Tuesday , July 23 2019
Breaking News
Home / ವಿಶೇಷ / ರಾಹುಲ್ ಗಾಂಧಿಯನ್ನು ಮೊದಲ ಬಾರಿಗೆ ಎತ್ತಿದ್ದ ಕೇರಳದ ನರ್ಸ್ ಇದೀಗ ಹೇಳದ ಕಥೆಯನ್ನು ಹೇಳಲು ರಾಹುಲ್‌ರನ್ನು ಕಾಯುತ್ತಿದ್ದಾರೆ

ರಾಹುಲ್ ಗಾಂಧಿಯನ್ನು ಮೊದಲ ಬಾರಿಗೆ ಎತ್ತಿದ್ದ ಕೇರಳದ ನರ್ಸ್ ಇದೀಗ ಹೇಳದ ಕಥೆಯನ್ನು ಹೇಳಲು ರಾಹುಲ್‌ರನ್ನು ಕಾಯುತ್ತಿದ್ದಾರೆ

ಸಂದೇಶ ಇ-ಮ್ಯಾಗಝಿನ್: ನಿವೃತ್ತ ನರ್ಸ್ ಕೇರಳದ ವಯನಾಡ್ ನಿವಾಸಿ ರಾಜಮ್ಮ ಜನಿಸಿದ ತಕ್ಷಣ ರಾಹುಲ್ ಗಾಂಧಿಯನ್ನು ಮೊದಲ ಬಾರಿಗೆ ಎತ್ತಿದವರಂತೆ. ಇದೀಗ ರಾಹುಲ್ ಗಾಂಧಿ ವಯನಾಡ್‌ನಲ್ಲಿ ಲೋಕಸಭಾ ಚುನಾವನೆಗೆ ಸ್ಪರ್ಧಿಸುತ್ತಿರುವುದರಿಂದ ಬಹಳ ವರ್ಷಗಳ ನಂತರ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಕಾಯುತ್ತಿದ್ದಾರೆ. ರಾಹುಲ್ ಗಾಂಧಿ ಜೂನ್ 19 , 1970 ರಲ್ಲಿ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜನಿಸಿದ್ದರು. ಈ ಸಮಯದಲ್ಲಿ ಅದೇ ಆಸ್ಪತ್ರೆಯಲ್ಲಿ ರಾಜಮ್ಮ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು.

“ನನ್ನ ಮೊಮ್ಮಗ ರಾಹುಲ್ ಇದೀಗ ನಮ್ಮ ಊರಿಂದಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನನಗೆ ಸಂತೋಷದ ವಿಚಾರವಾಗಿದೆ. ಅವನನ್ನು ಒಮ್ಮೆ ಭೇಟಿಯಾಗ ಬೇಕು. ಅವನ ತಂದೆ ತಾಯಿಗೂ ತಿಳಿದಿಲ್ಲದ ಕೆಲವೊಂದು ಹೇಳದ ಕಥೆಯನ್ನು ಹೇಳಲು ಕಾಯುತ್ತಿದ್ದೇನೆ” ಎಂದು ರಾಜಮ್ಮ ಹೇಳಿದ್ದಾರೆ.

ಅಂದು ಪ್ರಧಾನ ಮಂತ್ರಿಯವರ ಮೊಮ್ಮಗ ಜನಿಸಿದ್ದಕ್ಕೆ ಎಲ್ಲರೂ ಸಂತೋಷ ಹಂಚಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ಪ್ರಥಮ ಬಾರಿಗೆ ಮಗುವನ್ನು ಎತ್ತಿ ಕೊಳ್ಳುವ ಅದೃಷ್ಟ ನನಗೆ ಲಭಿಸಿತ್ತು. ಆತ ತುಂಬಾ ಸುಂದರವಾಗಿದ್ದ, ತಾಯಿ ಸೋನಿಯಾರಿಗೆ ಚಿಕಿತ್ಸೆ ನಡೆಯುತ್ತಿತ್ತು. ಹೊರಗೆ ರಾಜೀವ್ ಹಾಗೂ ಸಂಜಯ್ ಇಬ್ಬರೂ ಕಾಯುತ್ತಿದ್ದರು. ಆ ಬಳಿಕ ಮಗು ಜನಿಸಿದ ಸುದ್ದಿ ತಿಳಿದು ಪ್ರಧಾನಿ ಇಂದಿರಾ ಗಾಂಧಿಯವರು ಆಸ್ಪತ್ರೆಗೆ ಭೇಟಿ ನೀಡಿದರು ಎಂದು ರಾಜಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದಾಗ ರಾಜಮ್ಮ ಅವರು ವಯನಾಡ್ ಮೂಲದವರಾದ ಮಿಲಿಟರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದ ವಾವತ್ತಿಲ್ ರಾಜಪ್ಪನ್ ಎಂಬವರನ್ನು ವಿವಾಹವಾಗಿ ಆ ಬಳಿಕ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಕೆಲಸ ಬಿಟ್ಟು ಮಿಲಿಟರಿ ಆಸ್ಪತ್ರೆಯಲ್ಲೇ ಕೆಲಸಕ್ಕೆ ಸೇರಿದರು. ಇದೀಗ ಗಂಡ ಹೆಂಡತಿ ಇಬ್ಬರೂ ನಿವೃತ್ತರಾಗಿದ್ದು, ಈ ದಂಪತಿಗಳ ಒಬ್ಬನೇ ಮಗ ರಾಜೇಶ್ ಕುವೈಟ್‌ನಲ್ಲಿ ಸೆಟಲ್ ಆಗಿದ್ದಾರೆ.

Check Also

ಬ್ರೈನ್ ಟ್ಯೂಮರ್ ಪೀಡಿತ ಮಗುವಿನ ಆಟಿಕೆ ಕದ್ದ ಕಳ್ಳರು ಕೊನೆಗೆ ಮಾಡಿದ ಕೆಲಸವೇನು ನೋಡಿ

001ಸಂದೇಶ ಇ-ಮ್ಯಾಗಝಿನ್: ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ 5 ವರ್ಷದ ಬಾಲಕನಿಗೆ ಸೇರಿದ ರೆಸ್ಲಿಂಗ್ ಬೆಲ್ಟನ್ನು ಕದ್ದ ಕಳ್ಳರು ನಂತರ …

Leave a Reply

Your email address will not be published. Required fields are marked *