Monday , August 26 2019
Breaking News
Image credit: pixabay.com
Home / ಪ್ರವಾದಿ ಮಹಮ್ಮದ್(ಸ) / ಸೈನ್ಯಗಳು ಮತ್ತು ಕಂದಕ- ಕಂದಕ ಯುದ್ದ

ಸೈನ್ಯಗಳು ಮತ್ತು ಕಂದಕ- ಕಂದಕ ಯುದ್ದ

ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ,
ಭಾಗ 119 ರಿಂದ ಮುಂದುವರಿಯುತ್ತದೆ.

ಈ ಸುದ್ದಿಯು ಪ್ರವಾದಿ(ಸ.ಅ)ರಿಗೆ ತಲುಪುತ್ತದೆ. ಸತ್ಯನಿಷೇಧಿಗಳು ನಾಲ್ಕು ದಿಕ್ಕುಗಳಿಂದ ಮದೀನಾದ ಮೇಲೆ ಧಾಳಿ ಮಾಡಲಿದ್ದಾರೆಂಬುದು ಪ್ರವಾದಿ(ಸ.ಅ)ರಿಗೆ ಖಾತ್ರಿಯಾಗುತ್ತದೆ. ಅವರು ತಮ್ಮ ಸಂಗಾತಿಗಳನ್ನು ಸಮಾಲೋಚನೆಗಾಗಿ ಒಟ್ಟು ಗೂಡಿಸುತ್ತಾರೆ. ಮುಸ್ಲಿಮರ ಗಣ್ಯರೆಲ್ಲ ಒಂದೆಡೆ ಸಭೆ ಸೇರಿದಾಗ ಪ್ರವಾದಿ(ಸ.ಅ)ರ ಮುಂದೆ ಯುದ್ಧದ ಎಲ್ಲಾ ಸಂಭವನೀಯ ವಿಧಾನಗಳನ್ನು ಇಡುತ್ತಾರೆ.

ಮದೀನಾದ ರಕ್ಷಣೆಗೆ ಹಲವು ಸಲಹೆಗಳು ಬರುತ್ತವೆ. ನಗರದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಖರ್ಜೂರದ ದಟ್ಟವಾದ ತೋಟಗಳಿರುವುದರಿಂದ ಅಲ್ಲಿಂದ ಆಕ್ರಮಣದ ಸಾಧ್ಯತೆಯು ಬಹಳ ಕಡಿಮೆಯಾಗಿತ್ತು. ಏಕೆಂದರೆ ಆ ತೋಟಗಳ ಮೂಲಕ ಸೈನ್ಯವು ಬರುವುದು ಬಹಳ ಕಷ್ಟ ಸಾಧ್ಯವಾಗಿತ್ತು. ಅಲ್ಲಿಂದ ಒಂದೊಂದು ಸಾಲು ಸೈನಿಕರು ಮಾತ್ರ ಬರಬಹುದಾಗಿತ್ತು. ಹಾಗೆ ಅವರು ಬಂದರೆ ಅವರನ್ನು ಸುಲಭದಲ್ಲಿ ಮುಗಿಸಿಬಿಡಬಹುದಿತ್ತು. ಆದರೆ ನಗರದ ಉತ್ತರ ಭಾಗದಿಂದ ಶತ್ರು ಸೇನೆಯನ್ನು ತಡೆಯುವ ಸೂಕ್ತ ವ್ಯವಸ್ಥೆ ಇರಲಿಲ್ಲ.

ಈ ಬಗ್ಗೆ ಎಲ್ಲರೂ ತಮ್ಮ ಕಳವಳವನ್ನು ವ್ಯಕ್ತಪಡಿಸಿದಾಗ ಸಲ್ಮಾನ್ ಪಾರಿಸ್ (ಸ.ಅ)ರು ಹೀಗೆ ಹೇಳಿದರು: “ಪ್ರವಾದಿವರ್ಯರೇ ಮದೀನಾದ ಉತ್ತರದಲ್ಲಿರುವ ಸ್ಥಿತಿಯು ಇರಾನಿಗಳಿಗೆ ಮುಂದಾದರೆ ಅವರು ಶತ್ರುಗಳನ್ನು ಎದುರಿಸಲಿಕ್ಕಾಗಿ ಕಂದಕಗಳನ್ನು ತೋಡುತ್ತಿದ್ದರು. ಆದ್ದರಿಂದ ಅಲ್ಲಿಯೂ ಕಂದಕವನ್ನು ತೋಡುವ ಮೂಲಕ ಆ ದಿಕ್ಕನ್ನು ಸುರಕ್ಷಿತಗೊಳಿಸಬಹುದೆಂಬುದು ನನ್ನ ಭಾವನೆ”. ಯುದ್ಧ ಸಾಮಾಗ್ರಿಗಳ ಕೊರತೆಯಿಂದ ಈ ಸಲಹೆಯನ್ನು ಎಲ್ಲರೂ ಮೆಚ್ಚುತ್ತಾರೆ. ಇದರಿಂದ ಶತ್ರುಗಳು ರಾತ್ರಿ ವೇಳೆ ಹಠಾತ್ ದಾಳಿ ಮಾಡುವ ಭಯವು ಇರುವುದಿಲ್ಲ.

ಪ್ರವಾದಿ (ಸ.ಅ)ರು ಈ ಸಲಹೆಯನ್ನು ಸ್ವೀಕರಿಸಿ. ಹತ್ತು ಹತ್ತು ಮಂದಿಯ ತಂಡವನ್ನು ರೂಪಿಸುತ್ತಾರೆ. ಪ್ರತಿಯೊಂದು ತಂಡದ ಪಾಲಿಗೆ 20 ಗಜಗಳಷ್ಟು ನೆಲವನ್ನು ಅಗೆಯುವ ಕೆಲಸವು ಒದಗಿ ಬರುತ್ತದೆ. ತನ್ಮೂಲಕ 10 ಅಡಿ ಆಳ ಹದಿಮೂರು ವರೆ ಅಡಿ ಅಗಲ ಮತ್ತು ಸುಮಾರು ಒಂದು ಮೈಲಿ ಮತ್ತು 200 ಗಜದಷ್ಟು ಉದ್ದದ ಒಂದು ಕಂದಕ ನಿರ್ಮಿಸುವ ಯೋಜನೆ ಆಗುತ್ತದೆ.

ಶತ್ರು ಸೇನೆಯು ದಿನದಿಂದ ದಿನಕ್ಕೆ ಹತ್ತಿರ ಬರುತ್ತಿದೆ. ಚಳಿಯೂ ವಿಪರೀತವಾಗುತ್ತಿದೆ. ಆಹಾರದ ಕೊರತೆಯಿಂದ ಕಳವಳವಾಗಿದೆ. ಹಸಿವು ವ್ಯಾಪಿಸಿದೆ. ಮುಸ್ಲಿಮರು ಬಹಳ ನಿತ್ರಾಣರಾಗಿದ್ದಾರೆ. ಪ್ರವಾದಿ (ಸ.ಅ)ರು ಹಸಿವಿನಿಂದ ಹೊಟ್ಟೆಯ ಮೇಲೆ ಮೂರು ಕಲ್ಲುಗಳನ್ನು ಬಿಗಿಯಾಗಿ ಕಟ್ಟಿದ್ದಾರೆ. ಮುಹಮ್ಮದ್ (ಸ.ಅ)ರ ಡೇರೆಯನ್ನು ಝಭಾಬ್ ಬೆಟ್ಟದ ಮೇಲೆ ಹಾಕಲಾಗಿದೆ. ಅಲ್ಲಿಂದ ಅವರು ಕಂದಕ ತೋಡುವ ಕಾರ್ಯದ ಮೆಲ್ನೋಟ ಸುಲಭದಿಂದ ಮಾಡಬಹುದಾಗಿತ್ತು. ಪ್ರವಾದಿ (ಸ.ಅ)ರು ಕಂದಕದ ಮೆಲ್ನೋಟ ಮಾತ್ರ ವಿಕ್ಷಿಸುತ್ತಿರಲಿಲ್ಲ. ಸ್ವತಃ ಅವರು ಕೂಡ ಕಂದಕ ತೋಡುತ್ತಿದ್ದರು. ತಮ್ಮ ಸಂಗಾತಿಗಳ ಜೊತೆಯಲ್ಲಿ ಅವರು ಕೂಡ ಪಿಕ್ಕಾಸು ಹಿಡಿದು ಹೊಂಡ ತೋಡುತ್ತಿದ್ದರು.

ಒಂದೆಡೆ ಒಂದು ಬಂಡೆಕಲ್ಲು ಸಿಕ್ಕಿಬಿಡುತ್ತದೆ. ಪ್ರವಾದಿ (ಸ.ಅ)ರ ಸಂಗಾತಿಗಳ ಪೈಕಿಯಲ್ಲಿ ಯಾರು ಕೂಡ ಅದನ್ನು ಒಡೆಯಲು ಶಕ್ತರಾಗಿರುವುದಿಲ್ಲ. ಆಗ ಪ್ರವಾದಿ (ಸ.ಅ)ರು ಸ್ವತಃ ಅಲ್ಲಿಗೆ ತಲುಪುತ್ತಾರೆ. ಮೂರು ಏಟುಗಳೊಂದಿಗೆ ಅದನ್ನು ನುಚ್ಚು ನೂರುಗೊಳಿಸಿ ಬಿಡುತ್ತಾರೆ. ಆಗಲೂ ಹಸಿವೆಯ ಕಾರಣದಿಂದಾಗಿ ಪ್ರವಾದಿ (ಸ.ಅ)ರ ಉದರದ ಮೇಲೆ ಕಲ್ಲು ಕಟ್ಟಲ್ಪಟ್ಟಿತು.  ಕಂದಕ ತೋಡುವ ಕೆಲಸ ಅತಿ ಶೀಘ್ರ ಗತಿಯಿಂದ ಸಾಗುತ್ತಿದೆ. ಇತ್ತ ಮುಸ್ಲಿಮರು ಕಂದಕ ತೋಡುವ ಕೆಲಸ ಪೂರ್ತಿಮಾಡಿದರೆ ಅತ್ತ ಶತ್ರುಗಳ ತಂಡವು ಬಂದು ಮುಟ್ಟಿದೆ. ಅಬೂ ಸುಪ್ಯಾನ್ ಈ ಸೇನೆಯ ದಂಡನಾಯಕರಾಗಿದ್ದಾರೆ. ಶತ್ರು ಸೇನೆಯಲ್ಲಿ ಒಟ್ಟು ನಾಲ್ಕು ಸಾವಿರ ಯೋಧರು ಇದ್ದಾರೆ.

ಇನ್ ಶಾ ಅಲ್ಲಾಹ್, ಭಾಗ- 121ರಲ್ಲಿ ಮುಂದುವರಿಯುತ್ತದೆ.

Check Also

ಕಾಪಟ್ಯದ ರೋಗ ಮುಂದುವರಿದ ಭಾಗ (116)

100ಬರಹ-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ, ಭಾಗ 115 ರಿಂದ ಮುಂದುವರಿಯುತ್ತದೆ. ಪ್ರವಾದಿ(ಸ.ಅ)ರೇ ಝೈದ್ ನಿಮ್ಮಲ್ಲಿ ಹೇಳಿರುವ ವಿಷಯವನ್ನು ನಾನು ಹೇಳಿಯೇ ಇಲ್ಲ …

Leave a Reply

Your email address will not be published. Required fields are marked *