Monday , August 26 2019
Breaking News
Home / ಅಂತಾರಾಷ್ಟ್ರೀಯ / ಜಿಹಾದ್ ಹಾಗೂ ಭಯೋತ್ಪಾದನೆಯ ವಿಚಾರದಲ್ಲಿ ಮಹತ್ವದ ಹೇಳಿಕೆ ನೀಡಿದ ಎರ್ದೋಗಾನ್

ಜಿಹಾದ್ ಹಾಗೂ ಭಯೋತ್ಪಾದನೆಯ ವಿಚಾರದಲ್ಲಿ ಮಹತ್ವದ ಹೇಳಿಕೆ ನೀಡಿದ ಎರ್ದೋಗಾನ್

ಸಂದೇಶ ಇ-ಮ್ಯಾಗಝಿನ್: ತುರ್ಕಿ ಅಧ್ಯಕ್ಷ ರಸೆಪ್ ತೆಯ್ಯಿಬ್ ಎರ್ದೋಗಾನ್ ಶುಕ್ರವಾರ ದೇಶದ ಅತಿದೊಡ್ಡ ಮಸಿದಿಯಾಗಿರುವ ಕ್ಯಾಮ್‌ಲಿಕಾ ಮಸೀದಿಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎರ್ದೋಗಾನ್ “ಮಸೀದಿಗಳು ನಮ್ಮ ಇತಿಹಾಸ, ನಾಗರಿಕತೆ ಹಾಗೂ ವಿಶ್ವಾಸದ ಚಿಹ್ನೆಗಳಾಗಿವೆ ಎಂದರು. ಈ ಸಂದರ್ಭದಲ್ಲಿ ನ್ಯೂಝಿಲ್ಯಾಂಡ್ ಕ್ರೈಸ್ಟ್ ಚರ್ಚ್ ಮಸೀದಿ ದಾಳಿ ಹಾಗೂ ಶ್ರೀಲಂಕಾದ ಚರ್ಚ್ ದಾಳಿಯನ್ನು ಸ್ಮರಿಸಿದ ಎರ್ದೋಗಾನ್ ಮಸೀದಿ ಹಾಗೂ ಚರ್ಚ್‌ಗಳ ಮೇಲೆ ದಾಳಿ ನಡೆಸುವವರು ಕತ್ತಲೆಯ ಮನಸ್ಥಿತಿಯನ್ನು ಹೊಂದಿರುವಂತಹ ಜನರಾಗಿದ್ದಾರೆ. ಆರಾಧನಾಲಯಗಳ ಮೇಲೆ ದಾಳಿ ಮಾಡಿ ಅಮಾಯಕರನ್ನು ಕೊಲ್ಲುವುದು ಜಿಹಾದ್ ಅಲ್ಲ, ಅದು ಭಯೋತ್ಪಾದನೆ, ದೌರ್ಜನ್ಯ ಮತ್ತು ಕೊಲೆ ಮಾತ್ರ ವಾಗಿದೆ ಎಂದರು.

ಕ್ಯಾಮ್‌ಲಿಕಾ ಮಸೀದಿಯನ್ನು ಸುಮಾರು 100 ಮಿಲಿಯನ್ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಕಳೆದ ಆರು ವರ್ಷಗಳಿಂದ ಇದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಸ್ತಾಂಬುಲ್‌ನ ಎತ್ತರದ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಮಸೀಯನ್ನು ಇಸ್ತಾಂಬುಲ್ ನಗರದ ಯಾವುದೇ ಮೂಲೆಯಲ್ಲಿ ನಿಂತರೂ ಕಾಣಬಹುದಾಗಿದೆ. ಏಕ ಕಾಲದಲ್ಲಿ 63000 ಜನರು ನಮಾಝ್ ಮಾಡುವ ಸೌಲಭ್ಯ ಹೊಂದಿರುವ ಈ ಮಸೀದಿಯನ್ನು ಒಟ್ಟೋಮನ್ ವಾಸ್ತುಕಲಾ ಪ್ರಕಾರದ ಉನ್ನತ ನಿರ್ಮಾಣ ಎನ್ನಲಾಗುತ್ತಿದೆ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *