Friday , May 24 2019
Breaking News
Home / ಗಲ್ಫ್ ಸುದ್ದಿ / ಇಫ್ತಾರ್‌ಗೆ ಕೊಡಲಾದ ಜ್ಯೂಸ್ ಕೋಲ್ಡ್ ಇಲ್ಲ ಎಂದು ಆತ ತನ್ನ ಪತ್ನಿಗೆ ಮಾಡಿದ್ದೇನು ನೋಡಿ: ಶಾಕಿಂಗ್

ಇಫ್ತಾರ್‌ಗೆ ಕೊಡಲಾದ ಜ್ಯೂಸ್ ಕೋಲ್ಡ್ ಇಲ್ಲ ಎಂದು ಆತ ತನ್ನ ಪತ್ನಿಗೆ ಮಾಡಿದ್ದೇನು ನೋಡಿ: ಶಾಕಿಂಗ್

ಸಂದೇಶ ಇ-ಮ್ಯಾಗಝಿನ್: ಕುವೈತಿ ಪ್ರಜೆಯೊಬ್ಬ ಇಫ್ತಾರ್‍‌ಗೆ ನೀಡಲಾಗಿರುವ ಜ್ಯೂಸ್ ಕೋಲ್ಡ್ ಇಲ್ಲ ಎಂದು ತನ್ನ ಪತ್ನಿಗೆ ಚೂರಿಯಿಂದ ಇರಿದು ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ. ಮೊನ್ನೆ ಬೆಳಗ್ಗೆ ಈ ವ್ಯಕ್ತಿ ಸಂಜೆ ಇಫ್ತಾರ್ ಮಾಡುವಾಗ ಜ್ಯೂಸನ್ನು ಫ್ರಿಡ್ಜಲ್ಲಿಟ್ಟು ಚೆನ್ನಾಗಿ ಕೋಲ್ಡ್ ಮಾಡಿಡು ಎಂದು ಹೇಳಿದ್ದ ಎನ್ನಲಾಗಿದ್ದು, ಸಂಜೆ ಇಫ್ತಾರ್ ಸಮಯದಲ್ಲಿ ಆತ ಮನೆಗೆ ಬಂದಾಗ ಪತ್ನಿ ತಾನು ಹೇಳಿದ ಮಾತನ್ನು ಪಾಲಿಸದೇ ಇರುವುದನ್ನು ನೋಡಿ ಕೋಪಗೊಂಡಿದ್ದಾನೆ. ಆ ಬಳಿಕ ಅಡುಗೆ ಮನೆಗೆ ಹೋಗಿ ಚೂರಿ ತಂದು ತನ್ನ ಪತ್ನಿಯನ್ನು ಬೆನ್ನಟ್ಟಿ ಕೈ ಭಾಗಕ್ಕೆ ಮೆದುವಾಗಿ ಇರಿದಿದ್ದಾನೆ ಎನ್ನಲಾಗಿದೆ. ಇದರಿಂದ ಹೆದರಿದ ಪತ್ನಿ ಆತನಿಂದ ತಪ್ಪಿಸಿಕೊಂಡು ಹೋಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪತಿಯ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯನ್ನು ತನಿಖೆ ಮಾಡುವಾಗ ವ್ಯಕ್ತಿಯು ತಾನು ಮಾಡಿದ್ದು ತಪ್ಪಾಗಿದ್ದು, ಪತ್ನಿಯ ಕ್ಷಮೆ ಕೇಳುವುದಾಗಿ ಬೇಡಿಕೊಂಡಿದ್ದಾನೆ. ಆ ಬಳಿಕ ಗಂಡನನ್ನು ಕ್ಷಮಿಸಿದ ಪತ್ನಿ ದೂರನ್ನು ಹಿಂತೆಗೆದುಕೊಂಡಿದ್ದು, ಇನ್ನು ಮುಂದೆ ಪತ್ನಿಗೆ ಹಲ್ಲೆ ಮಾಡಲಾರೆ ಎಂದು ಪತಿಯಲ್ಲಿ ಮುಚ್ಚಳಿಕೆ ಬರೆಸಿಟ್ಟು ಪೊಲೀಸರು ಪ್ರಕರಣವನ್ನು ಮುಗಿಸಿದ್ದಾರೆ.

Check Also

ಮಕ್ಕಾ: ಉಮ್ರಾ ಯಾತ್ರಾರ್ಥಿಗಳ ವೀಕ್ಷಣೆಗಾಗಿ ತೆರೆದ ಮಕ್ಕಾ ಕ್ಲಾಕ್ ಟವರ್ ಮ್ಯೂಸಿಯಂ

002ಸಂದೇಶ ಇ-ಮ್ಯಾಗಝಿನ್: ಮಕ್ಕಾ ಉಮ್ರಾ ಯಾತ್ರಿಗಳಿಗೆ ಮಕ್ಕಾ ಕ್ಲಾಕ್ ಟವರ್‌ನಲ್ಲಿ ಮ್ಯೂಸಿಯಂ ತೆರೆಯಲಾಗಿದೆ. ನಾಲ್ಕು ಮಹಡಿಯ ಈ ವಸ್ತುಸಂಗ್ರಹಾಲಯವು ಇಡೀ …

Leave a Reply

Your email address will not be published. Required fields are marked *