ಸಂದೇಶ ಇ-ಮ್ಯಾಗಝಿನ್: ‘ಜೈ ಶ್ರೀ ರಾಮ್’ ಎಂದು ಹೇಳಲು ನಿರಾಕರಿಸಿದ್ದಕ್ಕಾಗಿ ಉತ್ತರಪ್ರದೇಶದ ಉನ್ನಾವೋದಲ್ಲಿ ಕೆಲವು ಮದರಸಾ ವಿದ್ಯಾರ್ಥಿಗಳನ್ನು ಥಳಿಸಿದ ಘಟನೆ ವರದಿಯಾಗಿದೆ. ಜುಲೈ 11 ರ ಗುರುವಾರ ಉತ್ತರ ಪ್ರದೇಶದ ಉನ್ನಾವೊದ ಮದರಸಾದಲ್ಲಿ ಓದುತ್ತಿರುವ ಮಕ್ಕಳನ್ನು ‘ಜೈ ಶ್ರೀ ರಾಮ್’ ಘೋಷಣೆ ಹೇಳಲು ಒತ್ತಾಯಿಸಲಾಯಿತು, ಆದರೆ ಅವರು ಅದನ್ನು ಹೇಳಲು ನಿರಾಕರಿಸಿದಾಗ, ಅವರ ಬಟ್ಟೆಗಳನ್ನು ಹರಿದುಹಾಕಲಾಯಿತು ಮತ್ತು ಅವರ ಸೈಕಲ್ಗಳನ್ನು ಧ್ವಂಸಗೊಳಿಸಲಾಯಿತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕ್ವಿಂಟ್ ವರದಿಯ ಪ್ರಕಾರ, ಗುರುವಾರ ಮಧ್ಯಾಹ್ನದ ನಮಾಜ್ ನಂತರ 2 ಗಂಟೆಗೆ 12 ರಿಂದ 13 ವರ್ಷದ ಮದ್ರಸಾ ವಿದ್ಯಾರ್ಥಿಗಳು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ನಾಲ್ವರು ಯುವಕರು ವಿದ್ಯಾರ್ಥಿಗಳನ್ನು ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿ ಥಳಿಸಿದ್ದಾರೆ ಎಂದು ಮೌಲ್ವಿ ಹೇಳಿದ್ದಾರೆ.
ಉನ್ನಾವೊ ಸರ್ಕಲ್ ಪೊಲೀಸ್ ಅಧಿಕಾರಿ ಉಮೇಶ್ ಕುಮಾರ್ ತ್ಯಾಗಿ ಮಾತನಾಡಿ, ಮದರಸಾದ ಮಕ್ಕಳು ಸಾಮಾನ್ಯವಾಗಿ ಗುರುವಾರ ಜಿಐಸಿ ಇಂಟರ್-ಕಾಲೇಜು ಮೈದಾನಕ್ಕೆ ಕ್ರಿಕೆಟ್ ಆಡಲು ಬರುತ್ತಾರೆ ಮತ್ತು ಅದೇ ಮೈದಾನದಲ್ಲಿ ಇತರರು ಕೂಡ ಆಡಲು ಬರುತ್ತಾರೆ. ನಿನ್ನೆಯ ದಿನ ಮದರಸಾದ ಮಕ್ಕಳು ಅಲ್ಲಿದ್ದಾಗ ಅಲ್ಲಿಗೆ ಬಂದ ಒಂದು ಗುಂಪು ಜಗಳದಲ್ಲಿ ತೊಡಗಿದರು. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.