Friday , May 24 2019
Breaking News
Home / ಕರಾವಳಿ / ಉಪ್ಪಿನಂಗಡಿ: ಹಿಂದೂ ಯುವತಿಯ ಬಾಳು ಬೆಳಗಿಸಿದ ಮುಸ್ಲಿಮರು

ಉಪ್ಪಿನಂಗಡಿ: ಹಿಂದೂ ಯುವತಿಯ ಬಾಳು ಬೆಳಗಿಸಿದ ಮುಸ್ಲಿಮರು

ಸಂದೇಶ ಇ-ಮ್ಯಾಗಝಿನ್: ಕೋಮು ಸೂಕ್ಷ್ಮ ಪ್ರದೇಶವೆಂದೇ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯಿಂದ ಇತ್ತೀಚೆಗೆ ಶಾಂತಿ ಸೌಹಾರ್ದತೆಯನ್ನು ಸಾರುವ ಘಟನೆಗಳು ಹೆಚ್ಚು ಹೆಚ್ಚು ವರದಿಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕರ್ವೇಲು ಎಂಬಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ರೇವತಿ ಎಂಬ ಬಡ ಯುವತಿಯ ಮದುವೆ ಶರತ್ ಎಂಬ ಯುವಕನ ಜೊತೆ ನಿಶ್ಚಯವಾಗಿತ್ತು. ಆದರೆ ರೇವತಿಯ ಪೋಷಕರು ತಮ್ಮ ಮಗಳ ಮದುವೆ ಮಾಡಿಕೊಡುವಷ್ಟು ಆರ್ಥಿಕವಾಗಿ ಸಬಲರಾಗಿರಲಿಲ್ಲ. ಈ ಸಂದರ್ಭದಲ್ಲಿ ಕುಟುಂಬದ ಕಷ್ಟಕ್ಕೆ ನೆರವಾದವರು ಪಕ್ಕದ ಮನೆಯ ಲತೀಫ್. ಲತೀಫ್ ಅವರು ಮದು ಮಗಳನ್ನು ತಮ್ಮ ಮನೆಯಲ್ಲೇ ಸಿಂಗರಿಸಿ ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಲು ಸಹಾಯ ಮಾಡಿದ್ದಾರೆ. ಇದರ ಜೊತೆಗೆ ಸುಮಾರು 150 ಮಂದಿಗೆ ಭೋಜನ ಕೂಟವನ್ನೂ ಏರ್ಪಾಡು ಮಾಡಿದ್ದಾರೆ.

ಮದುಮಗಳ ಮಂಗಳಸೂತ್ರ ಹಾಗೂ ವಧುವಿನ ಬಟ್ಟೆಯನ್ನು ಲತೀಫ್ ಮತ್ತು ಅವರ ಸ್ನೇಹಿತರಾದ ನಿಹಾ ಡ್ರೆಸ್‌ನ ಮಾಲಿಕ ಕೆ. ಅಬೂ ಬಕ್ಕರ್, ಶಬೀರ್, ಅಶ್ರಫ್ , ಕಬೀರ್, ಪುತ್ತುಮೋನು ಮತ್ತಿತರರು ಸೇರಿ ಭರಿಸಿದ್ದು, ಜಿಲ್ಲೆಯಲ್ಲಿ ಕ್ಷೀಣಿಸುತ್ತಿರುವ ಕೋಮು ಸೌಹಾರ್ದವನ್ನು ಮರಳಿ ಕಟ್ಟಲು ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ.

Check Also

ಬಂಟ್ವಾಳ: ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ ಜಮಾಅತೆ ಇಸ್ಲಾಮೀ ಹಿಂದ್‌ ಸಮಾಜ ಸೇವಾ ಘಟಕ

000ಸಂದೇಶ ಇ-ಮ್ಯಾಗಝಿನ್: ಬಂಟ್ವಾಳ ತಾಲೂಕಿನ ಪುಂಚಮಿ ಸಮೀಪದ ಕಿನ್ನಿಗುಡ್ಡೆ ಎಂಬಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಪುಟ್ಟ ಮನೆಯೊಂದನ್ನು ಕಟ್ಟಲು ಆರಂಭಿಸಿದರೂ, …

Leave a Reply

Your email address will not be published. Required fields are marked *