Tuesday , December 10 2019
Breaking News
Home / ಭಾರತೀಯ ಮುಸ್ಲಿಮರು / ಮಲಪ್ಪುರಂ: ನಿಖಾಬ್‌ಗೆ ನಿಷೇಧ ಹೇರಿದ ಮುಸ್ಲಿಮ್ ಶಿಕ್ಷಣ ಸಂಸ್ಥೆ

ಮಲಪ್ಪುರಂ: ನಿಖಾಬ್‌ಗೆ ನಿಷೇಧ ಹೇರಿದ ಮುಸ್ಲಿಮ್ ಶಿಕ್ಷಣ ಸಂಸ್ಥೆ

ಸಂದೇಶ ಇ-ಮ್ಯಾಗಝಿನ್: ದೇಶದ ಸುರಕ್ಷತೆಯ ದೃಷ್ಟಿಯಿಂದ ಬುರ್ಖ ನಿಷೇಧ ಮಾಡಬೇಕು ಎಂದು ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಶಿವ ಸೇನೆಯು ಆಗ್ರಹಿಸುತ್ತಿರುವಂತೆ ಕೇರಳದ ಮಲಪ್ಪುರಂನ ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಯೊಂದು ತನ್ನ ಸಂಸ್ಥೆಯಲ್ಲಿ ಕಲಿಯುವ ಹೆಣ್ಣು ಮಕ್ಕಳು ಮುಖವನ್ನು ಮರೆಸಿ ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರಿದೆ. ಮಲಪ್ಪುರಂನ ಮುಸ್ಲಿಮ್ ಎಜುಕೇಶನ್ ಸೊಸಾಯಿಟಿ ಈ ಆದೇಶ ಜಾರಿ ಮಾಡಿದ್ದು, ಬರುವ 2019-20 ಸಾಲಿನ ಶೈಕ್ಷಣಿಕ ವರ್ಷದಲ್ಲಿ ತನ್ನ ಎಲ್ಲಾ ಶಿಕ್ಷಣ ಸಂಸ್ಥೆಯಲ್ಲಿ ಜಾರಿಯಾಗುವಂತೆ ಸೊಸಾಯಿಟಿ ಆದೇಶ ಹೊರಡಿಸಿದೆ. ಕೋಝಿಕ್ಕೋಡ್ ಮೂಲದ ಮುಸ್ಲಿಮ್ ಎಜುಕೇಶನ್ ಸೊಸಾಯಿಟಿಯ ವತಿಯಿಂದ ದೇಶಾದ್ಯಂತ ಸುಮಾರು 15 ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಮಹಿಳೆಯರು ಮುಖ ಮುಚ್ಚುವ ಪರ್ದಾ ಪದ್ದತಿ ಹಿಂದೆ ಇರಲಿಲ್ಲ. ಇದು ಇತ್ತೀಚೆಗೆ ಪ್ರಾರಂಭವಾದ ನೂತನ ಫ್ಯಾಷನ್ ಆಗಿದೆ ಎಂದು ಸಂಸ್ಥೆ ತನ್ನ ಆದೇಶದಲ್ಲಿ ಸೊಸಾಯಿಟಿಯ ಅಧ್ಯಕ್ಷ ಫಝಲ್ ಗಫೂರ್ ತಿಳಿಸಿದ್ದಾರೆ.

ಈ ಆದೇಶವನ್ನು ಮುಸ್ಲಿಮ್ ವಿರೊಧಿ ಎಂದಿರುವ ಮುಸ್ಲಿಮ್ ಸಂಘಟನೆಯೊಂದರ ಮುಖಂಡ ಉಮರ್ ಫೈಝಿ ಆದೇಶವನ್ನು ಹಿಂತೆಗೆಯುವಂತೆ ಆಗ್ರಹಿಸಿದ್ದಾರೆ. ಇಸ್ಲಾಮಿಕ್ ನಿಯಮದ ಅನುಸಾರ ಮಹಿಳೆಯರಿಗೆ ದೇಹದ ಯಾವುದೇ ಭಾಗವನ್ನೂ ಪ್ರದರ್ಶಿಸುವಹಾಗಿಲ್ಲ. ಇಸ್ಲಾಮಿಕ್ ನಿಯಮಗಳನ್ನು ಪಾಲಿಸಿ ಶಿಕ್ಷಣ ಪಡೆಯುವ ಅಧಿಕಾರ ಮುಸ್ಲಿಮ್ ಹೆಣ್ಣುಮಕ್ಕಳಿಗೆ ಇದೆ. ಅದನ್ನು ಕಸಿಯುವ ಅಧಿಕಾರ ಮುಸ್ಲಿಮ್ ಎಜುಕೇಶನ್ ಸೊಸಾಯಿಟಿಗೆ ಇಲ್ಲ ಎಂದು ಅವರೌ ಹೇಳಿದ್ದಾರೆ.

Check Also

ಕೇಂದ್ರೀಯ ಹಜ್ ಕಮಿಟಿಯ ವತಿಯಿಂದ ಮುಸ್ಲಿಮ್ ಅಭ್ಯರ್ಥಿಗಳಿಗೆ ಉಚಿತ ಐಎ‌ಎಸ್ ಕೋಚಿಂಗ್: ಅರ್ಜಿ ಆಹ್ವಾನ

ಸಂದೇಶ ಇ-ಮ್ಯಾಗಝಿನ್: ಕೇಂದ್ರೀಯ ಹಜ್ ಕಮಿಟಿಯ ಪರವಾಗಿ ಬರುವ ಸಾಲಿನ ಐಎ‌ಎಸ್ ಪರೀಕ್ಷೆ ಬರೆಯುವ ಮುಸ್ಲಿಮ್ ಅಭ್ಯರ್ಥಿಗಳಿಗೆ ನಿಶುಲ್ಕ ಕೋಚಿಂಗನ್ನು …

Leave a Reply

Your email address will not be published. Required fields are marked *