ ಬೆರಳನ್ನು ಕತ್ತರಿಸಿಕೊಂಡ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಸುನಿಲ್ ಎಂಬ ಜೆಡಿಎಸ್ ಕಾರ್ಯಕರ್ತ ತನ್ನ ಕೈ ಬೆರಳನ್ನು ಕತ್ತರಿಸಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಗೆಲ್ಲಲೇ ಬೇಕೆಂಬ ನಿಟ್ಟಿನಲ್ಲಿ ಸ್ವಯಂ ಸೇವಕರಾಗಿ ಪಕ್ಷದ ಪರ ದುಡಿದಿದ್ದ ಸುನಿಲ್ ಮದ್ದೂರಿನಲ್ಲಿ ಮತಚಲಾಯಿಸಿದ್ದರು. ಆದರೆ ತಮ್ಮ ಪ್ರಯತ್ನ ಫಲ ಗೊಡದೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸುಮಾರು 1 ಲಕ್ಷ 30 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು.

ಮೇ 23 ರಂದು ಫಲಿತಾಂಶದ ದಿನದಂದು ಸುಮಲತಾ ವಿರುದ್ಧ ನಿಖಿಲ್ ಕುಮಾರ ಸ್ವಾಮಿ ಸೋತ ಕಾರಣ ಸುನಿಲ್ ಅವರು ಮನೆಗೆ ಹೋಗಿ ಓಟು ಹಾಕಿದ ಗುರುತಿದ್ದ ಎಡಗೈ ತೋರು ಬೆರಳನ್ನು ಕತ್ತರಿಸಿ ತಮಮ್ ನೋವನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

Check Also

ಗಡ್ಡ ಬಿಟ್ಟವರೆಲ್ಲಾ ಭಯೋತ್ಪಾದಕರಲ್ಲ, ವದಂತಿಗೆ ಕಿವಿಗೊಡಬೇಡಿ: ಬೆಂಗಳೂರು ಪೊಲೀಸರ ಮನವಿ

206ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು ಸರಣಿ ಬಾಂಬ್ ಸ್ಫೋಟ ಮಾಡಿದ್ದ ಉಗ್ರರು ಬೆಂಗಳೂರಿನ ಮೆಟ್ರೊ ರೈಲ್ವೇ ನಿಲ್ದಾಣನಕ್ಕೆ ಬಂದಿದ್ದಾರೆ …

Leave a Reply

Your email address will not be published. Required fields are marked *