Tuesday , April 7 2020
Breaking News
Home / ಆರೋಗ್ಯ / ತಲೆಯ ಹೊಟ್ಟಿನ ಸಮಸ್ಯೆಗೆ ಈ ಮನೆ ಮದ್ದು ಅತ್ಯಂತ ಪರಿಣಾಮಕಾರಿ

ತಲೆಯ ಹೊಟ್ಟಿನ ಸಮಸ್ಯೆಗೆ ಈ ಮನೆ ಮದ್ದು ಅತ್ಯಂತ ಪರಿಣಾಮಕಾರಿ

ಸಂದೇಶ ಇ-ಮ್ಯಗಝಿನ್: ತಲೆ ಹೊಟ್ಟಿನ ಸಮಸ್ಯೆ ಅಥವಾ ಇಂಗ್ಲೀಷಿನಲ್ಲಿ ಡಾಂಡ್ರಫ್ ಎಂದು ಹೇಳುವ ಈ ಸಮಸ್ಯೆ ಅತೀ ಹೆಚ್ಚು ಜನರನ್ನು ಕಾಡುತ್ತಿದೆ. ಈ ತಲೆ ಹೊಟ್ಟಿನಿಂದಾಗಿ ತಲೆಯಲ್ಲಿ ತುರಿಕೆ, ಕೂದಲು ಉದುರುವುದು ಮುಂತಾದ ಸಮಸ್ಯೆ ಉದ್ಭವಿಸುತ್ತದೆ. ಹೆಚ್ಚಿನ ಎಲ್ಲಾ ಶ್ಯಾಂಪು ಗಳು anti dandruff(ಹೊಟ್ಟು ನಿರೋಧಕ) ಎಂದು ಲೇಬಲ್ ಹಾಕಿ ಬರುತ್ತವೆಯಾದರೂ, ಇದರಿಂದ ಈ ಸಮಸ್ಯೆ ಅಷ್ಟಾಗಿ ಗುಣಮುಖವಾಗಿದ್ದು ಬಹಳ ವಿರಳ.

ಈ ಸಮಸ್ಯೆ ಉಲ್ಬಣಿಸಿದರೆ ನಿಮಗೆ ಯಾವುದೇ ಕೆಲಸ ಮಾಡುವಾಗಲೂ ತಲೆ ತುರಿಸುತ್ತಾ ಹಿಂಸೆ ಎನಿಸಬಹುದು. ಇದಕ್ಕಾಗಿ ನೀವು ಮನೆಯಲ್ಲೇ ಮಾಡಬಹುದಾದಂತಹ ಒಂದು ಪರಿಣಾಮಕಾರಿ ಮದ್ದನ್ನು ಹೇಳುತ್ತಿದ್ದೇನೆ. ಸ್ವಂತ ಅನುಭವದ ಮೇಲೆ ಹೇಳುತ್ತಿದ್ದೇನೆ. ಖಂಡಿತಾ ಇದು ನಿಮ್ಮ ತಲೆ ಹೊಟ್ಟಿನ ಸಮಸ್ಯೆಗೆ ಪರಿಣಾಮಕಾರಿ ಮದ್ದು.

ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ತುಂಡರಿಸಿ ಅದರ ಒಂದು ತುಂಡನ್ನು ಒಂದು ಸಣ್ಣ ಪಾತ್ರೆಯಲ್ಲಿ ಹಿಂಡಿರಿ. ಆನಂತರ ಅದರ ಬೀಜವನ್ನು ಹೆಕ್ಕಿ ತೆಗೆಯ ಬೇಕು. ನಿಮ್ಮಲ್ಲಿ anti dandruff ಶ್ಯಾಂಪೂ ಇದ್ದರೆ (ಇಲ್ಲದಿದ್ದರೆ ಬೇರೆ ಯಾವುದೇ ಶ್ಯಾಂಪೂ ಆಗಬಹುದು) ಅದನ್ನು ಸ್ವಲ್ಪ ಈ ನಿಂಬೆ ರಸಕ್ಕೆ ಬೆರೆಸಿರಿ. ಚೆನ್ನಾಗಿ ಕಲಸಿದ ನಂತರ ತಲೆಗೆ ಹಚ್ಚಿರಿ. ಒಂದು ಅರ್ಧ ಗಂಟೆ ಬಿಟ್ಟು ತಲೆಯನ್ನು ತಣ್ಣೀರಿನಲ್ಲಿ ತೊಳೆಯಬೇಕು.

ಆನಂತರ ಒಂದು ಲೋಟದಲ್ಲಿ ಕಾಲು ಭಾಗದಷ್ಟು ನೀರು ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ಇನ್ನೊಂದು ಭಾಗವನ್ನು ಹಿಂಡಿರಿ. ಅದನ್ನು ಚೆನ್ನಾಗಿ ಕಲಸಿದ ನಂತರ ಅದನ್ನು ಕೂದಲಿನ ಬುಡಕ್ಕೆ ಹಚ್ಚಿರಿ. ಆ ನಂತರ ಹತ್ತು ನಿಮಿಷ ಬಿಟ್ಟು ಟವಲ್‌ನಲ್ಲಿ ತಲೆ ಒರೆಸಿ. ಖಂಡಿತಾ ಈ ವಿಧಾನ ನಿಮ್ಮ ತಲೆ ಹೊಟ್ಟಿನ ಸಮಸ್ಯೆಗೆ ಒಂದೇ ದಿನದಲ್ಲಿ ಫುಲ್ ಸ್ಟಾಪ್ ಹಾಕುತ್ತದೆ. ಟ್ರೈ ಮಾಡಿ.

Check Also

ಮಹಾಮಾರಿ ನಿಫಾ ವೈರಸ್: ಮುಂಜಾಗ್ರತ ಕ್ರಮ ಹೇಗೆ?

ಇದುವರೆಗೂ ಯಾರೂ ಹೆಸರು ಕೇಳಿರದ ಹಾಗೂ ಕೆಲವು ದಿನಗಳಿಂದ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಹೆಸರೇ ‘ನಿಪಾ ವೈರಸ್’. ಇತ್ತೀಚೆಗೆ …

Leave a Reply

Your email address will not be published. Required fields are marked *