Friday , May 24 2019
Breaking News
Home / ಕರಾವಳಿ / ಕೊಡಾಜೆ: ಅರಂಗಳ ಸೂಪರ್ ಬಜಾರ್ ಮತ್ತು ಅರಂಗಳ ಶೂ ಬಜಾರುಗಳ ಅದ್ದೂರಿ ಶುಭಾರಂಭ

ಕೊಡಾಜೆ: ಅರಂಗಳ ಸೂಪರ್ ಬಜಾರ್ ಮತ್ತು ಅರಂಗಳ ಶೂ ಬಜಾರುಗಳ ಅದ್ದೂರಿ ಶುಭಾರಂಭ

ಸಂದೇಶ ಇ-ಮ್ಯಾಗಝಿನ್: ಮಾಣಿ ಕೊಡಾಜೆ ಪ್ರದೇಶದಲ್ಲಿ ಅರಂಗಳ ಸೂಪರ್ ಬಜಾರ್ ಮತ್ತು ಅರಂಗಳ ಶೂ ಬಜಾರ್ ಶನಿವಾರ ಬೆಳಿಗ್ಗೆ ಶುಭಾರಂಭ ಗೊಂಡಿತು. ಅರಂಗಳ ಕುಟುಂಬದ ಹಿರಿಯರು ಅವಳಿ ಬಜಾರುಗಳ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು. ಅರಂಗಳ ಸೂಪರ್ ಬಜಾರಿನಲ್ಲಿ ರಖಂ ಮತ್ತು ಚಿಲ್ಲರೆ ಹಾಗು ಹೋಂ ಡೆಲಿವರಿ ಸೌಲಭ್ಯ ಕೂಡ ಇರುವುದಾಗಿ ಅರಂಗಳ ಬಜಾರಿನ ಮುಖ್ಯಸ್ಥ ಅಬ್ದುರ್ರಝಕ್ ತಿಳಿಸಿದರು. ಸೂಪರ್ ಬಜಾರಿನ ಜೊತೆಗೆ ಅರಂಗಳ ಶೂ ಬಜಾರ್ ಕೂಡ ಪ್ರಾರಂಭ ಗೊಂಡಿದ್ದು ಎಲ್ಲಾ ವಯಸ್ಕರ ನೂತನ ಶೈಲಿಯ ಶೂ ಹಾಗೂ ಚಪ್ಪಲಿಗಳು ಲಭ್ಯವಿದೆ.

ಪ್ರದೇಶದಲ್ಲಿ ಅತೀ ದೊಡ್ಡ ದಿನಸಿ ವಸ್ತುಗಳ ರಖಂ ಹಾಗೂ ಚಿಲ್ಲರೆ ವ್ಯಾಪಾರ ಇದಾಗಿದ್ದು, ಇದರ ಜೊತೆಗೆ ತಾಜಾ ತರಕಾರಿ ಹಾಗೂ ಐಸ್ ಕ್ರೀಂ ಇನ್ನಿತರ ವಸ್ತುಗಳು ನಮ್ಮಲ್ಲಿ ಲಭ್ಯವಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಅರಂಗಳ ಕುಟುಂಬದ ಸದಸ್ಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

 

Check Also

ಬಂಟ್ವಾಳ: ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ ಜಮಾಅತೆ ಇಸ್ಲಾಮೀ ಹಿಂದ್‌ ಸಮಾಜ ಸೇವಾ ಘಟಕ

000ಸಂದೇಶ ಇ-ಮ್ಯಾಗಝಿನ್: ಬಂಟ್ವಾಳ ತಾಲೂಕಿನ ಪುಂಚಮಿ ಸಮೀಪದ ಕಿನ್ನಿಗುಡ್ಡೆ ಎಂಬಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಪುಟ್ಟ ಮನೆಯೊಂದನ್ನು ಕಟ್ಟಲು ಆರಂಭಿಸಿದರೂ, …

Leave a Reply

Your email address will not be published. Required fields are marked *