Monday , July 22 2019
Breaking News
Home / ವಿಶೇಷ / ಕೆಎಸ್ಆರ್ಟಿಸಿ ಬಸ್ಸನ್ನು ಆಂಬುಲೆನ್ಸ್ ಮಾಡಿ ಮಹಿಳೆಯ ಜೀವ ರಕ್ಷಿಸಿದ ಚಾಲಕ ಮತ್ತು ನಿರ್ವಾಹಕ-ವ್ಯಾಪಕ ಪ್ರಶಂಸೆ

ಕೆಎಸ್ಆರ್ಟಿಸಿ ಬಸ್ಸನ್ನು ಆಂಬುಲೆನ್ಸ್ ಮಾಡಿ ಮಹಿಳೆಯ ಜೀವ ರಕ್ಷಿಸಿದ ಚಾಲಕ ಮತ್ತು ನಿರ್ವಾಹಕ-ವ್ಯಾಪಕ ಪ್ರಶಂಸೆ

ಸಂದೇಶ ಇ-ಮ್ಯಾಗಝಿನ್: ಕೇರಳದ ಕೆಎಸ್ಆರ್ಟಿಸಿ ಚಾಲಕ ಮತ್ತು ಕಂಡಕ್ಟರ್ ಬಸ್ಸಿನಲ್ಲಿ ಪ್ರಯಾಣಿಸುವಾಗ ಎದೆ ನೋವಿನಿಂದ ಅಸ್ವಸ್ಥರಾದ ಮಹಿಳಾ ಪ್ರಯಾಣಿಕರೊಬ್ಬರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಿ ಜೀವ ರಕ್ಷಣೆ ಮಾಡಿ ಸಾರ್ವಜನಿಕರ ಪ್ರಶಂಶೆಗೆ ಪಾತ್ರವಾಗಿದ್ದಾರೆ. ಕಾರ್ಯನಿರತ ರಸ್ತೆಯಲ್ಲಿ ಬಸ್ ಅನ್ನು ಯಾವುದೇ ಅಡೆತಡೆ ಇಲ್ಲದೆ ಝೀರೋ ಟ್ರಾಫಿಕ್ ಮಾಡುವ ಮೂಲಕ ಸಮಯಕ್ಕೆ ಸರಿಯಾಗಿ ಬಸ್ ಆಸ್ಪತ್ರೆಗೆ ತಲುಪಲು ಪೊಲೀಸರು ದಾರಿ ಮಾಡಿಕೊಟ್ಟರು. ಪಪ್ಪನಮ್‌ಕೋಡ್ ಡಿಪೋದ ಈ ಸರಕಾರಿ ಬಸ್ ನಾಗರ್‌ಕೋಯಿಲ್‌ನಿಂದ ತಿರುವನಂತಪುರಂಗೆ ಪ್ರಯಾಣಿಸುತ್ತಿತ್ತು. ಬಸ್ ಬಲರಾಮಪುರಂ ತಲುಪುತ್ತಿದ್ದಂತೆ ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಎದೆ ನೋವು ಕಾಣಿಸಿಕೊಂಡಿದೆ. ಮಹಿಳೆ ನರಳುವುದನ್ನು ನೋಡಿದ ಸಹ ಪ್ರಯಾಣಿಕರು ಈ ವಿಷಯವನ್ನು ಬಸ್ ಕಂಡಕ್ಟರ್‌ಗೆ ತಿಳಿಸಿದರು. ಕೂಡಲೇ ಕಂಡಕ್ಟರ್ ಶ್ರೀಕಾಂತ್ ಹಾಗೂ ಚಾಲಕ ರಾಜೇಶ್ ಸೇರಿ ಮಹಿಳೆಯ ಜೀವ ಉಳಿಸುವ ಸಲುವಾಗಿ ಬಸ್ಸನ್ನು ಆಂಬುಲೆನ್ಸ್ ಮಾಡಲು ನಿರ್ಧರಿಸಿದರು.

ಬಸ್ ವೇಗದಿಂದ ಹಾರ್ನ್ ಹಾಗೂ ಹೆಡ್ ಲೈಟ್ ಹಾಕಿ ಧಾವಿಸುವುದನ್ನು ಗಮನಿಸಿದ ಕರಕಮಂಡಪಂನ ಪೊಲೀಸ್ ನಿಯಂತ್ರಣ ಕೊಠಡಿಯ ಪೊಲೀಸ್ ಅಧಿಕಾರಿಗಳು ನಿಲ್ಲಿಸಿ ವಿಚಾರಣೆ ಮಾಡಿದಾಗ ವಿಷಯ ತಿಳಿದ ಪೋಲೀಸರು ಝೀರೋ ಟ್ರಾಫಿಕ್ ನಲ್ಲಿ ಬಸ್ ಆಸ್ಪತ್ರೆಗೆ ಸಾಗಲು ವ್ಯವಸ್ಥೆ ಮಾಡಿದರು. ಅಂತಿಮವಾಗಿ 4 ಕಿ.ಮೀ ಪ್ರಯಾಣಿಸಿದ ನಂತರ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಬಸ್ ಚಾಲಕ ಮತ್ತು ನಿರ್ವಾಹಕನ ಮಹತ್ವದ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Check Also

ಇಸ್ಲಾಮ್ ವಿಶ್ವದ ಶಾಂತಿಯ ಧರ್ಮ ಎಂದು ಯುನೆಸ್ಕೋ ಪ್ರಮಾಣ ಪತ್ರ ನೀಡಿದೆ ಎಂಬುದರ ಸತ್ಯಾಸತ್ಯತೆ ಇಲ್ಲಿದೆ

101ಸಂದೇಶ ಇ-ಮ್ಯಾಗಝಿನ್: ಇತ್ತೀಚೆಗೆ ಕೆಲವು ಸಮಯಗಳಿಂದ ಇಸ್ಲಾಮ್ ಶಾಂತಿಯ ಧರ್ಮ ಎಂದು ಯುನೆಸ್ಕೋ ನೀಡಿದೆ ಎನ್ನಲಾದ ಪ್ರಮಾಣ ಪತ್ರದ ಸ್ಕ್ಯಾನ್ …

Leave a Reply

Your email address will not be published. Required fields are marked *