Friday , November 15 2019
Breaking News
Home / ವಿಶೇಷ / ತಮ್ಮ ಒಳ್ಳೆಯ ಮನಸ್ಸಿನಿಂದಾಗಿ ಈ ತಾತ ಕೇರಳದಾದ್ಯಂತ ಮನೆಮಾತಾಗಿದ್ದಾರೆ

ತಮ್ಮ ಒಳ್ಳೆಯ ಮನಸ್ಸಿನಿಂದಾಗಿ ಈ ತಾತ ಕೇರಳದಾದ್ಯಂತ ಮನೆಮಾತಾಗಿದ್ದಾರೆ

ಸಂದೇಶ ಇ-ಮ್ಯಾಗಝಿನ್: ದಿನಂಪ್ರತಿ ಬಸ್ ಪ್ರಯಾಣ ಮಾಡುವವರಿಗೆ ಅನುಭವ ಇರುವ ಹಾಗೆ, ಕಂಡಕ್ಟರ್ ಜೊತೆ ಚಿಲ್ಲರೆಗಾಗಿ ಜಗಳ ಯಾವಾಗಲೂ ಇದ್ದದ್ದೇ. ಆದರೆ ಕೇರಳದ ಕಾಸರಗೋಡಿನ ವೃದ್ಧರೊಬ್ಬರು ಕಂಡಕ್ಟರ್ ಕೊಟ್ಟ ಹೆಚ್ಚಿನ ಹಣವನ್ನು ಹಿಒಂದಿರುಗಿಸಲು ಫೇಸ್ಬುಕ್ ಮೊರೆ ಹೋಗಿದ್ದು, ಇವರ ಉತ್ತಮ ಮನಸ್ಸಿನಿಂದಾಗಿ ಇದೀಗ ಕೇರಳದಾದ್ಯಂತ ಮನೆ ಮಾತಾಗಿದ್ದಾರೆ. ಕಾಸರಗೋಡ್ ಕೆ‌ಎಸ್‌‍ಆರ್‌ಟಿಸಿ ಬಸ್ ಡಿಪೋಟ್‌ನ ಮಹಿಳಾ ಕಂಡಕ್ಟರ್ ಆಗಿರುವ ರಶ್ಮಿ ಅಜಿತ್ ಅವರು ಡ್ಯೂಟಿ ನಿರ್ವಹಿಸುತ್ತಿರುವಾಗ ಬಸ್ ಹತ್ತಿದ ವಯೋವೃದ್ಧರೊಬ್ಬರು ತಾವು ಪ್ರಯಾಣಿಸಬೇಕಾದ ಜಾಗಕ್ಕೆ 20 ರೂ. ಟಿಕೆಟ್ ಪಡೆದಿದ್ದರು. ಇದಕ್ಕಾಗಿ ಅವರು ಕಂಡಕ್ಟರ್‌ಗೆ 20 ರೂ. ನೀಡಿದ್ದರು. ಆದರೆ ಕಣ್ತಪ್ಪಿನಿಂದಾಗಿ ಬಸ್ ಕಂಡಕ್ಟರ್ ರಶ್ಮಿಯವರು ವೃದ್ಧರಿಗೆ 84 ರೂ. ಚಿಲ್ಲರೆ ನೀಡಿದ್ದಾರೆ. ನಂತರ ವೃದ್ಧರು ಬಸ್ ನಿಂದ ಇಳಿದು ತಲೆಶ್ಶೇರಿ ಕಡೆಗೆ ಹೋಗುವ ಬೇರೆ ಬಸ್ ಹತ್ತಿದ್ದಾರೆ. ಆದರೆ ಈ ಸಮಯದಲ್ಲಿ ಟಿಕೆಟ್ ಪಡೆಯುವಾಗ ಹಿಂದಿನ ಬಸ್ ನ ಕಂಡಕ್ಟರ್ ತಮಗೆ ಹೆಚ್ಚಿನ ಹಣ ನೀಡಿದ್ದು ವೃದ್ಧ ವ್ಯಕ್ತಿಯ ಗಮನಕ್ಕೆ ಬಂದಿದೆ.

ಕೂಡಲೇ ಬಸ್ ಕಂಡಕ್ಟರ್‌ನನ್ನು ಕರೆದು ನಾನು ಹಿಂದೆ ಪ್ರಯಾಣಿಸಿದ್ದ ಬಸ್‌ನಲ್ಲಿದ್ದ ಮಹಿಳಾ ಕಂಡಕ್ಟರ್ ನನಗೆ ಚಿಲ್ಲರೆಯಾಗಿ ಹೆಚ್ಚು ಹಣ ನೀಡಿದ್ದಾರೆ. ದಯವಿಟ್ಟು ಅವರಿಗೆ ಈ ಹಣವನ್ನು ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾರೆ. ಬಸ್ ಕಂಡಕ್ಟರ್ ಶಫೀಕ್ ಇಮ್ರಾಹಿಂ ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಮಾಡಿ, ವೃದ್ಧ ವ್ಯಕ್ತಿಯ ಫೋಟೋ ಜೊತೆಗೆ ವಿಷಯ ತಿಳಿಸಿದ್ದಾರೆ. ಪೋಸ್ಟ್ ವೈರಲ್ ಆಗಿ ರಶ್ಮಿ ಅವರಿಗೆ ವಿಷಯ ಗೊತ್ತಾಗಿ ಕೊನೆಗೋ ಹಣ ರಶ್ಮಿ ಅವರ ಕೈ ಸೇರಿದೆ. ಬಳಿಕ ವಯೋವೃದ್ಧರನ್ನು ಹುಡುಕಿಕೊಂಡು ಹೋಗಿರುವ ರಶ್ಮಿ ಉತ್ತಮ ಮನಸ್ಥಿತಿಗಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವೃದ್ಧ ವ್ಯಕ್ತಿಯ ಉತ್ತಮ ಮನಸ್ಥಿತಿಗೆ ಕೇರಳಿಗರು ಪ್ರಶಂಸಿದ್ದಾರೆ.

Check Also

ನನ್ನ ಉಮ್ಮಾ: ಹಿಂದೂ ವ್ಯಕ್ತಿ ತನ್ನ ಮುಸ್ಲಿಂ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಪೋಸ್ಟ್ ವೈರಲ್

ಸಂದೇಶ ಇ-ಮ್ಯಾಗಝಿನ್: ಕೇರಳದ ಮಲಪ್ಪುರಂನ ಕಾಳಿಕಾವ್‌ನ ಅನಿವಾಸಿ ಭಾರತೀಯರಾದ ಶ್ರೀಧರನ್ ಅವರ ಫೇಸ್‌ಬುಕ್ ಪೋಸ್ಟ್, “ನನ್ನ ಉಮ್ಮಾ (ತಾಯಿ) ಅಲ್ಲಾಹನ …

Leave a Reply

Your email address will not be published. Required fields are marked *