Saturday , April 4 2020
Breaking News
Home / ರಿಯಲ್ ಹೀರೋಸ್ / ಇತರರ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ರೌಫ್ ಅಹ್ಮದ್ ದಾರ್

ಇತರರ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ರೌಫ್ ಅಹ್ಮದ್ ದಾರ್

ಸಂದೇಶ ಇ-ಮ್ಯಾಗಝಿನ್: ಜಮ್ಮು ಮತ್ತು ಕಾಶ್ಮೀರದಿಂದ ಒಂದು ದುರಂತಮಯ ಘಟನೆ ವರದಿಯಾಗಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಂನಲ್ಲಿ ಪ್ರವಾಸಿಗರನ್ನು ತುಂಬಿದ ಬೋಟ್ ಒಂದು ಮಗುಚಿ ಏಳು ಮಂದಿ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ರಕ್ಷಿಸಲು ಕಾಶ್ಮೀರಿ ಯುವಕನೊಬ್ಬ ನದಿಗೆ ಹಾರಿದ್ದು, ಕೊನೆಗೆ ಪ್ರವಾಸಿಗರ ಜೀವವನ್ನು ರಕ್ಷಿಸಿದ ಯುವಕ ಸ್ವತಃ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ರೌಫ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ರೌಫ್ ಅಹ್ಮದ್ ದಾರ್ ಇಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಇಲ್ಲಿ ಕೆಲಸ ಮಾಡುತ್ತಿದ್ದರು. ಸುದ್ದಿ ತಿಳಿದು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ದಾರ್ ಅವರ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದು, ರಾತ್ರಿ ಆಗಿದ್ದ ಕಾರಣ ಹುಡುಕಾಟಕ್ಕೆ ಅಡಚಣೆಯಾಗಿತ್ತು. ಮರುದಿನ ಹುಡುಕಾಟ ಪ್ರಾರಂಭಿಸಿದಾಗ ಭವಾನಿ ನದಿಯ ಸೇತುವೆಯ ಪಕ್ಕದಲ್ಲಿ ದಾರ್ ಮೃತ ದೇಹ ಪತ್ತೆಯಾಗಿದೆ.

ರೌಫ್ ಅಹ್ಮದ್ ದಾರ್ ಅವರು ತಮ್ಮ ಜೀವನವನ್ನು ಕಳೆದುಕೊಂಡು 7 ಮಂದಿಯ ಜೀವವನ್ನು ಉಳಿಸಿದ್ದಾರೆ. ಈ ಪ್ರವಾಸಿಗರಲ್ಲಿ ಇಬ್ಬರು ವಿದೇಶಿ ಪ್ರಜೆಗಳಾಗಿದ್ದಾರೆ. ಅನಂತನಾಗ್ ಜಿಲ್ಲೆಯ ಉಪ ಕಮೀಷನರ್ ಖಲೀದ್ ಜಹಾಂಗೀರ್ ಅವರು ದಾರ್ ಅವರ ಕಾರ್ಯವನ್ನು ಶ್ಲಾಘಿಸಿದ್ದು, ಸಾಹಸ ಪ್ರದರ್ಶಿಸಿ ಇತರರ ಜೀವ ರಕ್ಷಿಸಿದ ರೌಫ್ ಅಹ್ಮದ್ ದಾರ್‌ಗೆ ಮರಣೋತ್ತರ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.

Check Also

ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

ಸಂದೇಶ ಇ-ಮ್ಯಾಗಝಿನ್: ಕ್ಯಾವಿಟಿ ಕ್ರಷರ್ ಅನ್ನು ಕಂಡುಹಿಡಿದಿದ್ದಕ್ಕಾಗಿ 10 ವರ್ಷದ ಪಾಕಿಸ್ತಾನಿ ಮಗು ಮತ್ತು ಅವರ ಕುಟುಂಬದೊಂದಿಗೆ ಅಮೆರಿಕದಲ್ಲಿ ಎಐ …

Leave a Reply

Your email address will not be published. Required fields are marked *