Tuesday , July 23 2019
Breaking News
Home / ಕರಾವಳಿ / ಬಂಟ್ವಾಳ: ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ ಜಮಾಅತೆ ಇಸ್ಲಾಮೀ ಹಿಂದ್‌ ಸಮಾಜ ಸೇವಾ ಘಟಕ

ಬಂಟ್ವಾಳ: ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ ಜಮಾಅತೆ ಇಸ್ಲಾಮೀ ಹಿಂದ್‌ ಸಮಾಜ ಸೇವಾ ಘಟಕ

ಸಂದೇಶ ಇ-ಮ್ಯಾಗಝಿನ್: ಬಂಟ್ವಾಳ ತಾಲೂಕಿನ ಪುಂಚಮಿ ಸಮೀಪದ ಕಿನ್ನಿಗುಡ್ಡೆ ಎಂಬಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಪುಟ್ಟ ಮನೆಯೊಂದನ್ನು ಕಟ್ಟಲು ಆರಂಭಿಸಿದರೂ, ಆರ್ಥಿಕ ಅಡಚಣೆಯಿಂದಾಗಿ ಬರೀ ಗೋಡೆಯಲ್ಲೇ ಬಾಕಿಯಾಗಿ ಉಳಿದಿದ್ದ ಬಡ ಕುಟುಂಬವೊಂದರ ಪಾಳುಬಿದ್ದ ಮನೆಯನ್ನು, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ನಗರ ಶಾಖೆಯು, ದಾನಿಗಳ ನೆರವಿನಿಂದ ಕಾಮಗಾರಿಯನ್ನು ಮುಂದುವರಿಸಿ, ಮೂಲಭೂತ ಸವಲತ್ತುಗಳೊಂದಿಗೆ ಚೆಂದದ ಮನೆಯನ್ನು ಹಸ್ತಾಂತರಿಸಿದೆ. ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ನಗರ ಶಾಖೆಯ ಸದಸ್ಯರಾದ ಜ| ಸ‌ಈದ್‌ ಇಸ್ಮಾಈಲ್‌ರವರು ಉದ್ಘಾಟಿಸಿ ಸಂದರ್ಭೋಚಿತ ಹಿತನುಡಿಗಳನ್ನು ನೀಡಿ, ವಿವಿಧ ರೀತಿಯಲ್ಲಿ ನೆರವಾದ ಸರ್ವರಿಗೂ ಪ್ರಾರ್ಥಿಸಿದರು.

ಉದ್ಯಮಿ ಜ| ಮುಹಮ್ಮದ್ ಇಸ್‌ಹಾಕ್ ಫರಂಗಿಪೇಟೆ, ಎಡಪದವು ಜಮಾಅತೆ ಇಸ್ಲಾಮೀ ಹಿಂದ್‌ ಅಧ್ಯಕ್ಷರಾದ ಸುಲೈಮಾನ್‌ ಕಲ್ಲಾಡಿ ಮತ್ತು ಸಮಾಜ ಸೇವಾ ಘಟಕ ಮಂಗಳೂರು ಸದಸ್ಯರಾದ ಜ| ಅಬ್ದುಲ್ಲತೀಪ್‌ ಕೆ.ಕೆ. ಉಪಸ್ಥಿತರಿದ್ದರು. ಸಹಕರಿಸಿದ ಸರ್ವರಿಗೂ ಅಲ್ಲಾಹನು ತಕ್ಕ ಪ್ರತಿಫಲ ನೀಡಿ ಅನುಗ್ರಹಿಸಲಿ.

Social Service Unit, Jamaat-e- Islami Hind, Mangalore. 9945923640, 9535445101

Check Also

ಮಂಗಳೂರು: ಪ್ರವಾದಿ ಮುಹಮ್ಮದ್(ಸ)ರನ್ನು ನಿಂದಿಸಿದ ವ್ಯಕ್ತಿ ಖಾಝಿಯವರ ಮನೆಗೆ ತೆರಳಿ ಕ್ಷಮೆಯಾಚನೆ

009ಸಂದೇಶ ಇ-ಮ್ಯಾಗಝಿನ್: ಇಸ್ಲಾಮ್ ಧರ್ಮ ಹಾಗೂ ಪ್ರವಾದಿ ಮುಹಮ್ಮದ್(ಸ) ರನ್ನು ಅವಹೇಳನಕಾರಿಯಾದ ಶಬ್ದ ಬಳಸಿ ನಿಂದಿಸಿದ್ದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಝಿ …

Leave a Reply

Your email address will not be published. Required fields are marked *