Tuesday , December 10 2019
Breaking News
Home / ಪ್ರವಾದಿ ಮಹಮ್ಮದ್(ಸ) / ಕಂದಕ ಯುದ್ದ- ಅಲೀ(ರ)ರವರ ಪರಾಕ್ರಮ

ಕಂದಕ ಯುದ್ದ- ಅಲೀ(ರ)ರವರ ಪರಾಕ್ರಮ

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ,
ಭಾಗ 120 ರಿಂದ ಮುಂದುವರಿಯುತ್ತದೆ.

ಕುರೈಶ್ ಸೇನೆಯ ಯೋಧರು ದಿನನಿತ್ಯ ತಮ್ಮ ಕುದುರುಯನ್ನೇರಿ ಕಂದಕದ ವಿಭಿನ್ನ ಭಾಗದ ಸಮೀಕ್ಷೆ ನಡೆಸುತ್ತಿರುತ್ತಾರೆ. ಅಬೂಸುಪ್ಯಾನ್, ಖಾಲಿದ್, ಅಬೀ ವಹಾಬ್ ಇನ್ನೂ ಕೆಲವರು ನಿತ್ಯ ತಮ್ಮ ಪಾಳಿಯನ್ನು ನಿಶ್ಚಯಿಸಿಕೊಂಡಿದ್ದರು. ಅವರು ಸಣ್ಣ ಸಣ್ಣ ಸೇನಾ ತುಕಡಿಯೊಂದಿಗೆ ಕಂದಕದ ಹತ್ತಿರ ಬರುತ್ತಿದ್ದರು. ಮುಂದೆ ಹೋಗುವ ಯಾವ ರಸ್ತೆಯನ್ನು ಕಾಣದೆ ಅಲ್ಲಿಂದಲೇ ಬಾಣಗಳ ಅಥವಾ ಕಲ್ಲುಗಳ ಮಳೆಗೆರೆದು ತಮ್ಮ ಸಮರಾವೆಶವನ್ನು ತಣಿಸುತ್ತಿದ್ದರು.

ಇಂದು ಇಕ್ರಿಮಾ ಬಿನ್ ಅಬೂಜಹಲ್, ನೌಪಲ್ ಬಿನ್ ಅಬ್ದುಲ್ಲಾ, ದರಾರ್ ಬಿನ್ ಖತ್ತಾಬ್ ಕಂದಕವನ್ನು ದಾಟಿ ಒಳ ನುಗ್ಗಿದರು. ಅವರು ತಮ್ಮ ಶೌರ್ಯವನ್ನು ಪ್ರದರ್ಶಿಸಲು ಬಯಸುತ್ತಾರೆ. ಅಮ್ರ್ ಬಿನ್ ಅಬ್ದೂದ್ ಅರೇಬಿಯಾದ ಪ್ರಖ್ಯಾತ ಕುಸ್ತಿ ಪಟ್ಟು ಆಗಿದ್ದ. ಒಬ್ಬಂಟಿಗನಾಗಿಯೇ ಒಂದು ಸಹಸ್ರ ಯೋಧರನ್ನು ಎದುರಿಸಬಲ್ಲವನು ಎಂಬ ಖ್ಯಾತಿಯನ್ನು ಗಳಿಸಿದ್ದ. ಆತನೀಗ ಮುಸ್ಲಿಮರಿಗೆ ಪಂಥಾಹ್ವಾನ ನೀಡುತ್ತಿದ್ದಾನೆ. ಆತನ ವಯಸ್ಸು ತೊಂಬತ್ತು ವರ್ಷಗಿಂತಲೂ ಮೀರಿತ್ತು. ಆದರೂ ಎಲ್ಲರೂ ಅವನಿಗೆ ಭಯಪಡುತ್ತಾರೆ. ಯಾರಾದರೂ ನನ್ನಲ್ಲಿ ಮೂರು ವಿಷಯಗಳ ಮನವಿ ಮಾಡಿದರೆ ಒಂದನ್ನು ನಾನು ಖಂಡಿತ ಒಪ್ಪಿಕೊಳ್ಳುವೆ” ಎನ್ನುತ್ತಿದ್ದ ಆತ. ಅವನು ಮುಸ್ಲಿಂ ಸೇನೆಗೆ ಸವಾಳೆಸೆಯುತ್ತಾ; “ಬನ್ನಿ ಯಾರಿದ್ದಾರೆ ನನ್ನನ್ನು ಎದುರಿಸುವವರು “? ಯುವಕರ ನಾಯಕರದ ಅಲೀ(ರ) ಮುಂದೆ ಬಂದು ಆ ಸವಾಲನ್ನು ಸ್ವೀಕರಿಸುತ್ತಾರೆ. ಅಮ್ರ್ ಅವರನ್ನು ನೋಡಿ ನಕ್ಕು ಬಿಡುತ್ತಾರೆ. ” ನೀನು ಇನ್ನೂ ಸಣ್ಣವನು ಹೋಗು ಯಾರಾದರೂ ದೊಡ್ಡವರನ್ನು ಕಳುಹಿಸು ನಾನು ಮಕ್ಕಳ ಮೇಲೆ ಕೈ ಎತ್ತುವುದಿಲ್ಲ”.

ಅಲೀ:- ನೀವು ನನ್ನನ್ನು ಎದುರಿಸಲು ಏಕೆ ಭಯಪಡುತ್ತಿರಿ?”
ಅಮ್ರ್:- “ನೀನು ಸಣ್ಣ ಹುಡುಗ. ಹಿಂತಿರುಗಿ ಹೋಗು.
ಅಲೀ:- “ಯಾರಾದರೂ ಮೂರು ವಿಷಯ ಪ್ರಸ್ತಾಪಿಸಿದರೆ ನೀವು ಒಂದನ್ನು ಖಂಡಿತವಾಗಿ ಸ್ವೀಕರಿಸುವಿರಿ ಎಂದು ನಿಮ್ಮ ಬಗ್ಗೆ ನಾನು ಕೇಳಿದ್ದೆ, ಇದು ಸತ್ಯವೇ”?
ಅಮ್ರ್:- ” ಹೌದು ಹೇಳು ನೀನಗೇನಾಗಬೇಕಾಗಿದೆ”?.
ಅಲೀ:- “ಮೊದಲನೇ ಮಾತು ನೀವು ಇಸ್ಲಾಮ್ ಸ್ವೀಕರಿಸಬೇಕು”. ತನ್ಮೂಲಕ ನೀವು ಯಶಸ್ವಿಯಾಗಬಹುದು.
ಅಮ್ರ್:- ಅದು ಸಾಧ್ಯವೇ ಇಲ್ಲ. ಅದಕ್ಕಾಗಿ ನಾವು ಯುದ್ದಕ್ಕೆ ಬಂದಿದ್ದೇವೆ.
ಅಲೀ:- ಇದು ಅಸಾದ್ಯವಾದರೆ ಯುದ್ಧದ ಯೋಜನೆ ತೊರೆದು ಮರಳಿ ಹೋಗಿರಿ.
ಅಮ್ರ್:- ಇದು ಅಸಾಧ್ಯ ವೀರರು ಎಂದು ರಣಾಂಗವನ್ನು ಬಿಟ್ಟು ಹೋಗುವುದಿಲ್ಲ.
ಅಲೀ:- ” ಕೊನೆಯ ಮಾತೆಂದರೆ ನೀವು ನನ್ನೊಂದಿಗೆ ಹೋರಾಟಕ್ಕೆ ಸಜ್ಜಾಗಿ.
ಅಮ್ರ್:- ಈ ರೀತಿ ನಿಧನ ಮರಣವನ್ನು ನೀನೆ ಅಹ್ವಾನಿಸುತ್ತಿದ್ದಿ ನೀನು ಯಾರು “?
ಅಲೀ:- “ನಾನು ಅಬೂತಾಲಿಬರ ಮಗ ಅಲೀ(ರ) ನಿಮ್ಮ ಪಾಲಿಗೆ ಮರಣದ ಕರೆಗಂಟೆಯಾಗಿ ಬಂದಿರುವೆನು”.

ಇದನ್ನು ಕೇಳಿ ಅಮ್ರ್ ರೋಷಗೊಂಡು ಕೆಂಡಮಂಡವಾಗುತ್ತಾನೆ. ತನ್ನ ಖಡ್ಗದಿಂದ ಅಲೀ(ರ)ರಿಗೆ ಒಂದು ಬಲವಾದ ಏಟು ಕೊಡುತ್ತಾನೆ. ಅದು ಅಲೀ(ರ)ರ ಗುರಾಣಿಯನ್ನು ಬೇದಿಸುತ್ತಾ ಅವರ ಹಣೆಗೆ ಗಾಯಮಾಡುತ್ತದೆ. ಇದರಿಂದ ಅಲೀ(ರ)ರ ಸಮರಾವೇಶವು ಉಕ್ಕಿ ಬಂದು” ಅಲ್ಲಾಹ್ ಅಕ್ಬರ್ ” ಘೋಷಣೆ ಮೊಳಗಿಸುತ್ತಾ ಖಡ್ಗದಿಂದ ಧಾಳಿ ಮಾಡುತ್ತಾರೆ. ಅದು ಅವರ ಭುಜವನ್ನು ಕತ್ತರಿಸುತ್ತಾ ದೇಹದೊಳಗೆ ನುಗ್ಗಿ ಬಿಡುತ್ತದೆ. ಆತ ಕ್ಷಣಮಾತ್ರದಲ್ಲಿ ‌ರಕ್ತಸಿಕ್ತವಾಗಿ ನೆಲಕ್ಕುರುಳುತ್ತಾನೆ. ಅಲೀ(ರ) ಮತ್ತೊಮ್ಮೆ ಸಂತೋಷದಿಂದ ತಕ್ಬಿರ್ ಮೊಳಗಿಸುತ್ತಾರೆ.

ದರಾರ್ ಮತ್ತು ಹಬೀರ್ ಬಂದು ಅಲೀ(ರ)ಆಕ್ರಮಿಸುತ್ತಾರೆ. ಆದರೆ ಅಲೀ(ರ)ರವರ ಮರುಧಾಳಿಗೆ ಸೋತು ಹಿಮ್ಮೆಟ್ಟುತ್ತಾರೆ. ಅತ್ತ ಸಹಾಬಿಗಳು ಅವರ ಮೇಲೆ ಬಾಣದ ಮಳೆಗೆರೆಯುತ್ತಾರೆ. ಇದರಿಂದ ಶತ್ರುಗಳು ದಿಗ್ಬ್ರಾಂತರಾಗಿ ಓಡುತ್ತಾರೆ. ಈ ಓಟದಲ್ಲಿ ನೌಪಲ್ ಕಂದಕದಲ್ಲಿ ಬಿದ್ದು ಬಿಡುತ್ತಾನೆ. ಅಲೀ(ರ) ಅಲ್ಲಿಯೇ ಆಕ್ರಮಿಸಿ ಅವನನ್ನು ಮುಗಿಸಿ ಬಿಡುತ್ತಾರೆ. ಅಮ್ರ್ ಬಿನ್ ಅಬ್ದೂದ್ ಮತ್ತು ನೌಪಲ್ ಬಿನ್ ಅಬ್ದುಲ್ಲಾರ ಕೊಲೆಯಿಂದ ಕುರೈಶರಲ್ಲಿ ಪ್ರತೀಕಾರದ ಅಗ್ನಿ ಉರಿದೇಳುತ್ತದೆ. ಅವರು ಮುಸ್ಲಿಂ ಸೇನೆಯ ಮೇಲೆ ಬಲವಾದ ಆಕ್ರಮಣ ಮಾಡುತ್ತಾರೆ.

ಇನ್ ಶಾ ಅಲ್ಲಾಹ್, ಭಾಗ- 122ರಲ್ಲಿ ಮುಂದುವರಿಯುತ್ತದೆ.

Check Also

ಮದೀನಾದ ಯಹೂದಿ ಜನಾಂಗದ ಕುತಂತ್ರ-ಭಾಗ 119

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 118 ರಿಂದ ಮುಂದುವರಿಯುತ್ತದೆ. ಹಿ.ಶ 5 ರ ಶವ್ವಾಲ್ ತಿಂಗಳ ಕೊನೆಯ ದಿನಗಳು ಕೈಬರ್ …

Leave a Reply

Your email address will not be published. Required fields are marked *