Monday , September 16 2019
Breaking News
Home / ರಮದಾನ್ ವಿಶೇಷಾಂಕ / ಮ್ಯಾಂಚೆಸ್ಟರ್‌ ಯುನೈಟೆಡ್‌ನ ಈ ಸ್ಟಾರ್ ಆಟಗಾರ ಉಮ್ರಾ ನಿರ್ವಹಿಸಲು ಮಕ್ಕಾಗೆ ಆಗಮಿಸಿದ್ದಾರೆ

ಮ್ಯಾಂಚೆಸ್ಟರ್‌ ಯುನೈಟೆಡ್‌ನ ಈ ಸ್ಟಾರ್ ಆಟಗಾರ ಉಮ್ರಾ ನಿರ್ವಹಿಸಲು ಮಕ್ಕಾಗೆ ಆಗಮಿಸಿದ್ದಾರೆ

ಸಂದೇಶ ಇ-ಮ್ಯಾಗಝಿನ್: ಮಂಚೆಸ್ಟರ್ ಯುನೈಟೆಡ್‌ನ ಸ್ಟಾರ್ ಮಿಡ್‌ಫೀಲ್ಡರ್ ಪೌಲ್ ಪೋಗ್ಬಾ ಅವರು ಉಮ್ರಾ ಎಂದು ಕರೆಯಲ್ಪಡುವ ಮುಸ್ಲಿಮರ ಚಿಕ್ಕ ಮಕ್ಕಾ ತೀರ್ಥಯಾತ್ರೆಗೆ ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ.

ಗುರುವಾರ ಪೋಗ್ಬಾ ಅವರು ಮಕ್ಕಾದಲ್ಲಿರುವ ಇಸ್ಲಾಂ ಧರ್ಮದ ಅತ್ಯಂತ ಪವಿತ್ರವಾದ ಸ್ಮಾರಕವಾದ ಕಾಬಾದ ಮುಂಭಾಗದಲ್ಲಿ ತೆಗೆದ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಸುಮಾರು 2 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ.

“ಜೀವನದಲ್ಲಿ ಪ್ರಮುಖ ವಿಷಯಗಳನ್ನು ಎಂದಿಗೂ ಮರೆಯಬಾರದು” ಫ್ರೆಂಚ್ ಮಿಡ್‌ಫೀಲ್ಡರ್ ತಮ್ಮ ಉಮ್ರಾ ಫೋಟೋಗೆ ಶೀರ್ಷಿಕೆಯಂತೆ ಬರೆದಿದ್ದಾರೆ. ಚೆಲ್ಸಿಯಾದ ಫ್ರೆಂಚ್ ರಕ್ಷಕ ಕರ್ಟ್ ಝೌಮಾ ಪೋಗ್ಬಾ ಜೊತೆಯಲ್ಲಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

ಜಾಗತಿಕ ಮುಸ್ಲಿಮರು ಪವಿತ್ರ ರಮದಾನ್ ತಿಂಗಳಲ್ಲಿ ವಿಶ್ವದ ಮೂಲೆ ಮೂಲೆಯಿಂದ ಉಮ್ರಾ ಎಂಬ ಚಿಕ್ಕ ತೀರ್ಥಯಾತ್ರೆಗೆ ಆಗಮಿಸುತ್ತಾರೆ. ರಮದಾನ್‌ನಲ್ಲಿ ನಿರ್ವಹಿಸುವ ಚಿಕ್ಕ ತೀರ್ಥಯಾತ್ರೆ( ಉಮ್ರಾ) ದೊಡ್ಡ ತೀರ್ಥ ಯಾತ್ರೆಗೆ(ಹಜ್) ಗೆ ಸಮ ಎಂಬ ಪ್ರವಾದಿ ವಚನ ಕಾರಣದಿಂದಾಗಿ ಈ ತಿಂಗಳಲ್ಲಿ ಮಕ್ಕಾದಲ್ಲಿ ಜನಸಂದಣಿ ಹೆಚ್ಚಿರುತ್ತದೆ.

ರಮದಾನ್‌ನಲ್ಲಿ ಮುಸ್ಲಿಮರು ಪ್ರಾತಕಾಲದಲ್ಲಿ ಎದ್ದು ಆಹಾರ ಸೇವಿಸಿ ಬಳಿಕ ದಿನವಿಡೀ ಆಹಾರ ಸೇವಿಸದೆ ಅಲ್ಲಾಹನ ಆರಾಧನೆ ಮಾಡುತ್ತಾರೆ. ಬಳಿಕ ಸಂಜೆ ಸೂರ್ಯ ಮುಳುಗಿದ ಬಳಿಕ ನಿರ್ದಿಷ್ಟ ಸಮಯದಲ್ಲಿ ಆಹಾರ ಸೇವಿಸಿ ವೃತವನ್ನು ಮುರಿಯುತ್ತಾರೆ. ಆ ಬಳಿಕ ರಾತ್ರಿಯ ಒಂದು ಭಾಗ ಕಠಿಣ ಆರಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ರಂಝಾನ್ ಉಪವಾಸವು ಸ್ವಯಂ ನಿಯಂತ್ರಣ, ಜ್ಞಾಪನೆ ಮತ್ತು ನಮ್ರತೆ ಮೂಲಕ ಸೃಷ್ಟಿಕರ್ತನೆಡೆಗೆ ಭಕ್ತರನ್ನು ಸೆಳೆಯುವ ಗುರಿಯನ್ನು ಹೊಂದಿದೆ.

Check Also

ಉಪವಾಸಿಗರಿಗೆ ಇಫ್ತಾರ್ ಕಿಟ್ ವಿತರಿಸಿದ ಹಿಂದೂ ಮಹಿಳೆ-ರಾಷ್ಟ್ರೀಯ ಭಾವೈಕ್ಯತೆ

001ಸಂದೇಶ ಇ-ಮ್ಯಾಗಝಿನ್: ಭಾರತವು ಜಗತ್ತಿನ ವಿವಿಧ ರಾಷ್ಟ್ರಗಳ ಮಧ್ಯೆ ಎದೆಯುಬ್ಬಿಸಿ ನಿಲ್ಲುವುದು ತನ್ನ ಜಾತ್ಯಾತೀಯ, ಧರ್ಮಾತೀತ ಪರಂಪರೆಯ ಕಾರಣಕ್ಕಾಗಿ, ಈ …

Leave a Reply

Your email address will not be published. Required fields are marked *