Friday , April 3 2020
Breaking News
His Holiness the Karmapa at TEDIndia, Session 9, "Within You, Without You," November 7, 2009, in Mysore, India. Credit: TED / James Duncan Davidson
Home / ರಾಷ್ಟ್ರೀಯ / ರಾಮನ ಹೆಸರಲ್ಲಿ ಜನರನ್ನು ಕೊಲ್ಲುತ್ತಿರುವುದು ರಾಮನಿಗೆ ಮಾಡುತ್ತಿರುವ ಅವಮಾನವಾಗಿದೆ: ಶಶಿ ತರೂರ್

ರಾಮನ ಹೆಸರಲ್ಲಿ ಜನರನ್ನು ಕೊಲ್ಲುತ್ತಿರುವುದು ರಾಮನಿಗೆ ಮಾಡುತ್ತಿರುವ ಅವಮಾನವಾಗಿದೆ: ಶಶಿ ತರೂರ್

ಸಂದೇಶ ಇ-ಮ್ಯಾಗಝಿನ್: ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೇಸ್ ಮುಖಂಡ ಶಶಿ ತರೂರ್, “ಕಳೆದ 6 ವರ್ಷಗಳಲ್ಲಿ ನಾವು ಏನು ನೋಡುತ್ತಿದ್ದೇವೆಯೋ, ಇದು ಪುಣೆಯಲ್ಲಿ ಮೊಹ್ಸಿನ್ ಶೇಖ್ ಹತ್ಯೆಯೊಂದಿಗೆ ಪ್ರಾರಂಭವಾಯಿತು. ಆ ನಂತರ ಮೊಹಮ್ಮದ್ ಅಖ್ಲಾಕ್ ಅವರು ಗೋಮಾಂಸವನ್ನು ಸಾಗಿಸುತ್ತಿದ್ದಾರೆಂದು ಹೇಳಿ ಕೊಲ್ಲಲ್ಪಟ್ಟರು. ಆದರೆ ಅದು ಗೋಮಾಂಸವಲ್ಲ ಎಂದು ನಂತರ ವರದಿಯಾಗಿದೆ. ಅದು ಗೋಮಾಂಸವಾಗಿದ್ದರೂ ಸಹ ಒಬ್ಬ ವ್ಯಕ್ತಿಯನ್ನು ಕೊಲ್ಲುವ ಹಕ್ಕನ್ನು ಯಾರಿಗಾದರೂ ಇದೆಯೇ ಎಂದು ತರೂರ್ ಪ್ರಶ್ನಿಸಿದರು.

“ಇದು ನಮ್ಮ ಭಾರತವೇ? ಹಿಂದೂ ಧರ್ಮ ಹೇಳುತ್ತಿರುವುದು ಇದೆಯೇ? ನಾನು ಹಿಂದೂ ಆದರೆ ಈ ರೀತಿಯವನಲ್ಲ. ಅಲ್ಲದೆ, ಜನರನ್ನು ಕೊಲ್ಲುವಾಗ, ಅವರನ್ನು ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಲಾಗುತ್ತಿದೆ. ಇದು ಹಿಂದೂ ಧರ್ಮಕ್ಕೆ ಮಾಡುತ್ತಿರುವ ಅವಮಾನ. ರಾಮನ ಹೆಸರನ್ನು ಬಳಸಿಕೊಂಡು ಜನರನ್ನು ಕೊಲ್ಲಲಾಗುತ್ತಿದೆ ಎಂಬುದು ಭಗವಾನ್ ರಾಮನಿಗೆ ಮಾಡಿದ ಅವಮಾನ.” ಎಂದು ಶಶಿ ತರೂರ್ ಅಭಿಪ್ರಾಯ ಪಟ್ಟರು.

55 ವರ್ಷದ ಡೈರಿ ರೈತ ದಿವಂಗತ ಪೆಹ್ಲು ಖಾನ್ ಬಗ್ಗೆ ಮಾತನಾಡುತ್ತಾ, 2017 ರ ಏಪ್ರಿಲ್‌ನಲ್ಲಿ ಅಲ್ವಾರ್‌ನಲ್ಲಿ ಹಸು ಕಳ್ಳಸಾಗಣೆ ಅನುಮಾನದ ಮೇಲೆ ಸ್ವಯಂ ಘೋಷಿತ ಗೋರಕ್ಷಕರಿಂದ ಕೊಲ್ಲಲ್ಪಟ್ಟರು. ಪೆಹ್ಲೂ ಖಾನ್ ಅವರು ಡೈರಿ ಕೃಷಿಗಾಗಿ ಲಾರಿಯಲ್ಲಿ ಹಸುವನ್ನು ಸಾಗಿಸುವ ಪರವಾನಗಿ ಹೊಂದಿದ್ದರು, ಆದರೆ ಆತನನ್ನು ಸಹ ಕೊಲ್ಲಲಾಯಿತು. ಒಂದು ಚುನಾವಣಾ ಫಲಿತಾಂಶವು ಇಂತಹ ಜನರಿಗೆ ತುಂಬಾ ಶಕ್ತಿಯನ್ನು ನೀಡಿತು, ಅವರು ಏನು ಬೇಕಾದರೂ ಮಾಡುತ್ತಾರೆ ಮತ್ತು ಯಾರನ್ನೂ ಕೊಲ್ಲುತ್ತಾರೆ ಎಂದು ತರೂರ್ ಹೇಳಿದರು.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *