Tuesday , April 7 2020
Breaking News
Home / ಕರಾವಳಿ / ದಕ್ಷಿಣ ಕನ್ನಡ ತುರ್ತು ಸೇವೆ ವಾಟ್ಸಾಪ್ ಗ್ರೂಪ್ ವತಿಯಿಂದ ಮದುವೆ ಫಂಡ್ ಹಸ್ತಾಂತರ

ದಕ್ಷಿಣ ಕನ್ನಡ ತುರ್ತು ಸೇವೆ ವಾಟ್ಸಾಪ್ ಗ್ರೂಪ್ ವತಿಯಿಂದ ಮದುವೆ ಫಂಡ್ ಹಸ್ತಾಂತರ

ಆರ್ಥಿಕವಾಗಿ ತೀರಾ ಬಡವರಾದ ಕೆ.ಸಿ.ರೋಡ್ ನಿವಾಸಿ ಅಹ್ಮದ್ ಬಾವರವರ ಮಗಳ ಮದುವೆಗೆದಕ್ಷಿಣ ಕನ್ನಡ ತುರ್ತು ಸೇವೆ ವಾಟ್ಸಾಪ್ ಗ್ರೂಪ್ಮೂಲಕ ಒಂದು ವಾರದಲ್ಲಿ ಸಂಗ್ರಹಿಸಿದ  1,67,786ರೂ ಸಹಾಯಧನ ಮೊತ್ತವನ್ನು  ಜೂ.19ರಂದು ಕೆ.ಸಿ ರೋಡ್ ಅಹ್ಮದ್ ಬಾವರವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಆರೀಫ್ ಮಾಚಾರು  ಇವರ ನೇತೃತ್ವದಲ್ಲಿ ಪ್ರಾರಂಭಿಸಿದ ಮಹತ್ಕಾರ್ಯಕ್ಕೆ ತಾಜ್ ಮಣಿಪಾಲ್,ಅಶ್ರಫ್ ಬೆಂಗಳೂರು ಹಾಗೂ ಶಾಹುಲ್ ಹಮೀದ್ ಮದ್ದಡ್ಕ ಇವರ ಸಮಾನ ಮನಸ್ಕ ಸ್ನೇಹಿತರು ,ಉದ್ಯಮಿಗಳು ಹಾಗೂ ಸಾರ್ವಜನಿಕರು ಕೈ ಜೋಡಿಸಿದರು. ಅದೇ ರೀತಿ ಸಂದರ್ಭದಲ್ಲಿ ಹನೀಫ್ ಕೆ.ಸಿ ರೋಡ್ ಉಪಸ್ಥಿತಿ ಇದ್ದರು. ಅಹ್ಮದ್ ಬಾವರವರದ್ದು ಬಡ ಕುಟುಂಬವಾಗಿದ್ದು,ಮಗಳಿಗೆ ಇದೇ ಬರುವ 22ನೇ ತಾರಿಕಿನಂದು ಮದುವೆ ನಿಶ್ಚಯ ವಾಗಿರುತ್ತದೆ.

ಮದುವೆಯ ಖರ್ಚುಭರಿಸಲು ಸಾಧ್ಯವಾಗದೆ ಕುಟುಂಬವು  ಕಂಗಾಲಾಗಿತ್ತು.  ಉಪಾಯ ಇಲ್ಲದೆ ಕೊನೆಯದಾಗಿ ಮದುಮಗಳೇ ಸ್ವತಃ ತನ್ನ ಕೈ ಬರಹದ ಮೂಲಕ ತಮ್ಮ ಕುಟುಂಬದ ಕಷ್ಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ವೈರಲಾಗಿತ್ತು. ಇದನ್ನು ಗಮನಿಸಿದ ನಮ್ಮ . ತುರ್ತು ಸೇವೆ ಆಡ್ಮಿನ್ ಬಳಗವು ಹೇಗಾದರೂ ಸ್ಪಂದಿಸಬೇಕೆಂದು ನಿರ್ಧರಿಸಿ .ಕ. ತುರ್ತು ಸೇವೆ  ವಾಟ್ಸಾಪ್ ಗ್ರೂಪ್ ಮೂಲಕ ಸಹಾಯಧನಕ್ಕೆ ಅಪೇಕ್ಷಿಸಿತ್ತು.

Check Also

ತನ್ನ ಮದುವೆಯಲ್ಲಿ ಊರಿನ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಮದುಮಗ

ಸಂದೇಶ ಇ-ಮ್ಯಾಗಝಿನ್: ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಸಾಮಾನ್ಯವಾಗಿ ರಾಜ್ಯದ ಇತರ ಕಡೆಯ ಜನರು ಕೋಮುಗಲಭೆ, ಹಿಂದೂ ಮುಸ್ಲಿಮ್ ಅಶಾಂತಿ …

Leave a Reply

Your email address will not be published. Required fields are marked *